ಆ್ಯಪ್ನಗರ

ನಿಯಮಗಳಲ್ಲಿ ಬದಲಾವಣೆ; ಭಾರತ ತಂಡ ಆಯ್ಕೆ ಭಾನುವಾರಕ್ಕೆ ಮುಂದೂಡಿಕೆ

ನಿಮಯಗಳಲ್ಲಿ ಬದಲಾವಣೆ ಉಂಟಾಗಿರುವ ಹಿನ್ನಲೆಯಲ್ಲಿ ಟೀಮ್ ಇಂಡಿಯಾ ಆಯ್ಕೆ ಪ್ರಕ್ರಿಯೆನ್ನು ಭಾನುವಾರಕ್ಕೆ ಮುಂದೂಡಲಾಗಿದೆ. ಪ್ರಸ್ತುತ ಮಹೇಂದ್ರ ಸಿಂಗ್ ಧೋನಿ ಆಯ್ಕೆಯೇ ಪ್ರಮುಖ ಚರ್ಚಾ ವಿಷಯವಾಗಿರಲಿದೆ.

Vijaya Karnataka Web 19 Jul 2019, 10:26 am
Vijaya Karnataka Web team-india
ಮುಂಬಯಿ: ಕೊನೆಯ ಕ್ಷಣದಲ್ಲಿ ನಿಯಮಗಳಲ್ಲಿ ಬದಲಾವಣೆ ಉಂಟಾಗಿರುವ ಹಿನ್ನಲೆಯಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಆಯ್ಕೆ ಸಮಿತಿಯು ಮುಂಬರುವ ವೆಸ್ಟ್‌ಇಂಡೀಸ್ ಪ್ರವಾಸಕ್ಕಾಗಿನ ಟೀಮ್ ಇಂಡಿಯಾ ಆಯ್ಕೆಯನ್ನು ಜುಲೈ 21 ಭಾನುವಾರಕ್ಕೆ ಮುಂದೂಡಿದೆ.

ಈ ಮೊದಲು ಶುಕ್ರವಾರದಂದು ತಂಡ ಆರಿಸಲು ನಿರ್ಧರಿಸಲಾಗಿತ್ತು. ಆದರೆ ತಂಡಗಳ ಆಯ್ಕೆ ಸಭೆಯಲ್ಲಿ ಬಿಸಿಸಿಐ ಕಾರ್ಯದರ್ಶಿ ಪಾಲ್ಗೊಳ್ಳುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ನೇಮಕ ಮಾಡಿರುವ ಆಡಳಿತಾತ್ಮಕ ಸಮಿತಿ(ಸಿಒಎ) ಗುರುವಾರ ನಿರ್ದೇಶನವೊಂದನ್ನು ಹೊರಡಿಸಿದೆ. ಪರಿಣಾಮ ರಾಷ್ಟ್ರೀಯ ಆಯ್ಕೆ ಸಮಿತಿಯು ತಂಡದ ಆಯ್ಕೆ ಪ್ರಕ್ರಿಯೆಯನ್ನು ಭಾನುವಾರಕ್ಕೆ ಮುಂದೂಡಿದೆ.

ಸೆ. 3ರಿಂದ ಆರಂಭವಾಗಲಿರುವ ವೆಸ್ಟ್‌ ಇಂಡೀಸ್‌ ಟೆಸ್ಟ್‌ ಸರಣಿಗೆ ತಂಡದ ಆಯ್ಕೆಗೆ ಸಭೆ ಸೇರುವ ಮುನ್ನಾ ದಿನ ಈ ನಿರ್ದೇಶನ ಜಾರಿಯಾಗಿದ್ದು, ಬಿಸಿಸಿಐನ ಆಡಳಿತ ಯಂತ್ರದೊಳಗೆ ತಲ್ಲಣ ಉಂಟಾಗಿದೆ.

ಆಟಗಾರರ ಫಿಟ್ನೆಸ್ ರಿಪೋರ್ಟ್ ಕಾರ್ಡ್ ಸಹ ಶನಿವಾರದ ವೇಳೆಯಷ್ಟೇ ಆಯ್ಕೆ ಸಮಿತಿಯ ಕೈ ಸೇರಲಿದೆ. ನಾಯಕನ ಲಭ್ಯತೆ ಹೀಗೆ ಅನೇಕ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ತಂಡದ ಆಯ್ಕೆಯನ್ನು ಮುಂದೂಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌