ಆ್ಯಪ್ನಗರ

ವಿಶ್ವಕಪ್‌ನಲ್ಲಿ ವಿರಾಟ್ ಪಡೆಗೆ ಚಿಯರ್ ಹೇಳಲಿರುವ ಭಾರತ್ ಆರ್ಮಿ

ವಿಶ್ವದ್ಯಾಂತ ಅತ್ಯಂತ ಬಲಿಷ್ಠ ಅಭಿಮಾನಿಗಳ ಬಳಗವಾಗಿ ಹೊರಹೊಮ್ಮಿರುವ ಭಾರತ್ ಆರ್ಮಿ, ಮುಂಬರುವ ಏಕದಿನ ವಿಶ್ವಕಪ್‌ನಲ್ಲೂ ವಿರಾಟ್ ಕೊಹ್ಲಿ ಪಡೆಗೆ ಚಿಯರ್ ಹೇಳಲಿದೆ. ಈ ಬಗ್ಗೆ ಮಾಹಿತಿಯನ್ನು ಐಸಿಸಿ ನೀಡಿದೆ.

TOI.in 22 Mar 2019, 5:01 pm
ಲಂಡನ್: ಇಂಗ್ಲೆಂಡ್‌ನ ಬಾರ್ಮಿ ಆರ್ಮಿಗೆ ಸಮಾನವಾಗಿ ಹುಟ್ಟು ಹಾಕಿಕೊಂಡಿರುವ ಭಾರತ್ ಆರ್ಮಿ, ಇದೀಗ ವಿದೇಶದಲ್ಲಿ ಭಾರತದ ಅತಿ ದೊಡ್ಡ ಅಭಿಮಾನಿಗಳ ಬಳಗವಾಗಿ ತಲೆದೋರಿದೆ. ಪ್ರಸ್ತುತ ಭಾರತ್ ಆರ್ಮಿಯು ಮುಂಬರುವ ಏಕದಿನ ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಬಳಗಕ್ಕೆ ಬಲ ತುಂಬಲಿದೆ.
Vijaya Karnataka Web bharat-army


ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಪ್ರಕಟಣೆಯ ಪ್ರಕಾರ, 22 ದೇಶಕ್ಕೆ ಸೇರಿದ 8000ದಷ್ಟು ಭಾರತ್ ಆರ್ಮಿ ಅಭಿಮಾನಿಗಳು ಬ್ರಿಟನ್‌ನಲ್ಲಿ ನಡೆಯಲಿರುವ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾವನ್ನು ಬೆಂಬಲಿಸಲಿದೆ ಎಂದು ಹೇಳಿದೆ.

1999 ಏಕದಿನ ವಿಶ್ವಕಪ್ ವೇಳೆ ನಾಲ್ವರು ಸದಸ್ಯ ಬಲವಿದ್ದ ಭಾರತ್ ಆರ್ಮಿ ಇದೀಗ ವಿಶ್ವದ್ಯಾಂತ ಅತ್ಯಂತ ಪ್ರಬಲ ಅಭಿಮಾನಿಗಳ ಬಳಗವಾಗಿ ಗುರುತಿಸಿಕೊಂಡಿದೆ. ಅಲ್ಲದೆ ವಿದೇಶದಲ್ಲಿ ಪ್ರತಿಯೊಂದು ಭಾರತ ಪಂದ್ಯಗಳಿಗೂ 5000ದಿಂದ 6000 ಅಭಿಮಾನಿಗಳು ಬೆಂಬಲ ನೀಡುತ್ತಿದ್ದಾರೆ.

ಬ್ರಿಟನ್ ತಳಹದಿಯಲ್ಲೇ ಕೇಂದ್ರಿಕರಿಸಿರುವ ಭಾರತ್ ಆರ್ಮಿ, ಜಾಗತಿಕವಾಗಿ ವಿವಿಧ ದೇಶಗಳಲ್ಲಿ ಅನೇಕ ಪ್ರಾದೇಶಿಕ ಕಚೇರಿಗಳನ್ನು ಹೊಂದಿದೆ. ಇಂಗ್ಲೆಂಡ್ ಹೊರತಾಗಿಯೂ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಹಾಗೂ ಯುಎಇನಲ್ಲೂ ಪ್ರಬಲ ಅಭಿಮಾನಿಗಳ ಬಳಗವನ್ನು ಹೊಂದಿದೆ.

ಭಾರತ್ ಆರ್ಮಿ ಸದಸ್ಯರಾಗಿರುವ ಪಟೇಲ್ ಕಳೆದ 30 ವರ್ಷಗಳಿಂದ ಭಾರತವನ್ನು ಬೆಂಬಲಿಸಲು ವಿವಿಧ ಪ್ರದೇಶಗಳಿಗೆ ಭೇಟಿಕೊಟ್ಟಿದ್ದಾರೆ. 1990ರಲ್ಲಿ ಟ್ರೆಂಟ್ ಬ್ರಿಡ್ಜ್‌ನಲ್ಲಿ ಸಚಿನ್ ತೆಂಡೂಲ್ಕರ್ ಮೊದಲ ಪಂದ್ಯವನ್ನು ವೀಕ್ಷಿಸಿದ್ದೇನೆ. ಅಲ್ಲಿಂದ ಬಳಿಕ ಸಂಪೂರ್ಣ ಕೆರಿಯರ್ ಹಿಂಬಾಲಿಸಿದ್ದೇನೆ ಎಂದು ಹೆಮ್ಮೆಯಿಂದ ಹೇಳುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌