ಆ್ಯಪ್ನಗರ

ಭವಿಷ್ಯದಲ್ಲೂ ಆಸಿಸ್‌ ಪರ ವಾರ್ನರ್ ಅಲಭ್ಯ

ಚೆಂಡು ವಿರುಪಗೊಳಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿರುವ ಆಸ್ಟ್ರೇಲಿಯಾ ತಂಡದ ಮಾಜಿ ಉಪನಾಯಕ ಡೇವಿಡ್ ವಾರ್ನರ್, 12 ತಿಂಗಳ ನಿಷೇಧದ ಬಳಿಕವೂ ಆಸೀಸ್ ಪರ ಆಡುವುದು ಅನುಮಾನ ಎಂದು ಹೇಳಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

TIMESOFINDIA.COM 31 Mar 2018, 1:13 pm
ಸಿಡ್ನಿ: ಚೆಂಡು ವಿರುಪಗೊಳಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿರುವ ಆಸ್ಟ್ರೇಲಿಯಾ ತಂಡದ ಮಾಜಿ ಉಪನಾಯಕ ಡೇವಿಡ್ ವಾರ್ನರ್, 12 ತಿಂಗಳ ನಿಷೇಧದ ಬಳಿಕವೂ ಆಸೀಸ್ ಪರ ಆಡುವುದು ಅನುಮಾನ ಎಂದು ಹೇಳಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
Vijaya Karnataka Web apologetic david warner resigned to never playing for australia again
ಭವಿಷ್ಯದಲ್ಲೂ ಆಸಿಸ್‌ ಪರ ವಾರ್ನರ್ ಅಲಭ್ಯ


ಬಾಲ್ ಟ್ಯಾಂಪರಿಂಗ್ ಆರೋಪದಡಿ ಸಿಲುಕಿ 1 ವರ್ಷಗಳ ಕಾಲ ನಿಷೇಧಕ್ಕೊಳಗಾಗಿರುವ ವಾರ್ನರ್, ಸುದ್ದಿಗೋಷ್ಠಿಯಲ್ಲಿ ಕಣ್ಣೀರಿಟ್ಟಿದ್ದಾರೆ. ಮುಂದೊಂದು ದಿನ ದೇಶಕ್ಕಾಗಿ ಆಡುತ್ತೇನೆ ಎಂಬ ಸಣ್ಣ ನಂಬಿಕೆ ಇದೆ. ಆದರೆ, ಅಂತಹ ಸಾಧ್ಯತೆಗೆ ಈಗಾಗಲೇ ನಾನು ರಾಜೀನಾಮೆ ನೀಡಿದ್ದೇನೆ. ಈ ನಿರ್ಧಾರವು ತನ್ನ ಕುಟುಂಬದ ಘನತೆಯನ್ನು ಎತ್ತಿ ಹಿಡಿಯುತ್ತದೆ ಎಂದು ಸಿಡ್ನಿ ಕ್ರಿಕೆಟ್‌ ಮೈದಾನದಲ್ಲಿ ಮಾಧ್ಯಮದ ಮುಂದೆ ತಿಳಿಸಿದ್ದಾರೆ.

ಮುಂದಿನ ವಾರ ಮತ್ತು ತಿಂಗಳುಗಳಲ್ಲಿ ಈ ತಪ್ಪು ಹೇಗೆ ಸಾಧ್ಯವಾಯಿತು ಎಂಬುದನ್ನು ತಿಳಿದುಕೊಳ್ಳುತ್ತೇನೆ. ನನ್ನಲ್ಲಿ ಗಂಭೀರ ಬದಲಾವಣೆಗಳನ್ನು ತಂದುಕೊಳ್ಳಲು ತಜ್ಞರಿಂದ ಸಲಹೆ ಪಡೆಯುತ್ತೇನೆ ಎಂದು ವಾರ್ನರ್‌ ತಿಳಿಸಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ತೃತೀಯ ಟೆಸ್ಟ್‌ ಪಂದ್ಯದಲ್ಲಿ ಕ್ಯಾಮರಾನ್‌ ಬ್ರಾಂಕ್ರಾಫ್ಟ್‌ ಬಾಲ್‌ ಟ್ಯಾಂಪರಿಂಗ್‌ ನಡೆಸಿದ್ದರು. ಚೆಂಡನ್ನು ವಿರೂಪಗೊಳಿಸಲು ಆಸ್ಪ್ರೇಲಿಯಾ ತಂಡ ವ್ಯವಸ್ಥಿತವಾಗಿ ತಂತ್ರ ರೂಪಿಸಿತ್ತು ಎಂಬ ಆಘಾತಕಾರಿ ಸಂಗತಿಯನ್ನು ನಾಯಕ ಸ್ಟೀವನ್‌ ಸ್ಮಿತ್‌ ಒಪ್ಪಿಕೊಂಡಿದ್ದರು.

ಇದಾದ ನಂತರ ತನಿಖೆಯನ್ನು ನಡೆಸಿದ ಕ್ರಿಕೆಟ್ ಆಸ್ಟ್ರೇಲಿಯಾ ಬಾಲ್‌ ಟ್ಯಾಂಪರಿಂಗ್‌ ಪ್ರಕರಣದಲ್ಲಿ ಆಸ್ಪ್ರೇಲಿಯಾ ತಂಡದ ಮಾಜಿ ನಾಯಕ ಸ್ಟೀವನ್‌ ಸ್ಮಿತ್‌ ಮತ್ತು ಮಾಜಿ ಉಪನಾಯಕ ಡೇವಿಡ್‌ ವಾರ್ನರ್‌ ಅವರಿಗೆ 12 ತಿಂಗಳುಗಳ ನಿಷೇಧ ಹಾಗೂ ಕ್ಯಾಮರಾನ್ ಬೆನ್‌ಕ್ರಾಫ್ಟ್‌ಗೆ ಒಂಬತ್ತು ತಿಂಗಳುಗಳ ನಿಷೇಧದ ಶಿಕ್ಷೆ ವಿಧಿಸಿತ್ತು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌