ಆ್ಯಪ್ನಗರ

ಮಿಥಾಲಿ ವಿವಾದ; ಪೊವರ್‌ಗೆ ನಷ್ಟವಾಗಲಿದೆ ಕೋಚ್ ಸ್ಥಾನ!

ರಮೇಶ್ ಪೊವರ್ ಜೊತೆಗಿನ ಒಪ್ಪಂದ ಮುಂದುವರಿಸುವ ಸಾಧ್ಯತೆ ಕ್ಷೀಣ!

TOI.in 30 Nov 2018, 11:37 am
ಹೊಸದಿಲ್ಲಿ: ಭಾರತೀಯ ಮಹಿಳಾ ಏಕದಿನ ಕ್ರಿಕೆಟ್ ತಂಡದ ನಾಯಕ ಮಿಥಾಲಿ ರಾಜ್ ಜತೆಗಿನ ವಿವಾದ ಭುಗಿಲೆದ್ದಿರುವ ಹಿನ್ನಲೆಯಲ್ಲಿ ಮಹಿಳಾ ಕ್ರಿಕೆಟ್ ತಂಡದ ಕೋಚ್ ರಮೇಶ್ ಪೊವರ್‌ ಅವರನ್ನು ಮುಖ್ಯ ತರಬೇತುದಾರನಾಗಿ ಮುಂದುವರಿಸುವ ಸಾಧ್ಯತೆ ಕಡಿಮೆಾಗಿದೆ.
Vijaya Karnataka Web mithali-powar


ವೆಸ್ಟ್‌ಇಂಡೀಸ್‌ನಲ್ಲಿ ಇತ್ತೀಚೆಗಷ್ಟೇ ಅಂತ್ಯಗೊಂಡ ಐಸಿಸಿ ಮಹಿಳಾ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದಿಂದ ಮಿಥಾಲಿ ಅವರನ್ನು ಕೈಬಿಡಲಾಗಿತ್ತು. ಪರಿಣಾಮವೆಂಬಂತೆ ಸೆಮೀಸ್‌ನಲ್ಲಿ ಸೋತ ಭಾರತ ಕೂಟದಿಂದಲೇ ಹೊರನಡೆದಿತ್ತು.

ಇದರಿಂದ ಸಾಕಷ್ಟು ವಿವಾದಗಳು ಭುಗಿಲೆದ್ದಿದ್ದವು. ಬಿಸಿಸಿಐಗೆ ಮಿಥಾಲಿ ಬರೆದ ಪತ್ರದಲ್ಲಿ ಕೋಚ್ ಮೇಲೆ ಆರೋಪ ಮಾಡಿದ್ದರು. ಇದಾದ ಬೆನ್ನಲ್ಲೇ ಪೊವರ್, ಹಿರಿಯ ಆಟಗಾರ್ತಿ ವಿರುದ್ಧ ಪ್ರತ್ಯಾರೋಪ ಮಾಡಿದ್ದರು.

ಪೊವರ್ ಒಪ್ಪಂದವು ಶುಕ್ರವಾರದಂದು ಕೊನೆಗೊಳ್ಳಲಿದೆ. ಹಾಗಾಗಿ ಬಿಸಿಸಿಐ ಪೊವರ್ ಜೊತೆಗಿನ ಒಪ್ಪಂದವನ್ನು ಮುಂದುವರಿಸುವ ಸಾಧ್ಯತೆ ಕಡಿಮೆಯಾಗಿದೆ.

ನಾಯಕಿ ಹರ್ಮನ್‌ಪ್ರೀತ್ ಕೌರ್ ಹಾಗೂ ತಂಡದ ಇತರೆ ಆಟಗಾರ್ತಿಯರಿಗೆ ಪೊವರ್ ಬಗ್ಗೆ ಒಳ್ಳೆಯ ಅಭಿಪ್ರಾಯವಿದೆ. ಆದರೆ ಮಿಥಾಲಿ ಆರೋಪದ ಹಿನ್ನಲೆಯಲ್ಲಿ ತಂಡದ ನೈತಿಕತೆ ಕಾಪಾಡಿಕೊಳ್ಳುವ ಹಿನ್ನಲೆಯಲ್ಲಿ ಬಿಸಿಸಿಐ ಎಚ್ಚರಿಕೆಯ ನಡೆ ಸ್ವೀಕರಿಸುವ ಸಾಧ್ಯತೆಯಿದೆ.

ಮಿಥಾಲಿ ಅವರನ್ನು ಸೆಮಿಫೈನಲ್‌ನಿಂದ ಕೈಬಿಟ್ಟಿರುವುದು ಮಂಡಳಿಯಲ್ಲಿ ಕೆಲವರ ಅಸಮಾಧಾನಕ್ಕೂ ಕಾರಣವಾಗಿದೆ. ಒಟ್ಟಾರೆ ಮಿಥಾಲಿ ವಿವಾದದ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಪೊವಾರ್ ವಿಫಲವಾಗಿದ್ದಾರೆ ಎಂಬ ಆರೋಪವೂ ಎದ್ದಿದೆ.

ಇನ್ನೊಂದೆಡೆ ತನ್ನನ್ನು ತೇಜೋವಧೆ ಮಾಡಲೆತ್ನಿಸಿರುವ ಕೋಚ್ ಪೊವರ್ ಹಾಗೂ ಸಿಒಇ ಸದಸ್ಯೆ ಡಯಾನಾ ಎದುಲ್ಜಿ ವಿರುದ್ಧ ಮಿಥಾಲಿ ಗಂಭೀರ ಆರೋಪಗಳನ್ನು ಮಾಡಿದ್ದರು. ಅಲ್ಲದೆ ತನ್ನ ಪಾಲಿಗೆ ಕರಾಳ ದಿನ ಎಂದಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌