ಆ್ಯಪ್ನಗರ

ಭಾರತ ವಿರುದ್ಧ ಏಕದಿನ ಸರಣಿಗೆ ವಿಂಡೀಸ್‌ಗೆ ಗೇಲ್ ಬಲ

ಭಾರತ ವಿರುದ್ಧ ನಡೆಯಲಿರುವ ಏಕದಿನ ಸರಣಿಗಾಗಿನ ವೆಸ್ಟ್‌ಇಂಡೀಸ್ ತಂಡದಲ್ಲಿ ದೈತ್ಯ ಕ್ರಿಸ್ ಗೇಲ್ ಕಾಣಿಸಿಕೊಂಡಿದ್ದಾರೆ. ಇದು ಗೇಲ್ ಅವರ ವಿದಾಯ ಸರಣಿ ಎಂದೇ ಪರಿಗಣಿಸಲಾಗಿದ್ದು, ಬ್ರ್ಯಾನ್ ಲಾರಾ ದಾಖಲೆಯನ್ನು ಮುರಿಯುವುದು ನಿಚ್ಚಳವೆನಿಸಿದೆ.

Vijaya Karnataka Web 27 Jul 2019, 3:24 pm
ಸೈಂಟ್ ಜಾನ್ಸ್: ಭಾರತ ವಿರುದ್ಧ ತವರು ಮೈದಾನದಲ್ಲಿ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಗಾಗಿನ ವೆಸ್ಟ್‌ಇಂಡೀಸ್ ತಂಡವನ್ನು ಪ್ರಕಟಿಸಲಾಗಿದೆ.
Vijaya Karnataka Web chris-gayle-05


ಅದೇ ಹಾಗೆ ವಿಂಡೀಸ್ ದೈತ್ಯ ಕ್ರಿಸ್ ಗೇಲ್ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಗೇಲ್ ಅವರ ಕೊನೆಯ ಸರಣಿ ಎಂದೇ ಭಾವಿಸಲಾಗಿದೆ.

ಜೇಸನ್ ಹೋಲ್ಡನ್ ತಂಡವನ್ನು ಮುನ್ನಡೆಸುತ್ತಿದ್ದು, ಎಡಗೈ ಓಪನರ್ ಜಾನ್ ಕ್ಯಾಂಪ್‌ಬೆಲ್, ರೋಸ್ಟನ್ ಚೇಸನ್, ಹಾಗೂ ಆಲ್‌ರೌಂಡರ್ ಕೀಮೊ ಪೌಲ್ ಸಹ 14 ಸದಸ್ಯ ಬಳಗದ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದಾರೆ.

ವೇಳಾಪಟ್ಟಿ ಇಂತಿದೆ:
ಆ.8 ಮೊದಲ ಏಕದಿನ, ಗಯನಾ ನ್ಯಾಷನಲ್ ಸ್ಟೇಡಿಯಂ,
ಆ.11: ದ್ವಿತೀಯ ಏಕದಿನ, ಟ್ರಿನಿಡಾಡ್,
ಆ.14: ಅಂತಿಮ ಏಕದಿನ, ಟ್ರನಿಡಾಡ್

ಯೂನಿವರ್ಸ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ಏಕದಿನದಲ್ಲಿ 10,338 ರನ್ ಗಳಿಸಿದ್ದಾರೆ. ಅಲ್ಲದೆ ವಿಂಡೀಸ್ ದಿಗ್ಗಾಜ ಬ್ರ್ಯಾನ್ ಲಾರಾ ದಾಖಲೆಯನ್ನು ಮುರಿಯಲು (10,348) ಇನ್ನು 11 ರನ್‌ಗಳ ಅವಶ್ಯಕತೆಯಿದೆ.

ವಿಂಡೀಸ್ ತಂಡ ಇಂತಿದೆ: ಜೇಸನ್ ಹೋಲ್ಡರ್ (ನಾಯಕ), ಕ್ರಿಸ್ ಗೇಲ್, ಜಾನ್ ಕ್ಯಾಂಪ್‌ಬೆಲ್, ಎವಿನ್ ಲೆವಿಸ್, ಶಾಯ್ ಹೋಪ್, ಶಿಮ್ರಾನ್ ಹೆಟ್ಮಾಯೆರ್, ನಿಕೋಲಸ್ ಪೂರನ್, ರೋಸ್ಟನ್ ಚೇಸ್, ಫ್ಯಾಬಿಯನ್ ಅಲೆನ್, ಕಾರ್ಲೊಸ್ ಬ್ರಾತ್‌ವೇಟ್, ಕೀಮೊ ಪೌಲ್, ಶೆಲ್ಡನ್ ಕಾಟ್ರೆಲ್, ಒಶಾನೆ ಥಾಮಸ್, ಕೆಮರ್ ರೂಚ್.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌