ಆ್ಯಪ್ನಗರ

ರಿಷಭ್‌ ಪಂತ್‌ ಯಶಸ್ಸಿಗೆ ಫಾರ್ಮುಲಾ ಹೇಳಿಕೊಟ್ಟ ಆಸೀಸ್‌ ಕ್ರಿಕೆಟಿಗ!

ಟೀಮ್‌ ಇಂಡಿಯಾದ ಯುವ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಮಿಂಚಬೇಕಾದರೆ ಮಾಡಬೇಕಾಗಿರುವುದು ಏನು ಎಂಬುದನ್ನು ಆಸ್ಟ್ರೇಲಿಯಾ ತಂಡದ ಮಾಜಿ ಕ್ರಿಕೆಟಿಗ ಬ್ರಾಡ್‌ ಹಾಗ್‌ ಹೇಳಿದ್ದಾರೆ.

Vijaya Karnataka Web 25 Mar 2020, 4:30 pm
ಬೆಂಗಳೂರು: ಕೊರೊನಾ ವೈರಸ್‌ ಭೀತಿಯಲ್ಲಿ ಕ್ರೀಡಾ ಲೋಕವೇ ಸ್ಥಬ್ಧವಾಗಿದ್ದು, ಕ್ರೀಡಾಪಟುಗಳೆಲ್ಲಾ ಮನೆಯಲ್ಲೇ ಉಳಿದು ವೈರಸ್‌ ಹರಡದಂತೆ ಎಚ್ಚರಿಕೆ ವಹಿಸಿದ್ದಾರೆ. ಈ ಸಂದರ್ಭದಲ್ಲಿ ಸೋಷಿಯಲ್‌ ಮೀಡಿಯಾ ಮೂಲಕ ಅಭಿಮಾನಿಗಳೊಟ್ಟಿಗೆ ಪ್ರಶ್ನೋತ್ತರ ಕೆಲಸದಲ್ಲಿಯೂ ಕ್ರೀಡಾ ತಾರೆಯರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
Vijaya Karnataka Web Rishabh Pant brad hogg 2020


ಆಸ್ಟ್ರೇಲಿಯಾ ತಂಡದ ಮಾಜಿ ಸ್ಪಿನ್ನರ್‌ ಬ್ರಾಡ್‌ ಹಾಗ್‌ ಕೂಡ ಟ್ವಿಟರ್‌ ಮೂಲಕ ಕ್ರಿಕೆಟ್‌ ಅಭಿಮಾನಿಗಳು ಕೇಳುತ್ತಿರುವ ಪ್ರಶ್ನೆಗೆ ಉತ್ತರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಟೀಮ್‌ ಇಂಡಿಯಾದ ಯುವ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ ಕುರಿತಾಗಿ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.

ಈ ನಡುವೆ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಭಾರತ ತಂಡದ ಆಡುವ ಹನ್ನೊಂದರ ಬಳಗದಿಂದ ಪಂತ್‌ ಹೊರಬಿದ್ದಿದ್ದು, ಕೆಎಲ್‌ ರಾಹುಲ್‌ ತಂಡದ ವಿಕೆಟ್‌ಕೀಪಿಂಗ್‌ ಬ್ಯಾಟ್ಸ್‌ಮನ್‌ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ. ಆದರೆ, ರಿಷಭ್‌ ಪಂತ್‌ ಅದ್ಭುತ ಪ್ರತಿಭೆ, ಅವರಲ್ಲಿ ಪ್ರೇಕ್ಷಕರನ್ನು ಸೆಳೆಯುವ ಅಮೋಘ ಶಕ್ತಿಯಿದೆ ಎಂದು ಹಾಗ್‌ ಹೇಳಿದ್ದಾರೆ.

ಐಪಿಎಲ್‌ನಲ್ಲಿ ಆರ್‌ಸಿಬಿ ವೈಫಲ್ಯಕ್ಕೆ ಕಾರಣಕೊಟ್ಟ ರಾಹುಲ್ ದ್ರಾವಿಡ್

"ರಿಷಭ್‌ ಪಂತ್‌ ಬ್ಯಾಟಿಂಗ್‌ಗೆ ಬಂದಾಗ ನಾನೂ ಕೂಡ ಟಿವಿ ಆನ್‌ ಮಾಡುತ್ತೇನೆ. ಏಕೆಂದರೆ ಆತ ಮನೋರಂಜನೆ ನೀಡುವುದರಲ್ಲಿ ಎತ್ತಿದ ಕೈ. ಅತನ ಸಮಸ್ಯೆ ಎಂದರೆ ಅಘಾದ ಪ್ರತಿಭೆ ಅವನಲ್ಲಿ ಅಡಕವಾಗಿದೆ. ಅದನ್ನು ಹೇಗೆ ಬಳಸಿಕೊಳ್ಳುವುದು ಎಂಬ ಗೊಂದಲದಲ್ಲಿ ಅವರಿದ್ದಾರೆ. ಹೀಗಾಗಿ ಆತನ ಮಾನಸಿಕ ಸಾಮರ್ಥ್ಯ ಹೆಚ್ಚಿಸಲು ಪ್ರತ್ಯೇಕ ಕೋಚ್‌ ನೇಮಕ ಮಾಡಬೇಕು. ಹಲವು ಕ್ರೀಡಾಪಟುಗಳು ಇಂದು ಮೈಂಡ್‌ ಕೋಚ್‌ ಸೇವೆ ಪಡೆದುಕೊಳ್ಳುತ್ತಾರೆ. ಪಂತ್‌ ಶ್ರೇಷ್ಠ ಲಯ ಕಂಡುಕೊಳ್ಳ ಬೇಕಾದರೆ ಮೈಂಡ್‌ ಕೋಚ್‌ ಅಗತ್ಯವಿದೆ," ಎಂದು ಪಂತ್‌ ಯಶಸ್ಸಿಗೆ ಬೇಕಿರುವ ಫಾರ್ಮುಲಾವನ್ನು ಹಾಗ್‌ ತಿಳಿಸಿದ್ದಾರೆ.

ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತ ತಂಡ ವೃದ್ಧಿಮಾನ್‌ ಸಹಾ ಮತ್ತು ರಿಷಭ್‌ ಪಂತ್‌ ಇಬ್ಬರಲ್ಲಿ ಒಬ್ಬರನ್ನು ಕೀಪರ್‌ ಆಗಿ ಆಯ್ಕೆ ಮಾಡಿಕೊಳ್ಳುತ್ತದೆ. ಆದರೆ, ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಸ್ಪರ್ಧೆ ಹೆಚ್ಚೊದ್ದು ಸಧ್ಯಕ್ಕೆ ಕೆಎಲ್‌ ರಾಹುಲ್‌ ಈ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ನಡುವೆ ಸಂಜು ಸ್ಯಾಮ್ಸನ್‌ ಅವರಿಂದಲೂ ಪಂತ್‌ಗೆ ಪೈಪೋಟಿ ಇದೆ.

21 ದಿನ ಲಾಕ್ ಡೌನ್: ಪ್ರಧಾನಿ ನಿರ್ಧಾರವನ್ನು ಶ್ಲಾಘಿಸಿದ ಅಶ್ವಿನ್

ಇದಕ್ಕೂ ಮುನ್ನ ಆಸ್ಟ್ರೇಲಿಯಾ ತಂಡದ ಮಾಜಿ ವಿಕೆಟ್‌ಕೀಪರ್‌ ಬ್ರಾಡ್‌ ಹ್ಯಾಡಿನ್‌ ಕೂಡ ಪಂತ್‌ಗೆ ಸಲಹೆ ನೀಡಿ, ಬೇರೆಯವರ ಶೈಲಿಯನ್ನು ಅನುಸರಿಸುವುದಕ್ಕಿಂತಲೂ ನಿಮ್ಮದೇ ಸ್ವಂತ ಶೈಲಿಯನ್ನು ರೂಢಿಸಿಕೊಳ್ಳಿ ಎಂದಿದ್ದರು.

"ಈ ಹಂತದಲ್ಲಿ ಆಡುವಾಗ ನಿರೀಕ್ಷೆಯ ಮಟ್ಟ ಸಹಜವಾಗಿಯೇ ಅಧಿಕವಾಗಿರುತ್ತದೆ. ಇದನ್ನು ಪ್ರತಿಯೊಬ್ಬರೂ ಎದುರಿಸಲೇ ಬೇಕು. ಈ ಸಂದರ್ಭದಲ್ಲಿ ಬೇರೆಯವರನ್ನು ಅನುಸರಿಸುವುದಕ್ಕಿಂತಲೂ ನಮ್ಮದೇ ಶೈಲಿಯ ಛಾಪನ್ನು ಮೂಡಿಸಬೇಕು. ನಾನು ಆಸ್ಟ್ರೇಲಿಯಾ ಟೆಸ್ಟ್‌ ತಂಡ ಸೇರಿದಾಗ ಗಿಲ್‌ಕ್ರಿಸ್ಟ್‌ ಆಗಲಿ ಇಯಾನ್‌ ಹೀಲಿ ಅವರ ಶೈಲಿಯನ್ನು ಅನುಸರಿಸಲಿಲ್ಲ. ಇಲ್ಲಿರುವ ನೈಜ ಸವಾಲೇ ಅದು. ಯಾರನ್ನೂ ಅನುಕರಿಸದೇ ನಮ್ಮದೇ ಶೈಲಿಯನ್ನು ತಂದುಕೊಳ್ಳಬೇಕು," ಎಂದು ಹ್ಯಾಡಿನ್‌ ಹೇಳಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌