ಆ್ಯಪ್ನಗರ

ಹಲವು ಪ್ರಥಮಗಳಿಗೆ ಸಾಕ್ಷಿಯಾಗಿರುವ 'ಈಡನ್ ಗಾರ್ಡನ್' ಮೈದಾನದ ಬಗ್ಗೆ ನಿಮಗೆಷ್ಟು ಗೊತ್ತು?

ಭಾರತದ ಮೊಟ್ಟ ಮೊದಲ ಡೇ-ನೈಟ್ ಟೆಸ್ಟ್ ಪಂದ್ಯಕ್ಕೆ ಕೋಲ್ಕೊತಾದ ಈಡನ್ ಗಾರ್ಡನ್ ಮೈದಾನ ಆತಿಥ್ಯ ವಹಿಸುತ್ತಿದೆ. ಈಗಾಗಲೇ ಹಲವು ಪ್ರಥಮಗಳಿಗೆ ಸಾಕ್ಷಿಯಾಗಿರುವ ಈಡನ್ ಗಾರ್ಡನ್ ಮಗದೊಂದು ಐತಿಹಾಸಿಕ ಕ್ಷಣಕ್ಕೆ ವೇದಿಕೆಯೊದಗಿಸುತ್ತಿದೆ.

Vijaya Karnataka Web 30 Oct 2019, 5:14 pm
ಹೊಸದಿಲ್ಲಿ: ಇದೇ ಮೊದಲ ಬಾರಿಗೆ ಹೊನಲು ಬೆಳಕಿನ ಟೆಸ್ಟ್ ಕ್ರಿಕೆಟ್ ಪಂದ್ಯಾಟಕ್ಕೆ ಭಾರತ ಆತಿಥ್ಯ ವಹಿಸುತ್ತಿದೆ. ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮಾಜಿ ನಾಯಕ ಸೌರವ್ ಗಂಗೂಲಿ, ಗುಲಾಬಿ ಚೆಂಡಿನ ಟೆಸ್ಟ್ ಆಯೋಜನೆಯಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ.

ಇದರೊಂದಿಗೆ ನವೆಂಬರ್ 22ರಿಂದ 26ರ ವರೆಗೆ ಭಾರತ ಹಾಗೂ ಬಾಂಗ್ಲಾದೇಶ ನಡುವಣ ಪಂದ್ಯವು ಇತಿಹಾಸದ ಪುಟ ಸೇರಲಿದೆ. ಈ ಐತಿಹಾಸಿಕ ಕ್ಷಣಕ್ಕೆ ಭಾರತೀಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಬಂಗಳಾ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಾಕ್ಷಿಯಾಗುವ ಸಾಧ್ಯತೆಯಿದೆ.

ಅಂದ ಹಾಗೆ ಐತಿಹಾಸಿಕ ಕೋಲ್ಕೊತಾದ ಈಡನ್ ಗಾರ್ಡನ್ ಮೈದಾನ ಹಲವಾರು ಪ್ರಥಮಗಳಿಗೆ ಈಗಾಗಲೇ ಸಾಕ್ಷ್ಯ ವಹಿಸಿದೆ. ಈ ಬಗ್ಗೆ ವಿವರಣೆ ಕೊಡಲಾಗಿದೆ.

ಚೊಚ್ಚಲ ಡೇ-ನೈಟ್ ಟೆಸ್ಟ್ ವೀಕ್ಷಣೆ ಭಾರಿ ಅಗ್ಗ; ಟಿಕೆಟ್ ಬೆಲೆ ಬರಿ 50 ರೂ.!

ಭಾರತದ ಅತಿ ದೊಡ್ಡ ಸ್ಟೇಡಿಯಂ:
ದೇಶದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಎಂಬ ಹಿರಿಮೆಗೆ ಈಡನ್ ಗಾರ್ಡನ್ ಪಾತ್ರವಾಗಿದೆ. ಹಾಗೆಯೇ ಇಡೀ ವಿಶ್ವದಲ್ಲೇ ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ (ಎಂಸಿಬಿ) ಬಳಿಕದ ಎರಡನೇ ಅತಿ ದೊಡ್ಡ ಸ್ಟೇಡಿಯಂ ಗೌರವ ಈಡನ್‌ಗೆ ಸಲ್ಲುತ್ತದೆ. ಪ್ರಸ್ತುತ ಈಡನ್ ಗಾರ್ಡನ್ 68,000 ಪ್ರೇಕ್ಷಕರ ಸಾಮರ್ಥ್ಯ ಹೊಂದಿದೆ.

ಮೊದಲ ಟೆಸ್ಟ್ ಪಂದ್ಯ:
1934ನೇ ಇಸವಿಯಲ್ಲಿ ಈಡನ್ ಗಾರ್ಡನ್ ಮೈದಾನದಲ್ಲಿ ಭಾರತ ಹಾಗೂ ಇಂಗ್ಲೆಂಡ್ ನಡುವೆ ಮೊದಲ ಟೆಸ್ಟ್ ಪಂದ್ಯ ಆಯೋಜನೆಯಾಗಿತ್ತು. ಇದೀಗ 85 ವರ್ಷಗಳ ಬಳಿಕ ದೇಶದ ಮೊಟ್ಟ ಮೊದಲ ಅಹರ್ನಿಶಿ ಪಂದ್ಯಕ್ಕೆ ಆತಿಥ್ಯ ವಹಿಸುತ್ತಿದೆ.

ಬಿಸಿಸಿಐ ಅಧ್ಯಕ್ಷ ಗಾದಿಗೇರಿದ ಒಂದು ವಾರದಲ್ಲೇ ಭಾರತೀಯ ಕ್ರಿಕೆಟ್ ಇತಿಹಾಸ ಬದಲಾಯಿಸಿದ ದಾದಾ

ವಿಶ್ವಕಪ್ ಫೈನಲ್:
ಇಂಗ್ಲೆಂಡ್ ಹೊರತಾಗಿ ಮೊದಲ ಬಾರಿಗೆ ಏಕದಿನ ವಿಶ್ವಕಪ್ ಫೈನಲ್ ಆಯೋಜಿಸಿದ ಕೀರ್ತಿಗೂ ಈಡನ್ ಗಾರ್ಡನ್ ಪಾತ್ರವಾಗಿದೆ. 1975ನೇ ಇಸವಿಯಲ್ಲಿ ಪರಿಚಯವಾದ ಏಕದಿನ ವಿಶ್ವಕಪ್‌ನ ಮೊದಲ ಮೂರು ಆವೃತ್ತಿಯ ಫೈನಲ್‌ಗಳು ಇಂಗ್ಲೆಂಡ್‌ನಲ್ಲಿ ಆಯೋಜನೆಯಾಗಿದ್ದವು.


1987ರಲ್ಲಿ ಭಾರತ ಹಾಗೂ ಪಾಕಿಸ್ತಾನ ಜಂಟಿಯಾಗಿ ವಿಶ್ವಕಪ್‌ಗೆ ಆತಿಥ್ಯ ವಹಿಸಿತ್ತು. ಅಂದು ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಣ ಫೈನಲ್ ಪಂದ್ಯವು ಈಡನ್ ಗಾರ್ಡನ್‌ನಲ್ಲಿ ನಡೆದಿತ್ತು.

ವಾಯು ಮಾಲಿನ್ಯ; ಮೊದಲ ಟ್ವೆಂಟಿ-20 ಪಂದ್ಯ ದಿಲ್ಲಿಯಿಂದ ಶಿಫ್ಟ್?

ಏಷ್ಯನ್ ಟೆಸ್ಟ್ ಚಾಂಪಿಯನ್‌ಶಿಪ್:
1999ನೇ ಇಸವಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಣ ಮೊಟ್ಟ ಮೊದಲ ಏಷ್ಯನ್ ಟೆಸ್ಟ್ ಚಾಂಪಿಯನ್‌ಗೂ ಈಡನ್ ಗಾರ್ಡನ್ ಆತಿಥ್ಯ ವಹಿಸಿತ್ತು.

ಅತಿ ಪುರಾತನ ಸ್ಟೇಡಿಯಂ:
ಭಾರತದ ಅತಿ ಪುರಾತನ ಕ್ರಿಕೆಟ್ ಸ್ಟೇಡಿಯಂ ಆಗಿರುವ ಈಡನ್ ಗಾರ್ಡನ್ 1864ನೇ ಇಸವಿಯಲ್ಲಿ ಸ್ಥಾಪಿತವಾಗಿತ್ತು. ಪ್ರಸ್ತುತ ಬಂಗಾಳ ಕ್ರಿಕೆಟ್ ಸಂಸ್ಥೆಯ ಕೇಂದ್ರ ಕಚೇರಿಯಾಗಿ ಕಾರ್ಯ ನಿರ್ವಹಿಸುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌