ಆ್ಯಪ್ನಗರ

ಪಾಕ್ ಮಣಿಸಿದ ಅಪ್ಘಾನ್ ಏಷ್ಯಾ ಚಾಂಪಿಯನ್

ಕ್ರಿಕೆಟ್‌ ಜಗತ್ತಿನಲ್ಲಿ ಹೊಸ ತಾರೆಯ ಉದಯವಾಗಿದೆ. ಹೌದು, ಪಾಕಿಸ್ತಾನದಂತಹ ದಿಗ್ಗಜ ರಾಷ್ಟ್ರಗಳನ್ನೇ ಮಣಿಸಿರುವ ಅಪಘಾನಿಸ್ತಾನ, ಏಷ್ಯಾ ಕಪ್ ಅಂಡರ್-19 ಚಾಂಪಿಯನ್‌ಶಿಪ್ಸ್ ಪ್ರಶಸ್ತಿ ಗೆದ್ದುಕೊಂಡಿದೆ.

ಟೈಮ್ಸ್ ಆಫ್ ಇಂಡಿಯಾ 19 Nov 2017, 8:58 pm
ಹೊಸದಿಲ್ಲಿ: ಕ್ರಿಕೆಟ್‌ ಜಗತ್ತಿನಲ್ಲಿ ಹೊಸ ತಾರೆಯ ಉದಯವಾಗಿದೆ. ಹೌದು, ಪಾಕಿಸ್ತಾನದಂತಹ ದಿಗ್ಗಜ ರಾಷ್ಟ್ರಗಳನ್ನೇ ಮಣಿಸಿರುವ ಅಪಘಾನಿಸ್ತಾನ, ಏಷ್ಯಾ ಕಪ್ ಅಂಡರ್-19 ಚಾಂಪಿಯನ್‌ಶಿಪ್ಸ್ ಪ್ರಶಸ್ತಿ ಗೆದ್ದುಕೊಂಡಿದೆ.
Vijaya Karnataka Web afghanistan stun pakistan by 185 runs to clinch under 19 asia cup
ಪಾಕ್ ಮಣಿಸಿದ ಅಪ್ಘಾನ್ ಏಷ್ಯಾ ಚಾಂಪಿಯನ್


ಇಕ್ರಂ ಅಲಿ ಅವರ ಅಜೇಯ ಶತಕದ (107*) ನೆರವಿನೊಂದಿಗೆ ಅಪಘಾನಿಸ್ತಾನ ಏಳು ವಿಕೆಟ್ ನಷ್ಟಕ್ಕೆ 248 ರನ್‌ಗಳ ಸ್ಪರ್ಧಾತ್ಮ ಮೊತ್ತ ಪೇರಿಸಿತ್ತು. ಬಳಿಕ ಪಾಕಿಸ್ತಾನ ತಂಡವನ್ನು 22.1 ಓವರ್‌ಗಳಲ್ಲಿ 63 ರನ್‌ಗಳಿಗೆ ಆಲೌಟ್ ಮಾಡುವ ಮೂಲಕ 185 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿತ್ತು.

ಘಾತಕ ಬೌಲಿಂಗ್ ದಾಳಿ ಸಂಘಟಿಸಿದ ಮುಜೀಬ್ ಜಾಡ್ರನ್ (13/5) ಐದು ವಿಕೆಟ್ ಕಿತ್ತು ಪಾಕಿಸ್ತಾನ ತಂಡದ ಬೆನ್ನಲುಬನ್ನು ಮುರಿದರು. ಇದಕ್ಕೂ ಮೊದಲು ಲೀಗ್ ಹಂತದ ಪಂದ್ಯದಲ್ಲೂ ಆರು ವಿಕೆಟ್ (23/6) ಪಡೆದಿದ್ದ ಮುಜೀಬ್ ಅಪ್ಘಾನ್ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.

ಈ ಮೂಲಕ ತಾವು ಆಡಿರುವ ಐದು ಪಂದ್ಯಗಳಲ್ಲಾಗಿ 20 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಟೂರ್ನಿಯುದ್ಧಕ್ಕೂ ಅಮೋಘ ಪ್ರದರ್ಶನ ನೀಡಿದ್ದರು.

ಕಳೆದ ಮೂರು ಆವೃತ್ತಿಗಳಲ್ಲೂ ಸೆಮಿಫೈನಲ್ ಹಂತದಲ್ಲೇ ಅಫಘಾನಿಸ್ತಾನ ಮುಗ್ಗರಿಸಿತ್ತು. ಆದರೆ ಈ ಬಾರಿ ಟ್ರೋಫಿ ಗೆಲ್ಲುವ ಮೂಲಕ ವಿಶ್ವ ಕ್ರಿಕೆಟ್‌ನಲ್ಲಿ ತನ್ನ ಛಾಪು ಒತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌