ಆ್ಯಪ್ನಗರ

ವಿರುಷ್ಕಾಗೆ ಶುಭ ಹಾರೈಸಿದ ಇಬ್ಬರು ವಿಶೇಷ ವ್ಯಕ್ತಿಗಳು

ಕೊನೆಗೂ ಎಲ್ಲ ಊಹಾಪೋಹಾಗಳಿಗೆ ಅಂತ್ಯ ಹಾಡಿರುವ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರನ್ನು ಇಟಲಿಯಲ್ಲಿ ವಿವಾಹಿತರಾಗಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ 15 Dec 2017, 6:30 pm
ಹೊಸದಿಲ್ಲಿ: ಕೊನೆಗೂ ಎಲ್ಲ ಊಹಾಪೋಹಾಗಳಿಗೆ ಅಂತ್ಯ ಹಾಡಿರುವ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರನ್ನು ಇಟಲಿಯಲ್ಲಿ ವಿವಾಹಿತರಾಗಿದ್ದಾರೆ.
Vijaya Karnataka Web ab de villiers hopes rcb teammate kohli starts a family soon
ವಿರುಷ್ಕಾಗೆ ಶುಭ ಹಾರೈಸಿದ ಇಬ್ಬರು ವಿಶೇಷ ವ್ಯಕ್ತಿಗಳು


ದಾಂಪತ್ಯ ಜೀವನಕ್ಕೆ ಕಾಲಿರಿಸಿರುವ ವಿರುಷ್ಕಾ ಜೋಡಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ಆದರೆ ಈ ಇಬ್ಬರು ವಿಶೇಷ ವ್ಯಕ್ತಿಗಳ ಶುಭಾಶಯ ಸಂದೇಶದ ಹೊರತಾಗಿ ವಿರಾಟ್ ಮದುವೆ ಅಪೂರ್ಣವೆನಿಸಿದೆ.

ಅವರೇ ವಿರಾಟ್ ಹೃದಯಕ್ಕೆ ಹತ್ತಿರುವಾಗಿರುವ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಹ ಆಟಗಾರನಾಗಿರುವ ದಕ್ಷಿಣ ಆಫ್ರಿಕಾದ ಎಬಿಡಿ ವಿಲಿಯರ್ಸ್ ಮತ್ತು ಪಾಕಿಸ್ತಾನದ ಎಡಗೈ ವೇಗಿ ಮೊಹಮ್ಮದ್ ಆಮೀರ್.



ವಿರುಷ್ಕಾಗೆ ಅಭಿನಂದನೆ ಸಲ್ಲಿಸಿರುವ ವಿಲಿಯರ್ಸ್, 'ತಮಗಿದು ಸ್ವಲ್ಪ ಅಚ್ಚರಿಯನ್ನು ತಂದಿತ್ತು. ಆದರೆ ನೀನು ಯಾವತ್ತೂ ಅಚ್ಚರಿಗೊಳಿಸುತ್ತೀಯಾ ಎಂಬುದು ನನಗೆ ತಿಳಿದಿದೆ. ಹಾಗಾಗಿ ನನ್ನ ಉತ್ತಮ ಗೆಳೆಯ ವಿರಾಟ್ ಹಾಗೂ ಅನುಷ್ಕಾಗೆ ಶುಭಾಶಯ ತಿಳಿಸುತ್ತೇನೆ. ನೀವು ಜತೆಯಾಗಿ ಸಂತೋಷದ ಜೀವನ ನಡೆಸಲಿದ್ದೀರಿ ಎಂಬುದು ನನಗೆ ತಿಳಿದಿದ್ದು, ಅನೇಕ ಮಕ್ಕಳು ಬರಲಿದ್ದಾರೆ' ಎಂದು ಹಾರೈಸಿದ್ದಾರೆ.

ಅತ್ತ ವಿರಾಟ್ ಜತೆ ಉತ್ತಮ ಬಾಂಧವ್ಯ ಕಾಪಾಡಿಕೊಂಡಿರುವ ಪಾಕ್ ಕ್ರಿಕೆಟಿಗ ಮೊಹಮ್ಮದ್ ಆಮೀರ್ ಸಹ ವಿರುಷ್ಕಾ ಜೋಡಿಗೆ ವಿವಾಹ ಶುಭಾಶಯಗಳನ್ನು ತಿಳಿಸಿದ್ದಾರೆ. ವಿರಾಟ್ ಬಗ್ಗೆ ಸಂತೋಷವಿದೆ. ಜೀವನದಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಿರುವ ಅವರಿಗೆ ಶುಭಾಶಯ ತಿಳಿಸಿದ್ದೇನೆ ಎಂದಿದ್ದಾರೆ.

Congrats bro god bless u👍👍👍👍 — Mohammad Amir (@iamamirofficial) December 11, 2017 'ವಿರಾಟ್, ಕ್ರಿಕೆಟ್‌ನಲ್ಲಿ ತಮ್ಮ ಛಾಪನ್ನು ಹೇಗೆ ಮೂಡಿಸಿದರೋ ಹಾಗೆಯೇ ಉತ್ತಮ ಜೀವನವನ್ನು ಸರ್ವಶಕ್ತನಾದ ಅಲ್ಲಾಹು ದೇವರು ಅವರಿಗೆ ಕರುಣಿಸಲಿ. ಯಾವತ್ತೂ ಸಂತೋಷ ತುಂಬಿರಲಿ. ಎಲ್ಲ ದೃಷ್ಟಿದೋಷದಿಂದ ಅವರನ್ನು ರಕ್ಷಿಸಲಿ ಎಂದು ನಾನು ಪ್ರಾರ್ಥಿಸುತ್ತೇನೆ' ಎಂದು ಶುಭ ಹಾರೈಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌