ಆ್ಯಪ್ನಗರ

ವೃತ್ತಿ ಬದುಕಿನಲ್ಲಿ ಎದುರಾದ ಮೂವರು ಶ್ರೇಷ್ಠ ಕ್ರಿಕೆಟಿಗರನ್ನು ಹೆಸರಿಸಿದ ಎಬಿಡಿ

ಚೆಂಡನ್ನು ಸಿಕ್ಸರ್‌ ಮೂಲಕ ಕ್ರೀಡಾಂಗಣದ ಯಾವುದೇ ಮೂಲೆಗೆ ಅಟ್ಟುವ ಸಾಮರ್ಥ್ಯದ ಮೂಲಕವೇ ಮಿಸ್ಟರ್‌ 360 ಡಿಗ್ರಿ ಎನಿಸಿಕೊಂಡಿರುವ ದಕ್ಷಿಣ ಆಫ್ರಿಕಾ ತಂಡದ ಮಾಜಿ ಕ್ರಿಕೆಟಿಗ ಎಬಿ ಡಿ'ವಿಲಿಯರ್ಸ್‌, ತಮ್ಮ ವೃತ್ತಿ ಬದುಕಿನಲ್ಲಿ ಎದುರಾದ ಸರ್ವಶ್ರೇಷ್ಠ ಆಟಗಾರರ ಬಗ್ಗೆ ಮಾತನಾಡಿದ್ದಾರೆ.

Vijaya Karnataka Web 14 Jan 2020, 5:46 pm
ಅಡಿಲೇಡ್‌: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಎರಡು ವರ್ಷ ಹಿಂದೆಯೇ ನಿವೃತ್ತಿ ಘೋಷಿಸಿರುವ ದಕ್ಷಿಣ ಆಫ್ರಿಕಾದ ಸ್ಟಾರ್‌ ಪ್ಲೇಯರ್‌ ಎಬಿ ಡಿ'ವಿಲಿಯರ್ಸ್‌, ತಮ್ಮ 15 ವರ್ಷಗಳ ಸುದೀರ್ಘಾವಧಿಯ ಕ್ರಿಕೆಟ್‌ ವೃತ್ತಿ ಬದುಕಿನಲ್ಲಿ ಜೊತೆಯಾಗಿ ಆಡಿದ ಹಾಗೂ ಎದುರಾದ ಶ್ರೇಷ್ಠ ಆಟಗಾರರ ಕುರಿತಾಗಿ ಮಾತನಾಡಿದ್ದಾರೆ.
Vijaya Karnataka Web ab de villiers on virat kohli 2020


ದಕ್ಷಿಣ ಆಫ್ರಿಕಾ ತಂಡದ ಅತ್ಯಂತ ಯಶಸ್ವಿ ನಾಯಕ ಗ್ರೇಮ್‌ ಸ್ಮಿತ್‌ ಅವರಂತಹ ದಿಗ್ಗಜರ ಜೊತೆಗೆ ಆಡಿರುವುದಕ್ಕೆ ಹೆಮ್ಮೆ ಇರುವುದಾಗಿ ಹೇಳಿಕೊಂಡಿರುವ ಮಿಸ್ಟರ್‌ 360 ಡಿಗ್ರಿ ಖ್ಯಾತಿಯ ಆಟಗಾರ, ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್‌ ಸ್ಮಿತ್‌ ಮತ್ತು ಟೀಮ್‌ ಇಂಡಿಯಾ ಕ್ಯಾಪ್ಟನ್‌ ವಿರಾಟ್‌ ಕೊಹ್ಲಿ ತಾವು ಎದುರಾದ ಅತ್ಯಂತ ಬಲಿಷ್ಠ ಆಟಗಾರರು ಎಂದು ಹೆಸರಿಸಿದ್ದಾರೆ.

ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಪರ ಆಡುವ ಎಬಿ ಡಿ'ವಿಲಿಯರ್ಸ್‌, ತಂಡದ ನಾಯಕ ವಿರಾಟ್‌ ಕೊಹ್ಲಿ ಅವರೊಟ್ಟಿಗೆ ಡ್ರೆಸಿಂಗ್‌ ರೂಮ್‌ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಇಬ್ಬರ ನಡುವೆ ಉತ್ತಮ ಬಾಂಧವ್ಯವಿದೆ.

ಆಸ್ಟ್ರೇಲಿಯಾದ ಯಾವುದೇ ಸ್ಥಳದಲ್ಲಿ ಡೇ-ನೈಟ್‌ ಟೆಸ್ಟ್‌ ಆಡಲು ರೆಡಿ: ವಿರಾಟ್‌ ಕೊಹ್ಲಿ

"ಗ್ರೇಮ್‌ ಸ್ಮಿತ್‌ ತಮ್ಮ ಅದ್ಭುತ ತಂತ್ರಗಾರಿಕೆಗಳ ಮೂಲಕವೇ ಅದ್ಭುತವಾಗಿ ಕಾಣಿಸಿಕೊಳ್ಳುತ್ತಾರೆ. ಸ್ಮಿತ್‌ ಎನ್ನುವರಲ್ಲಿ ಏನೋ ವಿಭಿನ್ನತೆ ಇದೆ. ಸದಾ ತಂಡಕ್ಕಾಗಿ ಆಡಿದ ಆಟಗಾರ ಅವರು. ವಿರಾಟ್‌ ಕೊಹ್ಲಿ ಕೂಡ ಅಂಥದ್ದೇ ಸ್ವಭಾವದವರು," ಎಂದು ಕಿಂಗ್ ಕೊಹ್ಲಿ ಮತ್ತು ಗ್ರೇಮ್‌ ಸ್ಮಿತ್‌ ನಡುವೆ ಹೋಲಿಕೆ ಮಾಡಿದ್ದಾರೆ.

ಮಂಗಳವಾರ ಬಿಗ್‌ ಬ್ಯಾಷ್‌ ಲೀಗ್‌ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಎಬಿ ಡಿ'ವಿಲಿಯರ್ಸ್‌, ಅಡಿಲೇಡ್‌ ಸ್ಟ್ರೈಕರ್ಸ್‌ ಎದುರು ಬ್ರಿಸ್ಬೇನ್‌ ಹೀಟ್‌ ಪರವಾಗಿ 32 ಎಸೆತಗಳಲ್ಲಿ 40 ರನ್‌ ಸಿಡಸಿ ಗಮನ ಸೆಳೆದಿದ್ದರು. ಅದರಲ್ಲೂ ಎದುರಿಸಿದ ಮೊದಲ ಎಸೆತದಲ್ಲೇ ರಶೀದ್‌ ಖಾನ್‌ ಬೌಲಿಂಗ್‌ನಲ್ಲಿ ಕವರ್‌ ಡ್ರೈವ್‌ ಮೂಲಕ ಚೆಂಡನ್ನು ಬೌಂಡರಿ ಗೆರೆ ಮುಟ್ಟಿಸಿ ಬಿಬಿಎಲ್‌ಗೆ ಕಾಲಿಟ್ಟ ಸಂದೇಶ ರವಾನಿಸಿದ್ದರು.

ಟಾಮ್‌ ಕೂಪರ್‌ ಅದ್ಭುತ ಕ್ಯಾಚ್‌, ಬಿಬಿಎಲ್‌ನ ಆರ್‌ಸಿಬಿ ಖ್ಯಾತಿಯ ರೆನೆಗೇಡ್ಸ್‌ಗೆ ಸತತ 9ನೇ ಸೋಲು!

ಬಳಿಕ ಕ್ಷೇತ್ರ ರಕ್ಷಣೆಯಲ್ಲೂ ತಮ್ಮ ಕಮಾಲ್‌ ಪ್ರದರ್ಶಿಸಿದ ಎಬಿಡಿ, ಕವರ್ಸ್‌ ವಿಭಾಗದಲ್ಲ ಅದ್ಭುತ ಡೈವಿಂಗ್‌ ಕ್ಯಾಚ್‌ ಮೂಲಕ ಎದುರಾಳಿಯ ಬ್ಯಾಟ್ಸ್‌ಮನ್‌ ಜೊನಾಥನ್‌ ವೆಲ್ಸ್‌ (14) ವಿಕೆಟ್‌ ಪತನಕ್ಕೆ ಕಾರಣರಾದರು.

ಈ ಮಧ್ಯೆ ಇದೇ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ ಕಮ್‌ ಬ್ಯಾಕ್‌ ಮಾಡುವ ಬಯಕೆ ಇರುವುದಾಗಿಯೂ ಡಿ'ವಿಲಿಯರ್ಸ್‌ ಹೇಳಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌