ಆ್ಯಪ್ನಗರ

ಪ್ರಧಾನಿ ಮೋದಿ ಕರೆಗೆ ಓಗೊಟ್ಟ ಸಚಿನ್

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗರಿಷ್ಠ ಮತದಾನಕ್ಕಾಗಿ ದೇಶದ ಜನತೆಗೆ ಪ್ರೇರಣೆ ತುಂಬುವಂತೆ ಸಚಿನ್ ತೆಂಡೂಲ್ಕರ್ ಸೇರಿದಂತೆ ಪ್ರಮುಖ ಕ್ರೀಡಾಪಟುಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದರು. ಇದಕ್ಕೆ ಸಚಿನ್ ಧನಾತ್ಮಕವಾಗಿ ಸ್ಪಂದಿಸಿದ್ದಾರೆ.

Vijaya Karnataka Web 15 Mar 2019, 5:39 pm
ಹೊಸದಿಲ್ಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗರಿಷ್ಠ ಮತದಾನವನ್ನು ಗುರಿಯಾಗಿರಿಸಿಕೊಂಡು ಸಚಿನ್ ತೆಂಡೂಲ್ಕರ್ ಸೇರಿದಂತೆ ದೇಶದ ಪ್ರಮುಖ ಕ್ರೀಡಾಪಟುಗಳಲ್ಲಿ 130 ಕೋಟಿ ಭಾರತೀಯರಿಗೆ ಪ್ರೇರಣೆ ತುಂಬುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದರು.
Vijaya Karnataka Web sachin-tendulkar


ಈ ಮೂಲಕ ಪ್ರಜಾತಂತ್ರವು ನೈಜ ಗೆಲುವನ್ನು ದಾಖಲಿಸಲಿ ಎಂದು ಮೋದಿ ಗುರಿ ಮಾಡಿದ್ದರು. ಮೋದಿ ತಮ್ಮ ಸರಣಿ ಟ್ವೀಟ್‌ನಲ್ಲಿ ಸಚಿನ್ ಜತೆಗೆ ಟೀಮ್ ಇಂಡಿಯಾ ಕಪ್ತಾನ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಮಾಜಿಗಳಾದ ಅನಿಲ್ ಕುಂಬ್ಳೆ, ವಿವಿಎಸ್ ಲಕ್ಷ್ಮಣ್, ವೀರೇಂದ್ರ ಸೆಹ್ವಾಗ್ ಮುಂತಾದವರನ್ನು ಉಲ್ಲೇಖಿಸಿದ್ದರು.

ಇದೀಗ ಪ್ರಧಾನಿ ಮೋದಿ ಅವರಿಗೆ ಸಚಿನ್ ತೆಂಡೂಲ್ಕರ್ ಪ್ರತಿಕ್ರಿಯೆ ನೀಡಿದ್ದಾರೆ. ಗೆಲುವಿನ ತಂಡವನ್ನು ನಿರ್ಮಿಸಲು ಪ್ರತಿಭೆಯನ್ನು ಗುರುತಿಸುವ ಅತ್ಯುತ್ತಮ ಆಯ್ಕೆಗಾರರ ಅಗತ್ಯವಿರುತ್ತದೆ. ಹಾಗೆಯೇ ವಿಜೇತ ರಾಷ್ಟ್ರವನ್ನು ನಿರ್ಮಿಸುವುದಕ್ಕಾಗಿ ಜನಪ್ರತಿನಿಧಿಗಳನ್ನು ಗುರುತಿಸಲು ನಮಗೆ ಬದ್ಧ ಮತದಾರರು ಬೇಕು. ಬನ್ನಿ ಯಶಸ್ವಿ ಭಾರತ ರಚಿಸಲು ಜವಾಬ್ದಾರಿ ವಹಿಸಿ ಎಂದು ಕರೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌