ಆ್ಯಪ್ನಗರ

ಆಸೀಸ್ ಪ್ರವಾಸ ಸವಾಲಿನಿಂದ ಕೂಡಿರಲಿದೆ: ಭುವಿ

ಸ್ಮಿತ್, ವಾರ್ನರ್ ಅಲಭ್ಯತೆಯಲ್ಲೂ ಆಸೀಸ್ ಸರಣಿ ಕಠಿಣ

TOI.in 18 Oct 2018, 5:28 pm
ಮುಂಬಯಿ: ಸದ್ಯ ವಿಶ್ರಾಂತಿಯಲ್ಲಿರುವ ಭಾರತ ಕ್ರಿಕೆಟ್ ತಂಡದ ಬಲಗೈ ವೇಗದ ಬೌಲರ್ ಭುವನೇಶ್ವರ್ ಕುಮಾರ್, ಮುಂಬರುವ ಬಹುನಿರೀಕ್ಷಿತ ಆಸ್ಟ್ರೇಲಿಯಾ ಪ್ರವಾಸವನ್ನು ಎದುರು ನೋಡುತ್ತಿದ್ದಾರೆ.
Vijaya Karnataka Web bhuvneshwar-kumar-test-02


ಇದರಂತೆ ಆಸೀಸ್‌ನಲ್ಲಿ ಟೆಸ್ಟ್ ಸರಣಿ ಅತಿ ಹೆಚ್ಚು ಸವಾಲಿನಿಂದ ಕೂಡಿರಲಿದೆ ಎಂದಿದ್ದಾರೆ.

ಬ್ಯಾಲ್ ಟ್ಯಾಂಪರಿಂಗ್ ಪ್ರರಕರಣದಲ್ಲಿ ನಿಷೇಧಕ್ಕೊಳಗಾಗಿರುವ ಮಾಜಿ ನಾಯಕ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಸೇವೆಯಿಂದ ಆಸೀಸ್ ವಂಚಿತವಾಗಿದೆ. ಹಾಗಿದ್ದರೂ ಕಾಂಗರೂ ಪಡೆ ಅವರದ್ದೇ ನೆಲದಲ್ಲಿ ಪ್ರಬಲ ತಂಡವಾಗಿದೆ ಎಂಬುದನ್ನು ಭುವಿ ಉಲ್ಲೇಖಿಸಿದರು.

"ಯಾವ ಪ್ರವಾಸವು ಸುಲಭವಲ್ಲ. ಆಸೀಸ್ ಸರಣಿ ಕೂಡಾ ಕಠಿಣವಾಗಿರಲಿದೆ. ಅಲ್ಲಿನ ವಾತಾವರಣದಲ್ಲಿ ಆಡುವುದು ಕಠಿಣ. ಆಸೀಸ್ ಈಗಲೂ ಉತ್ತಮ ತಂಡ" ಎಂದು ಹೇಳಿದರು.

"ಸ್ಮಿತ್, ವಾರ್ನರ್ ಅಲಭ್ಯತೆಯಲ್ಲೂ ಆಸೀಸ್ ಸವಾಲನ್ನು ಒಡ್ಡಲಿದೆ. ಆದರೆ ನಮ್ಮ ಪೂರ್ವ ಸಿದ್ಧತೆಯು ಹೆಚ್ಚು ಮುಖ್ಯವೆನಿಸಲಿದೆ" ಎಂದರು.

ಆಸೀಸ್ ವಿರುದ್ಧ ಭಾರತ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾಗವಹಿಸಲಿದೆ.

ಅದೇ ಹೊತ್ತಿಗೆ ಸಹ ವೇಗಿ ಜಸ್ಪ್ರೀತ್ ಬುಮ್ರಾ ಜೊತೆಗೆ ಉತ್ತಮ ಹೊಂದಾಣಿಕೆಯನ್ನು ಹೊಂದಿರುವುದಾಗಿ ಬುಮ್ರಾ ತಿಳಿಸಿದರು. "ಮೈದಾನದಲ್ಲಿ ನಾವು ಪರಸ್ಪರ ನೆರವಾಗುತ್ತೇವೆ. ಈ ಮೂಲಕ ಎದುರಾಳಿಗಳ ಮೇಲೆ ಒತ್ತಡವನ್ನು ಹೇರುತ್ತೇವೆ. ಮೈದಾನದ ಹೊರಗೆ ಎಲ್ಲ ವೇಗಿಗಳು ಒಗ್ಗಟ್ಟಾಗಿ ಇರುತ್ತೇವೆ" ಎಂದು ಸೇರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌