ಆ್ಯಪ್ನಗರ

ಭುಜಕ್ಕೆ ಗಾಯ; ಲಿನ್ ಐಪಿಎಲ್‌ನಲ್ಲಿ ಆಡುವುದೇ ಡೌಟ್!

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ಭಾನುವಾರ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಕ್ಷೇತ್ರ ರಕ್ಷಣೆ ವೇಳೆ ಕೋಲ್ಕತ್ತಾ ನೈಟ್ ರೈಡರ್ಸ್ ಆರಂಭಿಕ ಬ್ಯಾಟ್ಸ್‌ಮನ್ ಕ್ರಿಸ್ ಲಿನ್ ಭುಜಕ್ಕೆ ಗಾಯ ಮಾಡಿಕೊಂಡಿದ್ದರು.

ಟೈಮ್ಸ್ ಆಫ್ ಇಂಡಿಯಾ 10 Apr 2017, 3:34 pm
ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ಭಾನುವಾರ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಕ್ಷೇತ್ರ ರಕ್ಷಣೆ ವೇಳೆ ಕೋಲ್ಕತ್ತಾ ನೈಟ್ ರೈಡರ್ಸ್ ಆರಂಭಿಕ ಬ್ಯಾಟ್ಸ್‌ಮನ್ ಕ್ರಿಸ್ ಲಿನ್ ಭುಜಕ್ಕೆ ಗಾಯ ಮಾಡಿಕೊಂಡಿದ್ದರು.
Vijaya Karnataka Web chris lynn takes a bad fall hurts left shoulder
ಭುಜಕ್ಕೆ ಗಾಯ; ಲಿನ್ ಐಪಿಎಲ್‌ನಲ್ಲಿ ಆಡುವುದೇ ಡೌಟ್!


ಜಾಸ್ ಬಟ್ಲರ್ ಹೊಡೆತ ಚೆಂಡನ್ನು ಹಿಂದಕ್ಕೆ ಮುಖ ಮಾಡುತ್ತಾ ಬೌಂಡರಿ ಲೈನ್‌ನತ್ತ ಓಡೊಡಿ ಬಂದ ಕ್ರಿಸ್ ಲಿನ್ ಡೈವ್ ಮಾಡಿ ಅದ್ಭುತ ಕ್ಯಾಚ್ ಹಿಡಿಯುವ ಪ್ರಯತ್ನ ಮಾಡಿದ್ದರು. ಈ ವೇಳೆ ಭುಜ ನೆಲಕ್ಕೆ ಬಡಿದು ಗಾಯ ಮಾಡಿಕೊಂಡಿದ್ದರು.

ತಮ್ಮ ಗಾಳದ ಆಳವನ್ನು ಅರಿತ ಲಿನ್ ಅಲ್ಲೇ ಕುಳಿತುಕೊಂಡು ಚೆಂಡು ಮರಳಿ ನೀಡುವ ಪ್ರಯತ್ನ ಮಾಡದೆ ಫಿಸಿಯೋ ಅವರನ್ನು ತಕ್ಷಣವೇ ಬರುವಂತೆ ಕೋರಿದ್ದರು.

ಈಗ ಲಿನ್ ಮುಂದಿನ ಐಪಿಎಲ್ ಪಂದ್ಯಗಳಲ್ಲಿ ಆಡುವುದು ಅನುಮಾನವೆನಿಸಿದೆ. ಇದರೊಂದಿಗೆ ಕೊಲ್ಕತ್ತಾ ತಂಡ ಹಿನ್ನಡೆ ಅನುಭವಿಸಿದೆ. ಮೊದಲ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಈ ಕ್ವೀನ್ಸ್‌ಲ್ಯಾಂಡ್ ಬ್ಯಾಟ್ಸ್‌ಮನ್ ನಾಯಕ ಗೌತಮ್ ಗಂಭೀರ್ ಜೊತೆಗೆ ಆರಂಭಿಕ ವಿಕೆಟ್‌ಗೆ ದಾಖಲೆಯ ಜೊತೆಯಾಟ ನೀಡಿದ್ದರು.

ಇದು ಕಳೆದ ಮೂರು ವರ್ಷಗಳ ಅವಧಿಯಲ್ಲಿ ಮೂರನೇ ಬಾರಿಗೆ ಭುಜಕ್ಕೆ ಗಾಯ ಮಾಡಿಕೊಳ್ಳುತ್ತಿದ್ದಾರೆ. ಪಂದ್ಯದ ಬಳಿಕ ಟ್ವಿಟ್ ಮಾಡಿರುವ ಲಿನ್, ಪ್ರೀತಿಯ ಕ್ರಿಕೆಟ್ ದೇವರೇ ನಾನೇನಾದರೂ ತಪ್ಪು ಮಾಡಿದೆನೇ ? ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ಲಿನ್ ಗಾಯದ ಆಳದ ಬಗ್ಗೆ ನಿಖರ ಮಾಹಿತಿ ಇನ್ನಷ್ಟೇ ಹೊರ ಬರಬೇಕಿದೆ. ತದಾ ಬಳಿಕವಷ್ಟೇ ಐಪಿಎಲ್‌ಗೆ ಲಭ್ಯವಾಗಲಿದ್ದಾರೆಯೇ ಎಂಬುದು ತಿಳಿದು ಬರಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌