ಆ್ಯಪ್ನಗರ

ಬಿಬಿಎಲ್‌ನಲ್ಲಿ ಮಿಂಚಿದ ಎಬಿ ಡಿ ವಿಲಿಯರ್ಸ್ ಟಿ20 ವಿಶ್ವಕಪ್‌ಗೆ ಕಮ್‌ಬ್ಯಾಕ್ ಸೂಚನೆ

ಬಿಗ್ ಬಾಷ್ ಲೀಗ್ ಟಿ20 ಟೂರ್ನಿಯ ಡೆಬ್ಯು ಪಂದ್ಯದಲ್ಲೇ ಮಿಂಚಿರುವ ದಕ್ಷಿಣ ಆಫ್ರಿಕಾದ ಎಬಿ ಡಿ ವಿಲಿಯರ್ಸ್ ಮುಂಬರುವ ಟಿ20 ವಿಶ್ವಕಪ್ ವೇಳೆಗೆ ನಿವೃತ್ತಿ ನಿರ್ಧಾರವನ್ನು ಬದಲಾಯಿಸಿ ಕಮ್ ಬ್ಯಾಕ್ ಮಾಡುವ ಸೂಚನೆ ನೀಡಿದ್ದಾರೆ.

Vijaya Karnataka Web 14 Jan 2020, 4:58 pm
ಬ್ರಿಸ್ಬೇನ್: ಬಿಗ್ ಬಾಷ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಮಿಸ್ಟರ್ 360 ಡಿಗ್ರಿ ಖ್ಯಾತಿಯ ಬ್ಯಾಟ್ಸ್‌ಮನ್ ದಕ್ಷಿಣ ಆಫ್ರಿಕಾದ ಎಬಿ ಡಿ ವಿಲಿಯರ್ಸ್ ಭರ್ಜರಿ ಪಾದಾರ್ಪಣೆ ಮಾಡಿದ್ದಾರೆ. ಬ್ರಿಸ್ಬೇನ್ ಹೀಟ್ ತಂಡವನ್ನು ಪ್ರತಿನಿಧಿಸುತ್ತಿರುವ ವಿಲಿಯರ್ಸ್ ವಿಲಿಯರ್ಸ್, ಚೊಚ್ಚಲ ಬಿಬಿಎಲ್ ಪಂದ್ಯದಲ್ಲೇ 40 ರನ್‌ಗಳ ಅಮೂಲ್ಯ ಇನ್ನಿಂಗ್ಸ್ ಕಟ್ಟಿದ್ದರು. ಈ ಮುನ್ನ ಫೀಲ್ಡಿಂಗ್‌ನಲ್ಲೂ ಅತ್ಯುತ್ತಮ ಕ್ಯಾಚ್ ಹಿಡಿಯುವ ಮೂಲಕ ಮಿಂಚಿನಾಟ ಪ್ರದರ್ಶನ ನೀಡಿದ್ದಾರೆ.
Vijaya Karnataka Web ಎಬಿ ಡಿ ವಿಲಿಯರ್ಸ್


ಇವೆಲ್ಲದರ ನಡುವೆ ಮುಂಬರುವ ಟ್ವೆಂಟಿ-20 ವಿಶ್ವಕಪ್ ವೇಳೆಗೆ ನಿವೃತ್ತಿ ನಿರ್ಧಾರವನ್ನು ಬದಲಾಯಿಸಿ ದಕ್ಷಿಣ ಆಫ್ರಿಕಾ ಟ್ವೆಂಟಿ-20 ತಂಡಕ್ಕೆ ಪುನರಾಗಮನ ಮಾಡುವ ಸೂಚನೆ ನೀಡಿರುವುದು ಹೆಚ್ಚು ಗಮನಾರ್ಹವೆನಿಸಿದೆ.

ಮೊದಲು ಬ್ಯಾಟಿಂಗ್ ನಡೆಸಿದ ಆಡಿಲೇಡ್ ಸ್ಟ್ರೈಕರ್ಸ್ ತಂಡವು 110 ರನ್‌ಗಳಿಗೆ ತನ್ನೆಲ್ಲ ವಿಕೆಟುಗಳನ್ನು ಕಳೆದುಕೊಂಡಿತು. ಬ್ರಿಸ್ಬೇನ್ ಹೀಟ್ ತಂಡದ ಪರ ಜೇಮ್ಸ್ ಪ್ಯಾಟಿನ್ಸನ್ ಕೇವಲ 33 ರನ್ ತೆತ್ತು ಐದು ವಿಕೆಟ್ ಕಿತ್ತು ಮಿಂಚಿದರು. ಬಳಿಕ ಸುಲಭ ಗುರಿ ಬೆನ್ನಟ್ಟಿದ ಬ್ರಿಸ್ಬೇನ್ ಹೀಟ್, ಮ್ಯಾಟ್ ರೆನ್‌ಶಾ ಅರ್ಧಶತಕ ಹಾಗೂ ವಿಲಿಯರ್ಸ್ ಉಪಯುಕ್ತ ಇನ್ನಿಂಗ್ಸ್ ನೆರವಿನಿಂದ 15.2 ಓವರ್‌ಗಳಲ್ಲೇ ಮೂರು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. 32 ಎಸೆತಗಳನ್ನು ಎದುರಿಸಿದ ವಿಲಿಯರ್ಸ್ ಐದು ಬೌಂಡರಿಗಳಿಂದ 40 ರನ್ ಗಳಿಸಿದರು.

ಹಾರ್ದಿಕ್‌ ಪಾಂಡ್ಯ ಜೊತೆಗಿನ ರೊಮ್ಯಾಂಟಿಕ್‌ ಫೋಟೊ ಹಂಚಿಕೊಂಡ ಭಾವಿ ಪತ್ನಿ!

ಬಿಗ್ ಬಾಗ್ ಬಾಷ್ ಲೀಗ್‌ನಲ್ಲಿ ವಿಲಿಯರ್ಸ್ ಆಡಿದ ಮೊದಲ ಪಂದ್ಯ ಇದಾಗಿತ್ತು. ಈ ಮಧ್ಯೆ ನಿವೃತ್ತಿಯಿಂದ ಹೊರಬಂದು ದಕ್ಷಿಣ ಆಫ್ರಿಕಾ ಪರ ಆಡಲು ಇಷ್ಟಪಡುತ್ತೇನೆ ಎಂದಿದ್ದಾರೆ. "ನಾನು ಈ ಬಗ್ಗೆ ದಕ್ಷಿಣ ಆಫ್ರಿಕಾ ಕೋಚ್ ಮಾರ್ಕ್ ಬೌಷರ್ ಜೊತೆಗೆ ಮಾತುಕತೆ ನಡೆಸಿದ್ದೇನೆ. ಹೊಸ ನಿರ್ದೇಶಕ ಗ್ರೇಮ್ ಸ್ಮಿತ್ ಹಾಗೂ ನಾಯಕ ಫಾಫ್ ಡು ಪ್ಲೆಸಿಸ್ ಎಲ್ಲರೂ ನನ್ನ ಪುನರಾಗಮನವನ್ನು ಬಯಸಿದ್ದಾರೆ. ಅದು ನಿಜವಾಗುವ ಮೊದಲು ಸಾಕಷ್ಟು ಅಂಶಗಳು ಘಟಿಸಬೇಕಿದೆ'' ಎಂದರು.

ಇತ್ತೀಚೆಗಷ್ಟೇ ಎಬಿ ಡಿ ವಿಲಿಯರ್ಸ್ ಕಮ್ ಬ್ಯಾಕ್ ಬಗ್ಗೆ ದಕ್ಷಿಣ ಆಫ್ರಿಕಾ ಕೋಚ್ ಮಾರ್ಕ್ ಬೌಷರ್ ಹಾಗೂ ನಾಯಕ ಫಾಫ್ ಡು ಪ್ಲೆಸಿಸ್ ಹೇಳಿಕೆ ಕೊಟ್ಟಿದ್ದರು. ಇದೀಗ ಸ್ವತ: ಎಬಿ ಡಿ ಅವರ ಮಾತುಗಳಿಂದಲೇ ಇದು ಸ್ಪಷ್ಟವಾಗಿದೆ. ಆದರೂ ಈ ಪ್ರಕ್ರಿಯೆ ಅಷ್ಟೊಂದು ಸುಲಭವಲ್ಲ ಎಂಬುದನ್ನು ಮನಗಂಡಿದ್ದಾರೆ.

ಟೀಮ್‌ ಇಂಡಿಯಾ ವಿರುದ್ಧ ಆಸ್ಟ್ರೇಲಿಯಾ ಗೆಲ್ಲಲಿದೆ: ಭವಿಷ್ಯ ನುಡಿದ ಪಂಟರ್‌!

2018ರಲ್ಲಿ ದಿಢೀರ್ ಆಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿಲಿಯರ್ಸ್ ನಿವೃತ್ತಿ ಸಲ್ಲಿಸಿದ್ದರು. ತದಾ ಬಳಿಕ 2019ರಲ್ಲಿ ನಡೆದ ಏಕದಿನ ವಿಶ್ವಕಪ್ ವೇಳೆ ಮರಳುವ ಇರಾದೆ ವ್ಯಕ್ತಪಡಿಸಿದ್ದರೂ ದಕ್ಷಿಣ ಆಫ್ರಿಕಾ ಟೀಮ್ ಮ್ಯಾನೇಜ್‌ಮೆಂಟ್ ಇದಕ್ಕೆ ಆಸ್ಪದ ನೀಡಿರಲಿಲ್ಲ. ಇದು ವಿವಾದಕ್ಕೆ ಕಾರಣವಾಗಿತ್ತು. ಒಟ್ಟಿನಲ್ಲಿ 35ರ ಹರೆಯದ ಎಬಿ ಡಿ ವಿಲಿಯರ್ಸ್ ದಕ್ಷಿಣ ಆಫ್ರಿಕಾ ಟಿ20 ತಂಡವನ್ನು ಸೇರಿದರೆ ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಆನೆ ಬಲ ಬಂದಂತಾಗಲಿದೆ.

ಎಬಿ ಡಿ ವಿಲಿಯರ್ಸ್ ಅತ್ಯುತ್ತಮ ಕ್ಯಾಚ್ ಭಂಗಿ ನೋಡಿ:

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌