ಆ್ಯಪ್ನಗರ

ಗೆಲುವಿನ ಕ್ರೆಡಿಟ್‌ ಪಡೆದ ಲಸಿತ್ ಮಾಲಿಂಗ

ಮುಂಬಯಿ ಮತ್ತು ಬೆಂಗಳೂರು ನಡುವಣ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ ಲಸಿತ್ ಮಾಲಿಂಗ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Vijaya Karnataka Web 16 Apr 2019, 12:05 am
ಬೆಂಗಳೂರು: ಮುಂಬಯಿ ಮತ್ತು ಬೆಂಗಳೂರು ನಡುವಣ ಪಂದ್ಯದಲ್ಲಿ ಮುಂಬಯಿ ಬೆಂಗಳೂರು ತಂಡದ ವಿರುದ್ಧ ಐದು ವಿಕೆಟ್ ಜಯಗಳಿಸಿದೆ.
Vijaya Karnataka Web Lasith Malinga


ಸೋಮವಾರ ಮುಂಬಯಿಯ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪ್ರಸಕ್ತ ಸಾಲಿನ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬಯಿ ತಂಡ ಮೊದಲು ಬೌಲಿಂಗ್ ಆಯ್ದುಕೊಂಡಿತು.

ಇದರಿಂದಾಗಿ ಬೆಂಗಳೂರು ತಂಡ ಮೊದಲು ಬ್ಯಾಟಿಂಗ್ ನಡೆಸಬೇಕಾಯಿತು. ಬೆಂಗಳೂರು ತೀವ್ರ ಒತ್ತಡದಲ್ಲಿದ್ದು, ಅಂತೆಯೇ ನಿಗದಿತ 20 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 171 ರನ್ ಗಳಿಸಲು ಶಕ್ತವಾಯಿತು. ನಂತರದಲ್ಲಿ ಬೆಂಗಳೂರು ನೀಡಿದ ಸವಾಲಿನ ಮೊತ್ತವನ್ನು ಬೆನ್ನತ್ತಿದ್ದ ಮುಂಬಯಿ ತಂಡ, 19 ಓವರ್‌ನಲ್ಲಿ ಐದು ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿ ಗೆಲುವಿನ ನಗೆ ಬೀರಿತು.

ಮುಂಬಯಿ ಮತ್ತು ಬೆಂಗಳೂರು ನಡುವಣ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ ಲಸಿತ್ ಮಾಲಿಂಗ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಲಸಿತ್ ಮಾಲಿಂಗ ಆಟದಿಂದಾಗಿ ಮುಂಬಯಿ ಗೆಲುವಿನ ಸವಿ ಕಂಡಿತು.

ಲಸಿತ್‌ ಮಾಲಿಂಗರ ಮಾರಕ ದಾಳಿಗೆ ನಾಟಕೀಯ ಕುಸಿತ ಕಂಡ ಬೆಂಗಳೂರು ತಂಡ ಅಂತಿಮ ಓವರ್‌ನಲ್ಲಿ ಮೂರು ವಿಕೆಟ್‌ ಕಳೆದುಕೊಂಡಿತು. ಕೊನೆಯಲ್ಲಿ ಕೇವಲ 18 ರನ್‌ ಕಲೆಹಾಕುವುದರೊಳಗೆ ನಾಲ್ಕು ವಿಕೆಟ್‌ ಕಳೆದುಕೊಂಡ ಪರಿಣಾಮ ಬೆಂಗಳೂರು ತಂಡ 200ರ ಗಡಿ ತಲುಪಲು ವಿಫಲವಾಯಿತು. ಮುಂಬಯಿ ಪರ ಮಿಂಚಿನ ದಾಳಿ ಸಂಘಟಿಸಿದ ಶ್ರೀಲಂಕಾ ವೇಗಿ ಲಸಿತ್‌ ಮಾಲಿಂಗ 31 ರನ್‌ ನೀಡಿ 4 ವಿಕೆಟ್‌ ಕಬಳಿಸುವ ಮೂಲಕ ಪ್ರವಾಸಿ ತಂಡದ ಬೃಹತ್‌ ಮೊತ್ತಕ್ಕೆ ಕಡಿವಾಣ ಹಾಕಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌