ಆ್ಯಪ್ನಗರ

ವಿಂಡೀಸ್ ವಿರುದ್ಧ ಪಾಕ್‌ಗೆ ಸರಣಿ ಗೆಲುವಿನ ಸಿಹಿ

ಪ್ರವಾಸಿ ವೆಸ್ಟ್ಇಂಡೀಸ್ ವಿರುದ್ಧ ನಡೆದ ದ್ವಿತೀಯ ಟ್ವೆಂಟಿ-20 ಪಂದ್ಯದಲ್ಲೂ 82 ರನ್‌ಗಳ ಅಂತರದ ಗೆಲುವು ದಾಖಲಿಸಿರುವ ಪಾಕಿಸ್ತಾನ, ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ ಇನ್ನೂ ಒಂದು ಪಂದ್ಯ ಬಾಕಿ ಉಳಿದಿರುವಂತೆಯೇ 2-0ರ ಅಂತರದಲ್ಲಿ ವಶಪಡಿಸಿಕೊಂಡಿದೆ.

TIMESOFINDIA.COM 3 Apr 2018, 3:46 pm
ಕರಾಚಿ: ಪ್ರವಾಸಿ ವೆಸ್ಟ್ಇಂಡೀಸ್ ವಿರುದ್ಧ ನಡೆದ ದ್ವಿತೀಯ ಟ್ವೆಂಟಿ-20 ಪಂದ್ಯದಲ್ಲೂ 82 ರನ್‌ಗಳ ಅಂತರದ ಗೆಲುವು ದಾಖಲಿಸಿರುವ ಪಾಕಿಸ್ತಾನ, ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ ಇನ್ನೂ ಒಂದು ಪಂದ್ಯ ಬಾಕಿ ಉಳಿದಿರುವಂತೆಯೇ 2-0ರ ಅಂತರದಲ್ಲಿ ವಶಪಡಿಸಿಕೊಂಡಿದೆ.
Vijaya Karnataka Web babar-azam


ಕರಾಚಿ ರಾಷ್ಟ್ರೀಯ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಪಾಕ್ ನಿಗದಿತ 20 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿತ್ತು.

ಇದು ಟ್ವೆಂಟಿ-20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪಾಕ್ ದಾಖಲಿಸುತ್ತಿರುವ ಗರಿಷ್ಠ ಮೊತ್ತವಾಗಿದೆ. ಬಾಬರ್ ಅಜಾಮ್ ಕೇವಲ ಮೂರು ರನ್ ಅಂತರದಲ್ಲಿ ಚೊಚ್ಚಲ ಟಿ-20 ಶತಕ ಮಿಸ್ ಮಾಡಿಕೊಂಡಿದ್ದರು. 58 ಎಸೆತಗಳನ್ನು ಎದುರಿಸಿದ ಬಾಬರ್ 13 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 97 ರನ್ ಗಳಿಸಿ ಅಜೇಯರಾಗುಳಿದಿದ್ದರು.

ಅತ್ತ ಹುಸೇನ್ ತಲತ್ 41 ಎಸೆತಗಳಲ್ಲಿ 63 ರನ್‌ಗಳ ಉಪಯುಕ್ತ ಇನ್ನಿಂಗ್ಸ್ ಕಟ್ಟಿದ್ದರು. ಇವರಿಬ್ಬರು ದ್ವಿತೀಯ ವಿಕೆಟ್‌ಗೆ 119 ರನ್‌ಗಳ ಜತೆಯಾಟ ಕಟ್ಟಿದ್ದರು.

ಬಳಿಕ ರನ್ ಬೆನ್ನತ್ತಿದ್ದ ವಿಂಡೀಸ್ 19.2 ಓವರ್‌ಗಳಲ್ಲೇ 123 ರನ್‌ಗಳಿಗೆ ಸರ್ವಪತನವನ್ನು ಕಂಡಿತ್ತು. ಓಪನರ್ ಚಾದ್ವಿಕ್ ವಾಲ್ಟನ್ 40 ರನ್ ಗಳಿಸಿದ್ದರು.

ಪಾಕ್ ಪರ ಮೊಹಮ್ಮದ್ ಆಮೀರ್ ಮೂರು ಮತ್ತು ಶದಾಬ್ ಖಾನ್ ಹಾಗೂ ಹುಸೇನ್ ತಲತ್ ತಲಾ ಎರಡು ವಿಕೆಟುಗಳನ್ನು ಹಂಚಿಕೊಂಡರು.

ಪಾಕಿಸ್ತಾನದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪುನಶ್ಚೇತನ ನೀಡುವುದರ ಭಾಗವಾಗಿ ವಿಂಡೀಸ್ ಪಾಕ್ ಪ್ರಯಾಣವನ್ನು ಕೈಗೊಂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌