ಆ್ಯಪ್ನಗರ

ಕುಂಬ್ಳೆಗೆ ವಿಷ್ ಮಾಡಿದ ಪ್ರಮುಖರು

ಅನಿಲ್ ಕುಂಬ್ಳೆಗೆ ಹುಟ್ಟುಹಬ್ಬದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

TOI.in 17 Oct 2018, 1:51 pm
ಹೊಸದಿಲ್ಲಿ: 48ನೇ ಹುಟ್ಟುಹಬ್ಬವನ್ನು ಆಚರಿಸುತ್ತಿರುವ ಭಾರತ ಕ್ರಿಕೆಟ್ ತಂಡದ ಸಾರ್ವಕಾಲಿಕ ಶ್ರೇಷ್ಠ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.
Vijaya Karnataka Web brithday wishes pours to anil kumble
ಕುಂಬ್ಳೆಗೆ ವಿಷ್ ಮಾಡಿದ ಪ್ರಮುಖರು


ಕುಂಬ್ಳೆ ಜೊತೆ ಮೈದಾನವನ್ನು ಹಂಚಿಕೊಂಡಿರುವ ಭಾರತ ಕ್ರಿಕೆಟ್ ತಂಡದ ಮಾಜಿ ಐಕಾನ್‌ಗಳಾದ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ವೀರೇಂದ್ರ ಸೆಹ್ವಾಗ್ ಮುಂತಾದವರು ಜಂಬೋಗೆ ಹುಟ್ಟುಹಬ್ಬದ ಶುಭಾಶಯವನ್ನು ಕೋರಿದ್ದಾರೆ.

ಸಚಿನ್ ತೆಂಡೂಲ್ಕರ್ ತಮ್ಮ ಹುಟ್ಟುಹಬ್ಬದ ಸಂದೇಶದಲ್ಲಿ ಪ್ರೀತಿಯ ಗೆಳೆಯ ಹಾಗೂ ಚಾಂಪಿಯನ್ ಎಂದು ಕರೆದಿದ್ದಾರೆ. ಹಾಗೆಯೇ ವೀರು ಅವರು ಭಾರತದ ಸರ್ವಶ್ರೇಷ್ಠ ಮ್ಯಾಚ್ ವಿನ್ನರ್ ಎಂದು ಶ್ಲಾಘನೆ ಮಾಡಿದ್ದಾರೆ. ವೀರು ತಮ್ಮ ಸಂದೇಶದಲ್ಲಿ ಧೈರ್ಯವನ್ನು ವ್ಯಾಖ್ಯಾನಿಸಿದ ವ್ಯಕ್ತಿ. ವೇಗಿಗಳಿಗೂ ಸಾಧ್ಯವಾಗದ ರೀತಿಯಲ್ಲಿನ ಕುಂಬ್ಳೆ ಅವರ ಯಾರ್ಕರ್ ಎಸೆತಗಳನ್ನು ನೆನಪಿಸಿಕೊಂಡಿದ್ದಾರೆ.

ಇನ್ನೊಂದಡೆ ಟರ್ಬನೇಟರ್ ಹರ್ಭಜನ್ ಸಿಂಗ್ ಅವರು ಎಲ್ಲರಿಗೂ ಸ್ಪೂರ್ತಿದಾಯಕ ಎಂದು ಕೊಂಡಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌