ಆ್ಯಪ್ನಗರ

Arjun Tendulkar: ಅರ್ಜುನ್‌ ತೆಂಡೂಲ್ಕರ್‌ 'ಲವ್‌ ಲಂಚ್‌!

ಇತ್ತೀಚೆಗಷ್ಟೇ ಭಾರತದ 19 ವಯೋಮಿತಿ ಕ್ರಿಕೆಟ್‌ ತಂಡಕ್ಕೆ ಸೇರ್ಪಡೆಯಾಗಿ ಸುದ್ದಿ ಮಾಡಿದ್ದ ಸಚಿನ್‌ ತೆಂಡೂಲ್ಕರ್‌ ಅವರ ಪುತ್ರ ಅರ್ಜುನ್‌ ತೆಂಡೂಲ್ಕರ್‌ ಇದೀಗ ಮತ್ತೊಮ್ಮೆ ಜಗದಗಲ ಸುದ್ದಿಯಾಗಿದ್ದಾರೆ. ಈ ಬಾರಿ ಸುದ್ದಿಯಾಗಿದ್ದು ಕ್ರಿಕೆಟ್‌ ಆಡಿದ್ದಕ್ಕಾಗಿ ಅಲ್ಲ. ಇಂಗ್ಲೆಂಡ್‌ ತಂಡದ ಆಟಗಾರ್ತಿ ಡೇನಿಯೆಲ್‌ ವ್ಯಾಟ್‌ ಜತೆ ಇಂಗ್ಲೆಂಡ್‌ನಲ್ಲಿ ಭೋಜನ ಕೂಟದಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ.

Vijaya Karnataka 8 Aug 2018, 11:50 am
ಮುಂಬಯಿ: ಇತ್ತೀಚೆಗಷ್ಟೇ ಭಾರತದ 19 ವಯೋಮಿತಿ ಕ್ರಿಕೆಟ್‌ ತಂಡಕ್ಕೆ ಸೇರ್ಪಡೆಯಾಗಿ ಸುದ್ದಿ ಮಾಡಿದ್ದ ಸಚಿನ್‌ ತೆಂಡೂಲ್ಕರ್‌ ಅವರ ಪುತ್ರ ಅರ್ಜುನ್‌ ತೆಂಡೂಲ್ಕರ್‌ ಇದೀಗ ಮತ್ತೊಮ್ಮೆ ಜಗದಗಲ ಸುದ್ದಿಯಾಗಿದ್ದಾರೆ. ಈ ಬಾರಿ ಸುದ್ದಿಯಾಗಿದ್ದು ಕ್ರಿಕೆಟ್‌ ಆಡಿದ್ದಕ್ಕಾಗಿ ಅಲ್ಲ. ಇಂಗ್ಲೆಂಡ್‌ ತಂಡದ ಆಟಗಾರ್ತಿ ಡೇನಿಯೆಲ್‌ ವ್ಯಾಟ್‌ ಜತೆ ಇಂಗ್ಲೆಂಡ್‌ನಲ್ಲಿ ಭೋಜನ ಕೂಟದಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ.
Vijaya Karnataka Web arjun tendulkar


ಇದನ್ನು ಸುದ್ದಿ ಮಾಡಿದ್ದು ಕೂಡ ಸ್ವತಃ ಅವರೇ. ಡೇನಿಯೆಲ್‌ ವ್ಯಾಟ್‌ ಜತೆ ಊಟ ಮಾಡುತಿದ್ದ ಫೋಟೊವನ್ನು ಅರ್ಜುನ್‌ ತೆಂಡೂಲ್ಕರ್‌ ತಮ್ಮ ಇನ್‌ಸ್ಟಾಗ್ರಾಮ್‌ ಪೇಜ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಅದಕ್ಕೆ ‘‘Nandoswith@dannywyatt28,’’ ಎಂಬ ಶೀರ್ಷಿಕೆ ಬೇರೆ ಕೊಟ್ಟಿದ್ದಾರೆ.
ಅಂದಹಾಗೆ ಡೇನಿಯೆಲ್‌ ವ್ಯಾಟ್‌ ಭಾರತೀಯ ಕ್ರಿಕೆಟಿಗರ ಹಿಂದೆ ಬಿದ್ದಿರುವುದು ಇದೇ ಮೊದಲಲ್ಲ. ಅರ್ಜುನ್‌ ತೆಂಡೂಲ್ಕರ್‌ ಜತೆ ಕಾಣಿಸಿಕೊಳ್ಳುವುದಕ್ಕೂ ಮೊದಲು ಆಕೆ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿಗೆ ಟ್ವಿಟರ್‌ನಲ್ಲಿ ಪ್ರಪೊಸ್‌ ಮಾಡಿದ್ದಳು. ಆದರೆ, ಅದಕ್ಕೆ ಕೊಹ್ಲಿ ಪ್ರತಿಕ್ರಿಯೆಸಿರಲಿಲ್ಲ.
ಅದಾದ ಬಳಿಕ ಇಂಗ್ಲೆಂಡ್‌ ಆಟಗಾರ್ತಿ ಸಚಿನ್‌ ಪುತ್ರನ ಹಿಂದೆ ಬಿದ್ದಿದ್ದಾರೆ. ಅರ್ಜುನ್‌ 19 ವಯೋಮಿತಿ ಭಾರತ ತಂಡಕ್ಕೆ ಸೇರ್ಪಡೆಗೊಂಡಿದ್ದಕ್ಕೆ ಆಕೆ ಅಭಿನಂದನೆ ಸಲ್ಲಿಸಿದ್ದಾಳೆ. ಅಭಿನಂದನೆಗಾಗಿ ಊಟದ ಕೊಡುಗೆಯೋ ಅಥವಾ ಊಟದ ಹಿಂದೆ ಬೇರೆಯದೇ ಕಾರಣಗಳಿವೇ ಎಂಬುದು ಇನ್ನಷ್ಟೇ ಬೆಳಕಿಗೆ ಬರಬೇಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌