ಆ್ಯಪ್ನಗರ

ಬೆಂಗಳೂರು ಬ್ಲಾಸ್ಟರ್ಸ್‌ ಫೈನಲ್‌ಗೆ

ಶ್ರೇಯಸ್‌ ಗೋಪಾಲ್‌ (13ಕ್ಕೆ 3) ಅವರ ಲೆಗ್‌ ಸ್ಪಿನ್‌ ಮೋಡಿ ಮತ್ತು ಮನೋಜ್‌ ಭಂಡಗೆ (34 ರನ್‌) ಅವರ ಸ್ಫೋಟಕ ಬ್ಯಾಟಿಂಗ್‌ ಬಲದಿಂದ ಮಿಂಚಿದ ಬೆಂಗಳೂರು ಬ್ಲಾಸ್ಟರ್ಸ್‌, ಕೆಪಿಎಲ್‌ 2018ರ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಆತಿಥೇಯ ಮೈಸೂರು ವಾರಿಯರ್ಸ್‌ ತಂಡವನ್ನು 20 ರನ್‌ಗಳಿಂದ ಮಣಿಸಿ ಫೈನಲ್‌ ತಲುಪಿದೆ.

Vijaya Karnataka 5 Sep 2018, 10:19 am
ಬ್ಲಾಸ್ಟರ್ಸ್‌ಗೆ ಬಲವಾದ ಭಂಡಗೆ ಬ್ಯಾಟಿಂಗ್‌ / ಶ್ರೇಯಸ್‌ಗೆ 3 ವಿಕೆಟ್‌ / ವಾರಿಯರ್ಸ್‌ಗೆ 20 ರನ್‌ ಸೋಲು
Vijaya Karnataka Web kpl-2018-02


ವಿಜೇತ್‌ ಕುಮಾರ್‌ ಡಿ.ಎನ್‌

ಮೈಸೂರು: ಶ್ರೇಯಸ್‌ ಗೋಪಾಲ್‌ (13ಕ್ಕೆ 3) ಅವರ ಲೆಗ್‌ ಸ್ಪಿನ್‌ ಮೋಡಿ ಮತ್ತು ಮನೋಜ್‌ ಭಂಡಗೆ (34 ರನ್‌) ಅವರ ಸ್ಫೋಟಕ ಬ್ಯಾಟಿಂಗ್‌ ಬಲದಿಂದ ಮಿಂಚಿದ ಬೆಂಗಳೂರು ಬ್ಲಾಸ್ಟರ್ಸ್‌, ಕೆಪಿಎಲ್‌ 2018ರ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಆತಿಥೇಯ ಮೈಸೂರು ವಾರಿಯರ್ಸ್‌ ತಂಡವನ್ನು 20 ರನ್‌ಗಳಿಂದ ಮಣಿಸಿ ಫೈನಲ್‌ ತಲುಪಿದೆ.

ಇಲ್ಲಿನ ಎಸ್‌ಡಿಎನ್‌ಆರ್‌ ಒಡೆಯರ್‌ ಕ್ರೀಡಾಂಗಣದಲ್ಲಿ ಮಂಗಳವಾರ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಲೀಗ್‌ ಲೀಡರ್‌ ಬೆಂಗಳೂರು ತಂಡ, ತನ್ನ ಪಾಲಿನ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 138 ರನ್‌ಗಳನ್ನು ದಾಖಲಿಸಲಷ್ಟೇ ಶಕ್ತವಾಯಿತು.

ಬಳಿಕ ಸುಲಭದ ಗುರಿ ಬೆನ್ನತ್ತಿ ಹೊರಟ ಮೈಸೂರು ವಾರಿಯರ್ಸ್‌ ತಂಡ, 20 ಓವರ್‌ಗಳ ಮುಕ್ತಾಯಕ್ಕೆ 9 ವಿಕೆಟ್‌ ನಷ್ಟದಲ್ಲಿ 118 ರನ್‌ಗಳನ್ನು ಮಾತ್ರವೇ ಗಳಿಸಿ ಸೋಲಿಗೆ ಶರಣಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌