ಆ್ಯಪ್ನಗರ

ಸತತ 2ನೇ ಬಾರಿಗೆ ಭಾರತ-ಬಾಂಗ್ಲಾ ಏಷ್ಯಾ ಕಪ್ ಫೈನಲ್

ಏಷ್ಯಾ ಕಪ್ 2018 ಫೈನಲ್: ಭಾರತ vs ಬಾಂಗ್ಲಾದೇಶ

Vijaya Karnataka Web 27 Sep 2018, 11:39 am
ದುಬೈ: ಯುಎಇನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಏಷ್ಯಾ ಕಪ್ 2018 ಕ್ರಿಕೆಟ್ ಟೂರ್ನಮೆಂಟ್‌ನ ಫೈನಲ್ ಮುಖಾಮುಖಿಯಲ್ಲಿ ಭಾರತ ಹಾಗೂ ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಲಿದೆ.
Vijaya Karnataka Web rohit-dhawan-08


ಈ ಮೂಲಕ ಸತತ ಎರಡನೇ ಬಾರಿಗೆ ಬಾಂಗ್ಲಾ ಹಾಗೂ ಭಾರತ ತಂಡಗಳು ಪ್ರಶಸ್ತಿಗಾಗಿ ಸೆಣಸಲಿದೆ.

ಕಳೆದ ಬಾರಿ 2016ರಲ್ಲಿ ಟ್ವೆಂಟಿ-20 ಪ್ರಕಾರದಲ್ಲಿ ನಡೆದ ಟೂರ್ನಮೆಂಟ್‌ನಲ್ಲಿ ಬಾಂಗ್ಲಾದೇಶ ತಂಡವನ್ನು ಎಂಟು ವಿಕೆಟುಗಳ ಅಂತರದಿಂದ ಮಣಿಸಿದ ಭಾರತ ಪ್ರಶಸ್ತಿ ಎತ್ತಿ ಹಿಡಿದಿತ್ತು. ಇದೀಗ ಆರು ಬಾರಿಯ ಚಾಂಪಿಯನ್ ಭಾರತ ಮತ್ತದೇ ಪ್ರದರ್ಶನವನ್ನು ಪುನರಾವರ್ತಿಸುವ ನಿರೀಕ್ಷೆಯಲ್ಲಿದೆ.

ಅತ್ತ ಕಳೆದ ನಾಲ್ಕು ಆವೃತ್ತಿಗಳಲ್ಲಿ ಮೂರನೇ ಬಾರಿಗೆ ಫೈನಲ್ ಪ್ರವೇಶ ಸಾಧನೆ ಮಾಡಿರುವ ಬಾಂಗ್ಲಾದೇಶ, ಚೊಚ್ಚಲ ಕಿರೀಟ ಎದುರು ನೋಡುತ್ತಿದೆ. ಹಾಗೆಯೇ ಕಳೆದ ಬಾರಿ ತವರಿನ ಮಿರ್‌ಪುರ್ ಅಂಗಣದಲ್ಲಿ ಎದುರಾದ ಸೋಲಿಗೆ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ.

ಏಷ್ಯಾ ಕಪ್ ಭಾರತ ಚಾಂಪಿಯನ್ ಆದ ವರ್ಷಗಳು:
1984 (ಶ್ರೀಲಂಕಾ ವಿರುದ್ಧ ಗೆಲುವು)
1988 (ಶ್ರೀಲಂಕಾ ವಿರುದ್ಧ ಗೆಲುವು)
1990/91 (ಶ್ರೀಲಂಕಾ ವಿರುದ್ಧ ಗೆಲುವು)
1995 (ಶ್ರೀಲಂಕಾ ವಿರುದ್ಧ ಗೆಲುವು)
2010 (ಶ್ರೀಲಂಕಾ ವಿರುದ್ಧ ಗೆಲುವು)
2016 (ಬಾಂಗ್ಲಾದೇಶ ವಿರುದ್ಧ ಗೆಲುವು)

ಬಾಂಗ್ಲಾದೇಶ ಫೈನಲ್ ಸಾಧನೆಗಳು: 2012, 2016, 2018

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌