ಆ್ಯಪ್ನಗರ

ಐಪಿಎಲ್‌ 2020: ಆಟಗಾರರ ಹರಾಜಿಗೂ ಮೊದಲೇ ಆರ್‌ಸಿಬಿಗೆ ನಿರಾಸೆ!

ಹದಿಮೂರನೇ ಐಪಿಎಲ್‌ ಟೂರ್ನಿಗೆ ತನ್ನ ಬೌಲಿಂಗ್‌ ವಿಭಾಗಕ್ಕೆ ಬಲ ತುಂಬುವು ಕಡೆಗೆ ಎದುರು ನೋಡುತ್ತಿದ್ದ ಆರ್‌ಸಿಬಿ, ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಆಸ್ಟ್ರೇಲಿಯಾದ ಎಡಗೈ ವೇಗದ ಬೌಲರ್‌ ಮಿಚೆಲ್‌ ಸ್ಟಾರ್ಕ್‌ ಅವರನ್ನು ಖರೀದಿಸುವ ಕಡೆಗೆ ಕಣ್ಣಿಟ್ಟಿತ್ತು

Vijaya Karnataka Web 3 Dec 2019, 2:13 pm
ಹೊಸದಿಲ್ಲಿ: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಬ್ಯಾಟಿಂಗ್‌ ಕುರಿತಾಗಿ ಯಾರೂ ಕೆಮ್ಮುವಂತಿಲ್ಲ. ಆದರೆ, ತಂಡದ ಸೋಲಿಗೆ ಪ್ರಮುಖ ಕಾರಣವಾಗುತ್ತಿರುವುದು ಬೌಲಿಂಗ್‌ ವಿಭಾಗ ಎಂಬುದರಲ್ಲಿ ಸಂದೇಹವೇ ಇಲ್ಲ. ಹಲವು ವರ್ಷಗಳಿಂದ ಆರ್‌ಸಿಬಿ ತನ್ನ ಬೌಲಿಂಗ್‌ ವಿಭಾಗದ ಬಲ ಹೆಚ್ಚಿಸಿಕೊಳ್ಳುವ ಕಡೆಗೆ ಹಲವು ಪ್ರಯೋಗಗಳನ್ನು ನಡೆಸಿದೆ.
Vijaya Karnataka Web Mitchell Starc IPL auction 2020


ಅಂತೆಯೇ ಕಳೆದ ಬಾರಿ ಟೂರ್ನಿಯ ಮಧ್ಯದಲ್ಲೇ ದಕ್ಷಿಣ ಆಫ್ರಿಕಾದ ವೇಗಿ ಡೇಲ್‌ ಸ್ಟೇನ್‌ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಆದರೆ ಸ್ಟೇನ್‌ 2 ಪಂದ್ಯಗಳ ಬಳಿಕ ಗಾಯದ ಸಮಸ್ಯೆಗೆ ತುತ್ತಾಗಿದ್ದು, ತಂಡಕ್ಕೆ ಭಾರಿ ನಷ್ಟವನ್ನೇ ತಂದೊಡ್ಡಿತ್ತು. ಇದರೊಂದಿಗೆ ತಂಡದ ಬೌಲಿಂಗ್‌ ವಿಭಾಗದಲ್ಲಿ ಅನುಭವದ ಕೊರತೆ ಎದ್ದು ಕಾಣುತ್ತಿತ್ತು.

ಹೀಗಿರುವಾಗ 13ನೇ ಆವೃತ್ತಿಯ ಐಪಿಎಲ್‌ 2020 ಟೂರ್ನಿಗೆ ತನ್ನ ಬೌಲಿಂಗ್‌ ವಿಭಾಗಕ್ಕೆ ಜೀವ ತುಂಬುವು ಕಡೆಗೆ ಎದುರು ನೋಡುತ್ತಿದ್ದ ಆರ್‌ಸಿಬಿ, ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಆಸ್ಟ್ರೇಲಿಯಾದ ಎಡಗೈ ವೇಗದ ಬೌಲರ್‌ ಮಿಚೆಲ್‌ ಸ್ಟಾರ್ಕ್‌ ಅವರನ್ನು ಖರೀದಿಸುವ ಕಡೆಗೆ ಕಣ್ಣಿಟ್ಟಿತ್ತು. ಆದರೆ, ಕಾಂಗರೂ ಪಡೆಯ ಎಡಗೈ ವೇಗಿ ಚಾಲೆಂಜರ್ಸ್‌ ಆಸೆಗೆ ತಣ್ಣೀರೆರಚಿದ್ದಾರೆ.

ಐಪಿಎಲ್‌ 2020: ಹರಾಜಿಗೆ 971 ಆಟಗಾರರಿಂದ ಅರ್ಜಿ, ಗರಿಷ್ಠ ಮೂಲ ಬೆಲೆಯ ಪ್ಲೇಯರ್ಸ್‌ ಪಟ್ಟಿ ಬಿಡುಗಡೆ

ಜಗತ್ತಿನ ಐಶಾರಾಮಿ ಟಿ20 ಕ್ರಿಕೆಟ್‌ ಟೂರ್ನಿಯ ಭಾಗವಾಗಲು ಈ ಬಾರಿ ಒಟ್ಟಾರೆ 971 ಆಟಗಾರರು ಹರಾಜು ಪ್ರಕ್ರಿಯೆಗೆ ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ ಸತತ ಎರಡನೇ ಬಾರಿ ಮಿಚೆಲ್‌ ಸ್ಟಾರ್ಕ್‌ ಅರ್ಜಿ ಸಲ್ಲಿಸದೇ ಉಳಿದಿರುವುದು ಆರ್‌ಸಿಬಿ ಬೇಸರಕ್ಕೆ ಕಾರಣವಾಗಿದೆ. ಕಾಂಗರೂ ಪಡೆಯ ಸ್ಟಾರ್‌ಗಳಾದ ಕ್ರಿಸ್‌ ಲಿನ್‌, ಹಾಗೂ ಗ್ಲೆನ್‌ ಮ್ಯಾಕ್ಸ್‌ವೆಲ್‌ ಹರಾಜು ಪ್ರಕ್ರಿಯೆಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಆದರೆ ಸ್ಟಾರ್ಕ್‌ ಮಾತ್ರ ಈ ಬಾರಿಯೂ ಹಿಂದೆ ಸರಿದಿದ್ದಾರೆ.

ಐಪಿಎಲ್‌ 2020: ಈ ಬಾರಿ ಹರಾಜಿನಲ್ಲಿ ಕೋಟಿ ಕೋಟಿ ಕೊಳ್ಳೆ ಹೊಡೆಯಬಲ್ಲ ದೈತ್ಯರು ಇವರು!

29 ವರ್ಷದ ವಿಶ್ವ ಶ್ರೇಷ್ಠ ವೇಗಿ 2015ರ ಆವೃತ್ತಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು ಪ್ರಿನಿಧಿಸಿದ್ದರು. ಬಳಿಕ 2018ರಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌ ತಂಡ 9.4 ಕೋಟಿ ರೂ. ನೀಡಿ ಸ್ಟಾರ್ಕ್‌ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಆದರೆ, ಟೂರ್ನಿಯ ಒಂದು ಪಂದ್ಯಕ್ಕೂ ಸ್ಟಾರ್ಕ್‌ ಲಭ್ಯರಾಗಲಿಲ್ಲ. ಇನ್ನು 2019ರ ಆವೃತ್ತಿ ವೇಳೆ ಗಾಯದ ಸಮಸ್ಯೆಯಿಂದ ಚೇತರಿಸುತ್ತಿದ್ದ ಸ್ಟಾರ್ಕ್‌, ಐಪಿಎಲ್‌ ಬದಲಿಗೆ ಆಸ್ಟ್ರೇಲಿಯಾ ತಂಡದ ವಿಶ್ವಕಪ್‌ ಶಿಬಿರದಲ್ಲಿ ಪಾಲ್ಗೊಳ್ಳುವುದನ್ನು ಆಯ್ಕೆ ಮಾಡಿಕೊಂಡಿದ್ದರು.

2020ರ ಐಪಿಎಲ್‌ ಟೂರ್ನಿಗೆ ಆಟಗಾರರ ಹರಾಜು ಪ್ರಕ್ರಿಯೆ ಇದೇ ಮೊದಲ ಬಾರಿ ಕೋಲ್ಕತಾದಲ್ಲಿ ಡಿ.19ರಂದು (ಗುರುವಾರ) ನಡೆಯಲಿದೆ.

'ಕಪ್ ಅಂತೂ ಗೆಲ್ಲಲ್ಲ, ಮರ್ಯಾದೆ ಆದ್ರೂ ಕೊಡ್ರೋ' ಆರ್‌ಸಿಬಿ ವಿರುದ್ಧ ಉಗ್ರ ಹೋರಾಟ ಸಾರಿದ ಅಭಿಮಾನಿಗಳು

ಸ್ಟಾರ್ಕ್‌ ಹೊರತಾಗಿ ಇಂಗ್ಲೆಂಡ್‌ ಟೆಸ್ಟ್‌ ತಂಡದ ನಾಯಕ ಜೋ ರೂಟ್‌ ಕೂಡ ಈ ಬಾರಿಯ ಐಪಿಎಲ್‌ನಿಂದ ಹೊರಗುಳಿದಿದ್ದಾರೆ. ಮ್ಯಾಕ್ಸ್‌ವೆಲ್‌ ಮತ್ತು ಕ್ರಿಸ್‌ ಲಿನ್‌ 2 ಕೋಟಿ ರೂ. ಮೂಲ ಬೆಲೆಯ ಆಟಗಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅವರೊಟ್ಟಿಗೆ ಜಾಶ್‌ ಹೇಝಲ್‌ವುಡ್‌, ಮಿಚೆಲ್‌ ಮಾರ್ಷ್‌, ಡೇಲ್‌ ಸ್ಟೇನ್‌ ಮತ್ತು ಏಂಜಲೊ ಮ್ಯಾಥ್ಯೂಸ್‌ ಇದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌