ಆ್ಯಪ್ನಗರ

ಬಾಲ್ ಟ್ಯಾಂಪರಿಂಗ್; ಪಾಕ್ ಆಟಗಾರ ಅಹ್ಮದ್ ಶೆಹಜಾದ್‌ಗೆ ದಂಡ

ಪಾಕಿಸ್ತಾನ ದೇಶೀಯ ಕ್ರಿಕೆಟ್ ಟೂರ್ನಿ ಕ್ವಾಯಿದ್ ಇ ಅಜಾಮ್ ಟ್ರೋಫಿಯಲ್ಲಿ ಬಾಲ್ ಟ್ಯಾಂಪರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಂಟ್ರಲ್ ಪಂಜಾಬ್ ನಾಯಕ ಅಹ್ಮದ್ ಶೆಹಜಾದ್ ಮೇಲೆ ಪಂದ್ಯ ಶುಲ್ಕದ ಶೇ. 50ರಷ್ಟು ದಂಡ ವಿಧಿಸಲಾಗಿದೆ.

Vijaya Karnataka Web 2 Nov 2019, 1:16 pm
ಕರಾಚಿ: ಬಾಲ್ ಟ್ಯಾಂಪರಿಂಗ್ ಪ್ರಕರಣದಲ್ಲಿ ಸಿಕಿಬಿದ್ದಿರುವ ಪಾಕಿಸ್ತಾನದ ಬಲಗೈ ಆರಂಭಿಕ ಬ್ಯಾಟ್ಸ್‌ಮನ್ ಅಹ್ಮದ್ ಶೆಹಜಾದ್ ಮೇಲೆ ಪಂದ್ಯ ಶುಲ್ಕದ ಶೇಕಡಾ 50ರಷ್ಟು ದಂಡ ವಿಧಿಸಲಾಗಿದೆ.
Vijaya Karnataka Web ahmed-sehzad-01


ಈ ಬಗ್ಗೆ ತನಿಖೆ ನಡೆಸಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ತೀರ್ಪು ಹೊರಡಿಸಿದೆ. ದೇಶೀಯ ಕ್ರಿಕೆಟ್ ಟೂರ್ನಿ ಕ್ವಾಯಿದ್ ಇ ಅಜಾಮ್ ಟ್ರೋಫಿಯಲ್ಲಿ ಶೆಹಜಾದ್ ಮುಂದಾಳತ್ವದ ಸೆಂಟ್ರಲ್ ಪಂಜಾಬ್ ತಂಡವು ಚೆಂಡನ್ನು ವಿರೂಪಗೊಳಿಸಿರುವುದು ಖಚಿತಗೊಂಡಿದೆ. ಈ ಹಿನ್ನಲೆಯಲ್ಲಿ ಕ್ರಮ ಕೈಗೊಳ್ಳಲಿದೆ.

ಮಗದೊಂದು ವಿವಾದದ ಸುಳಿಯಿಂದ ಸ್ಟೀವ್ ಸ್ಮಿತ್ ಸ್ವಲ್ಪದರಲ್ಲೇ ಪಾರು!

ಫೈಸಲಾಬಾದ್‌ನಲ್ಲಿ ಸಿಂಧ್ ವಿರುದ್ಧ ನಡೆದ ಪಂದ್ಯದಲ್ಲಿ ಲೆವೆಲ್ 1 ನಿಮಯವನ್ನು (ಆರ್ಟಿಕಲ್ 2.14) ಉಲ್ಲಂಘಿಸಿರುವುದು ಕಂಡುಬಂದಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಸಿಂಧ್ ಬ್ಯಾಟಿಂಗ್ ಮಾಡುತ್ತಿರುವಾಗ 17ನೇ ಓವರ್‌ನಲ್ಲಿ ಘಟನೆ ನಡೆದಿತ್ತು.

ಆನ್ ಫೀಲ್ಡ್ ಅಂಪೈರ್‌ಗಳಾದ ಮೊಹಮ್ಮದ್ ಆಸಿಫ್ ಹಾಗೂ ಜಮೀರ್ ಅಹ್ಮದ್ ಮ್ಯಾಚ್ ರೆಫರಿಯಲ್ಲಿ ದೂರು ದಾಖಲಿಸಿದ್ದರು. ಪಂದ್ಯದಲ್ಲಿ ಭಾಗವಹಿಸಿದ ಸೆಂಟ್ರಲ್ ಪಂಜಾಬ್ ತಂಡದ ಕೆಲವು ಆಟಗಾರರು ಚೆಂಡನ್ನು ವಿರೂಪಗೊಳಿಸಲು ಯತ್ನಿಸಿರುವುದು ವಿಚಾರಣೆ ವೇಳೆಯಲ್ಲಿ ಸ್ಪಷ್ಟವಾಗಿದೆ. ಈ ಬಗ್ಗೆ ಎದುರಾಳಿ ತಂಡದ ಸಿಂಧ್ ತಂಡದ ನಾಯಕ ಸರ್ಫರಾಜ್ ಅಹ್ಮದ್ ಸಹ ಅಂಪೈರ್ ಗಮನಕ್ಕೆ ತಂದಿದ್ದರು.

ಆಸೀಸ್‌ನಿಂದ ಲಂಕಾ ದಹನ; ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಡೇವಿಡ್ ವಾರ್ನರ್

ಪಾಕಿಸ್ತಾನ ಕ್ರಿಕೆಟ್ ತಂಡವು ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿರುವ ಹಂತದಲ್ಲೇ ಈ ಘಟನೆ ನಡೆದಿದೆ. ಬಳಿಕ ಸ್ಪಷ್ಟನೆ ನೀಡಿರುವ ಶೆಹಜಾದ್, ಪಂದ್ಯಕ್ಕೆ ಅಗೌರವ ತೋರುವ ಯಾವುದೇ ಪ್ರಯತ್ನವನ್ನು ತಾವು ಅಥವಾ ತಮ್ಮ ತಂಡದ ಆಟಗಾರರು ಮಾಡಿಲ್ಲ. ಚೆಂಡಿನ ಸ್ಥಿತಿಯನ್ನು ಬದಲಾಯಿಸಲು ಯತ್ನಿಸಿಲ್ಲ. ನೈಸರ್ಗಿಕವಾಗಿ ಚೆಂಡು ವಿರೂಪಗೊಂಡಿದೆ ಎಂದು ಹೇಳಿದ್ದಾರೆ. ತಮ್ಮ ಮಾತು ಮುಂದುವರಿಸಿದ ಶೆಹಜಾದ್, ತೀರ್ಪನ್ನು ಒಪ್ಪಲು ಹಾಗೂ ಗೌರವಿಸಲು ಒತ್ತಾಯಿಸಲಾಗಿದೆ ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌