ಆ್ಯಪ್ನಗರ

ಭಾರತದ ಕೋಚ್‌ ಆಗುವರೇ ದ್ರಾವಿಡ್‌ ?

ರಾಹುಲ್‌ ದ್ರಾವಿಡ್‌ ಭಾರತ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಆಗಬೇಕು ಎಂದು ಬಿಸಿಸಿಐ ಬಯಸಿದೆ.

ಏಜೆನ್ಸೀಸ್ 3 Apr 2016, 11:35 am
ಮುಂಬಯಿ: ಬ್ಯಾಟಿಂಗ್ ಲೆಜೆಂಡ್‌ ರಾಹುಲ್‌ ದ್ರಾವಿಡ್‌ ಭಾರತ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಆಗಬೇಕು ಎಂಬುದು ಬಿಸಿಸಿಐ ಇಂಗಿತವಾಗಿದ್ದು, ಈ ವಿಚಾರವಾಗಿ ಮಾಜಿ ಕ್ರಿಕೆಟಿಗಿನ ಪ್ರತಿಕ್ರಿಯೆ ಎದುರುನೋಡುತ್ತಿದೆ.
Vijaya Karnataka Web bcci wants rahul dravid to coach india
ಭಾರತದ ಕೋಚ್‌ ಆಗುವರೇ ದ್ರಾವಿಡ್‌ ?


ಅಂಡರ್‌ 19 ಹಾಗೂ ಹಿರಿಯರ ತಂಡದ ಮುಖ್ಯ ಕೋಚ್‌ ಆಗುವಂತೆ ದ್ರಾವಿಡ್ ಅವರನ್ನು ಕೋರಲಾಗಿದೆ. ಈ ವಿಚಾರದಲ್ಲಿ ಅವರಿಗೆ ಆಸಕ್ತಿ ಇದೆಯೇ ಎಂದು ತಿಳಿದುಕೊಳ್ಳಲು ಸಚಿನ್‌ ತೆಂಡಲ್ಕೂರ್‌, ಸೌರವ್‌ ಗಂಗೂಲಿ, ವಿವಿಎಸ್‌ ಲಕ್ಷ್ಮಣ್‌ ಅವರನ್ನೊಳಗೊಂಡ ಭಾರತೀಯ ಕ್ರಿಕೆಟ್‌ ಮಂಡಳಿಯ ಸಲಹಾ ಸಮಿತಿ ವಿಚಾರಣೆ ನಡೆಸಿದೆ.

ಮುಂಬರುವ ದಿನಗಳಲ್ಲಿ ಈ ಪ್ರಸ್ತಾವನೆ ಮುಂದಿಟ್ಟರೆ ದ್ರಾವಿಡ್‌ ಒಪ್ಪಿಕೊಳ್ಳುವರಾ ಎಂದು ಕಾದು ನೋಡಬೇಕಿದೆ. ಸದ್ಯ ಡೆಲ್ಲಿ ಡೇರ್‌ ಡೆವಿಲ್ಸ್‌ ಐಪಿಎಲ್‌ ತಂಡದ ಮೆಂಟರ್‌ ಆಗಿರುವ ರಾಹುಲ್, 'ಈ ಬಗ್ಗೆ ಆಲೋಚಿಸುವೆ,' ಎಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಭಾರತದ ತಂಡದ ನಿರ್ದೇಶಕರಾಗಿ ಮಾಜಿ ಕ್ರಿಕೆಟಿಗ ರವಿ ಶಾಸ್ತ್ರಿ ಅವರ ಅವಧಿ ವರ್ಲ್ಡ್‌ಟಿ20ಯೊಂದಿಗೆ ಮುಕ್ತಾಯಗೊಂಡಿದೆ. ಹುದ್ದೆಯಲ್ಲಿ ಮುಂದುವರಿಯಲು ರವಿ ಶಾಸ್ತ್ರಿಗೆ ಆಸಕ್ತಿ ಇದ್ದರೂ, ಅವರನ್ನು ಮುಖ್ಯ ಕೋಚ್‌ ಸ್ಥಾನಕ್ಕೆ ಪರಿಗಣಿಸುವ ಸಾಧ್ಯತೆ ಇಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ.

ಮುಖ್ಯ ಕೋಚ್‌ ಆಯ್ಕೆ ವಿಚಾರವಾಗಿ ಸಲಹಾ ಸಮಿತಿ ಮಂಗಳವಾರ ಸಭೆ ಸೇರಿ ಮಾತುಕತೆ ನಡೆಸಲಿದೆ. ಈ ಮೊದಲು ಮಂಡಳಿ, ಆಸ್ಟ್ರೇಲಿಯಾದ ಮಾಜಿ ಬ್ಯಾಟ್ಸ್‌ಮನ್‌ ಮೈಕೆಲ್‌ ಹಸ್ಸಿ ಅವರನ್ನು ಮುಖ್ಯ ಕೋಚ್‌ ಸ್ಥಾನಕ್ಕೆ ಪರಿಗಣಿಸಿತ್ತು. ಆದರೆ, ಯೋಜನೆ ಕೈಗೂಡಲಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌