ಆ್ಯಪ್ನಗರ

ಪೂಜಾರ ಕಳೆದೊಂದು ದಶಕದಲ್ಲಿ ಅತಿ ಹೆಚ್ಚು ಬಾರಿ ರನೌಟ್

ಕಳೆದೊಂದು ದಶತಕದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನೌಟ್‌ ಅಪಖ್ಯಾತಿಗೆ ಟೀಮ್ ಇಂಡಿಯಾ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ ಒಳಗಾಗಿದ್ದಾರೆ.

Times Now 10 Aug 2018, 10:55 pm
ಲಂಡನ್: ಕಳೆದೊಂದು ದಶತಕದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನೌಟ್‌ ಅಪಖ್ಯಾತಿಗೆ ಟೀಮ್ ಇಂಡಿಯಾ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ ಒಳಗಾಗಿದ್ದಾರೆ.
Vijaya Karnataka Web kohli-pujara


ಆತಿಥೇಯ ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಜತೆಗಿನ ಹೊಂದಾಣಿಕೆ ಕೊರತೆಯಿಂದಾಗಿ ಪೂಜಾರ ರನೌಟ್‌ಗೆ ಬಲಿಯಾಗಿದ್ದರು.

ತಮ್ಮ ಚೊಚ್ಚಲ ಪಂದ್ಯವನ್ನಾಡುತ್ತಿರುವ ಇಂಗ್ಲೆಂಡ್ ಆಟಗಾರ ಒಲ್ಲಿ ಪಾಪ್ ಅವರು ಪೂಜಾರ ರನೌಟ್ ಮಾಡಿದ್ದರು.

ಕಳೆದ ಪಂದ್ಯದಲ್ಲಿ ಹೊರಗುಳಿದಿದ್ದ ಪೂಜಾರ ತಂಡಕ್ಕೆ ಪುನರಾಗಮನ ಮಾಡಿಕೊಂಡಿದ್ದರು. ಆದರೆ ಬೇಗನೇ ಔಟಾಗುವ ಮೂಲಕ ನಿರಾಸೆ ಅನುಭವಿಸಿದ್ದಾರೆ. 25 ಎಸೆತಗಳನ್ನು ಎದುರಿಸಿದ್ದ ಪೂಜಾರ 1 ರನ್ ಮಾತ್ರ ಗಳಿಸಿದ್ದರು .

ಪೂಜಾರ ಇದೀಗ ಇಂಗ್ಲೆಂಡ್‌ನ ಮ್ಯಾಟ್ ಪ್ರಯರ್ ಜತೆಗೆ ಕಳೆದೊಂದು ದಶಕದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬಾರಿ ರನೌಟ್‌ಗೆ ಬಲಿಯಾಗಿದ್ದಾರೆ. ಹಾಗೆಯೇ ಭಾರತದ ಪರ ಕಳೆದ 13 ರನೌಟ್ ಪ್ರಸಂಗಳಲ್ಲಿ ಎಂಟು ಬಾರಿ ರನೌಟ್‌ಗೊಳಗಾಗಿದ್ದರೆ.

ಪ್ರಸಕ್ತ ಸಾಲಿನಲ್ಲೇ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಸೆಂಚುರಿಯನ್ ಪಂದ್ಯದಲ್ಲಿ ಸತತ ಎರಡು ಬಾರಿ ರನೌಟ್ ಆಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌