ಆ್ಯಪ್ನಗರ

World Cup 2019: ಕೊಹ್ಲಿಗೆ ಸಹಾಯ ಮಾಡುವುದೇ ನನ್ನ ಜವಾಬ್ದಾರಿ: ರೋಹಿತ್

ಮುಂಬರುವ ಏಕದಿನ ವಿಶ್ವಕಪ್‌ನಲ್ಲಿ ನಾಯಕ ವಿರಾಟ್ ಕೊಹ್ಲಿಗೆ ಸಹಾಯ ಮಾಡುವುದು ನನ್ನ ಮುಖ್ಯ ಜವಾಬ್ದಾರಿಯಾಗಿದೆ ಎಂದು ಟೀಮ್ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.

Vijaya Karnataka Web 30 Apr 2019, 6:21 pm
ಮುಂಬಯಿ: ಮುಂಬರುವ 2019 ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ನಾಯಕ ವಿರಾಟ್ ಕೊಹ್ಲಿಗೆ ಸಹಾಯ ಮಾಡುವುದೇ ನನ್ನ ಮುಖ್ಯ ಜವಾಬ್ದಾರಿಯಾಗಿದೆ ಎಂದು ಟೀಮ್ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.
Vijaya Karnataka Web rohit-kohli


ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರೋಹಿತ್ ಶರ್ಮಾ ಮೂರು ಬಾರಿ ಮುಂಬೈ ಇಂಡಿಯನ್ಸ್ ತಂಡವನ್ನು ಚಾಂಪಿಯನ್ ಪಟ್ಟದತ್ತ ಮುನ್ನಡೆಸಿದ್ದಾರೆ. ಅತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕನಾಗಿರುವ ವಿರಾಟ್ ಕೊಹ್ಲಿಗೆ ಒಂದು ಬಾರಿಯೂ ಐಪಿಎಲ್ ಕಿರೀಟದ ಯಶಸ್ಸು ದಕ್ಕಲಿಲ್ಲ.

ಓರ್ವ ಉಪನಾಯಕನಾಗಿ ನನ್ನ ಜವಾಬ್ದಾರಿ ಬಗ್ಗೆ ನನಗೆ ಅರಿವಿದೆ. ವಿರಾಟ್‌ಗೆ ಸಂದೇಹ ಬಂದಾಗೆಲ್ಲ ಅವರನ್ನು ನೆರವು ಮಾಡಲಿದ್ದೇನೆ. ಕಳೆದ ಕೆಲವು ವರ್ಷಗಳಿಂದ ಅದನ್ನೇ ಮಾಡಿಕೊಂಡು ಬರುತ್ತಿದ್ದೇನೆ ಎಂದಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ನಾಯಕನಾಗಿದ್ದಾಗ ಅವರನ್ನು ಬೆಂಬಲಿಸಲು ವೀರೇಂದ್ರ ಸೆಹ್ವಾಗ್, ಸಚಿನ್ ತೆಂಡೂಲ್ಕರ್ ಜತೆಗೆ ಇತರೆ ಹಿರಿಯ ಆಟಗಾರರು ಇರುತ್ತಿದ್ದರು. ಇದೀಗ ನಾವು ದೀರ್ಘ ಸಮಯದಿಂದ ತಂಡದ ಜತೆಗಿರುವುದರಿಂದ ನಮ್ಮ ಜವಾಬ್ದಾರಿಯು ನಾಯಕನಿಗೆ ನೆರವು ಮಾಡುವುದಾಗಿದೆ ಎಂದು ರೋಹಿತ್ ಹೇಳಿದರು.

ತಂಡದ ವಾತಾವರಣದ ಬಗ್ಗೆ ಮಾತನಾಡಿದ ರೋಹಿತ್, ಸಹ ಆಟಗಾರ ಎಲ್ಲ ರೀತಿಯ ಸಲಹೆಗಳನ್ನು ಸ್ವಾಗತಿಸಲಾಗುವುದು ಎಂದರು.

ಕೇವಲ ಓರ್ವ ಆಟಗಾರನಿಗೆ ಸೀಮಿತವಲ್ಲ. ತಂಡವು ಎಲ್ಲ 15 ಆಟಗಾರರಿಗೂ ಸೇರಿದ್ದಾಗಿದೆ. ಹಾಗಾಗಿ ಯಾವನೇ ಸದಸ್ಯನು ಸಲಹೆ ನೀಡಲು ಬಯಸಿದರೆ ಅದು ತಂಡದ ಪಾಲಿಗೆ ಒಳಿತನ್ನುಂಟು ಮಾಡಲಿದೆ ಎಂದರು.

ಈ ಹಿಂದೆ ನಾಯಕ ವಿರಾಟ್ ಕೊಹ್ಲಿ ಹೇಳಿಕೆಯಲ್ಲಿ, ಯಾವತ್ತು ರೋಹಿತ್ ಹಾಗೂ ಧೋನಿಯಿಂದ ಸಲಹೆಗಳನ್ನು ಪಡೆಯುತ್ತೇನೆ ಎಂದಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌