ಆ್ಯಪ್ನಗರ

ಟಿ20 ಕ್ರಿಕೆಟ್‌: ಮೂರನೇ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭರ್ಜರಿ ಜಯ ದಾಖಲಿಸಿದ ಆಸೀಸ್‌

ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಎರಡರಲ್ಲೂ ಸಂಪೂರ್ಣ ಪ್ರಾಬಲ್ಯ ಮೆರೆದ ಆತಿಥೇಯ ಆಸ್ಟ್ರೇಲಿಯಾ ತಂಡ, ಇಲ್ಲಿ ನಡೆದ ಪ್ರವಾಸಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ 10 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿ, 3 ಪಂದ್ಯಗಳ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ ಸರಣಿಯಲ್ಲಿ 2-0 ಅಂತರದಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ.

Vijaya Karnataka Web 8 Nov 2019, 7:01 pm
ಪರ್ತ್‌: ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಎರಡರಲ್ಲೂ ಸಂಪೂರ್ಣ ಪ್ರಾಬಲ್ಯ ಮೆರೆದ ಆತಿಥೇಯ ಆಸ್ಟ್ರೇಲಿಯಾ ತಂಡ, ಇಲ್ಲಿ ನಡೆದ ಪ್ರವಾಸಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ 10 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿ, 3 ಪಂದ್ಯಗಳ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ ಸರಣಿಯಲ್ಲಿ 2-0 ಅಂತರದಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ.
Vijaya Karnataka Web australia win over pakistan int20i 2019


ಪರ್ತ್‌ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಬ್ಯಾಟಿಂಗ್‌ ಆಹ್ವಾನ ಪಡೆದ ಪಾಕಿಸ್ತಾ ತಂಡ, ಕಾಂಗರೂ ಪಡೆಯ ಬಲಿಷ್ಠ ಬೌಲಿಂಗ್‌ ದಾಳಿ ಎದುರು ಹೆಚ್ಚೇನು ಅಬ್ಬರಿಸಲಾಗದೆ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 106 ರನ್‌ಗಳ ಅಲ್ಪ ಮೊತ್ತವನ್ನಷ್ಟೇ ದಾಖಲಿಸಿತು.

ಸಿಕ್ಸರ್‌ ಹೊಡೆಯಲು ಚಹಲ್‌ಗೆ ಸಲಹೆ ನೀಡಿದ ಹಿಟ್‌ಮ್ಯಾನ್‌!

ಬಳಿಕ ಸುಲಭದ ಗುರಿ ಬೆನ್ನತ್ತಿದ ಆಸೀಸ್‌ ಪಡೆ, 11.5 ಓವರ್‌ಗಳಲ್ಲಿ ಯಾವುದೇ ವಿಕೆಟ್‌ ಕಳೆದುಕೊಳ್ಳದೆ 109 ರನ್‌ಗಳನ್ನು ಚಚ್ಚಿ ಭರ್ಜರಿ ಗೆಲುವನ್ನು ತನ್ನದಾಗಿಸಿಕೊಂಡಿತು. ನಾಯಕ ಆರೊನ್‌ ಫಿಂಚ್‌ 36 ಎಸೆತಗಳಲ್ಲಿ 4 ಫೋರ್‌ ಮತ್ತು 3 ಸಿಕ್ಸರ್‌ ಒಳಗೊಂಡ ಅಜೇಯ 52 ರನ್‌ಗಳನ್ನು ಬಾರಿಸಿ ತಂಡಕ್ಕೆ ಸುಲಭ ಜಯ ತಂದುಕೊಟ್ಟರು.

ಅವರೊಟ್ಟಿಗೆ ಪಾಕಿಸ್ತಾನದ ಬೌಲರ್‌ಗಳನ್ನು ಮನಬಂದಂತೆ ಬಡಿದಟ್ಟಿದ ಎಡಗೈ ಆರಂಭಿಕ ಬ್ಯಾಟ್ಸ್‌ಮನ್‌ ಡೇವಿಡ್‌ ವಾರ್ನರ್‌, 35 ಎಸೆತಗಳಲ್ಲಿ 4 ಫೋರ್‌ ಮತ್ತು 2 ಸಿಕ್ಸರ್‌ ಒಳಗೊಂಡ ಅಜೇಯ 48 ರನ್‌ಗಳನ್ನು ಸಿಡಿಸಿದರು. ಫಿಂಚ್‌ ಮತ್ತು ವಾರ್ನರ್‌ ಜೋಡಿ ಪವರ್‌ಪ್ಲೇ ಓವರ್‌ನಲ್ಲೇ 56 ರನ್‌ಗಳನ್ನು ಗಳಿಸಿ ಜಯದ ಹಾದಿಯನ್ನು ಸುಗಮವಾಗಿಸಿದರು.

ಡೇವಿಡ್ ಮಲಾನ್ ದಾಖಲೆಯ ಶತಕ: ಕಿವೀಸ್‌ ವಿರುದ್ಧದ 4ನೇ ಟಿ20ಯಲ್ಲಿ ಇಂಗ್ಲೆಂಡ್‍ಗೆ ಜಯ

ಸರಣಿಯ ಮೊದಲ ಪಂದ್ಯದಲ್ಲಿ ಆಸೀಸ್‌ಗೆ ಇನ್ನೇನು ಗೆಲುವು ಲಭ್ಯವಾಗಿತ್ತು ಎನ್ನುವ ಹಂತದಲ್ಲಿ ಮಳೆ ಸುರಿದ ಕಾರಣ ಪಂದ್ಯ ರದ್ದಾಗಿತ್ತು, ಬಳಿಕ 2ನೇ ಟಿ20ಯಲ್ಲಿ ಸ್ಟೀವ್‌ ಸ್ಮಿತ್‌ ಕಾಂಗರೂ ಪಡೆಗೆ 7 ವಿಕೆಟ್‌ ಜಯ ತಂದುಕೊಟ್ಟಿದ್ದರು. ಇದೀಗ ಮೂರನೇ ಪಂದ್ಯದಲ್ಲಿ 10 ವಿಕೆಟ್‌ ಜಯದೊಂದಿಗೆ ಆಸ್ಟ್ರೇಲಿಯಾ ಟ್ರೋಫಿ ತನ್ನದಾಗಿಸಿಕೊಂಡಿದೆ.

ಇದೀಗ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ತಂಡಗಳು ಇದೀಗ 2 ಪಂದ್ಯಗಳ ಟೆಸ್ಟ್‌ ಕ್ರಿಕೆಟ್‌ ಸರಣಿಯಲ್ಲಿ ಪೈಪೋಟಿ ನಡೆಸಲಿದೆ.

ಪಾಕಿಸ್ತಾನ: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 106 (ಇಫ್ತಿಕಾರ್‌ ಅಹ್ಮದ್‌ 45, ಇಮಾಮ್‌ ಉಲ್‌ ಹಕ್‌ 14; ಕೇನ್‌ ರಿಚರ್ಡ್ಸನ್‌ 18ಕ್ಕೆ 3).
ಆಸ್ಟ್ರೇಲಿಯಾ: 11.5 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲ 109 (ಆರೊನ್‌ ಫಿಂಚ್‌ ಅಜೇಯ 52, ಡೇವಿಡ್‌ ವಾರ್ನರ್‌ ಅಜೇಯ 48).









ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌