ಆ್ಯಪ್ನಗರ

ನಾಡಾ ಪರೀಕ್ಷೆಗೊಳಗಾಗಲಿರುವ ಭಾರತೀಯ ಕ್ರಿಕೆಟಿಗರು

ಭಾರತೀಯ ಕ್ರಿಕೆಟಿಗರನ್ನು ಮದ್ದು ಪರೀಕ್ಷೆಗೆ ಒಳಪಡಿಸುವಂತೆ ರಾಷ್ಟ್ರೀಯ ಉದ್ದೀಪನಾ ಮದ್ದು ತಡೆ ಘಟಕಕ್ಕೆ (ನಾಡಾ) ಕೇಂದ್ರ ಕ್ರೀಡಾ ಸಚಿವಾಲಯ ಸೂಚಿಸಿದೆ.

ಟೈಮ್ಸ್ ಆಫ್ ಇಂಡಿಯಾ 29 Oct 2017, 3:31 pm
ಹೊಸದಿಲ್ಲಿ: ಭಾರತೀಯ ಕ್ರಿಕೆಟಿಗರನ್ನು ಮದ್ದು ಪರೀಕ್ಷೆಗೆ ಒಳಪಡಿಸುವಂತೆ ರಾಷ್ಟ್ರೀಯ ಉದ್ದೀಪನಾ ಮದ್ದು ತಡೆ ಘಟಕಕ್ಕೆ (ನಾಡಾ) ಕೇಂದ್ರ ಕ್ರೀಡಾ ಸಚಿವಾಲಯ ಸೂಚಿಸಿದೆ.
Vijaya Karnataka Web conduct dope tests on indian cricketers govt to nada
ನಾಡಾ ಪರೀಕ್ಷೆಗೊಳಗಾಗಲಿರುವ ಭಾರತೀಯ ಕ್ರಿಕೆಟಿಗರು


ವಿಶ್ವ ಉದ್ದೀಪನಾ ತಡೆ ಘಟಕದ (ವಾಡಾ) ನಿಯಮದಂತೆ ಭಾರತೀಯ ಕ್ರಿಕೆಟ್‌ನಲ್ಲೂ ಪಾರದರ್ಶಕತೆ ತರಲು ಇಂತಹದೊಂದು ಕ್ರಮ ಕೈಗೊಳ್ಳಲಾಗುತ್ತಿದೆ.

ಆದರೆ ಹಿಂದಿನಿಂದಲೂ ನಾಡಾ ಪರೀಕ್ಷೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿರೋಧಿಸುತ್ತಲೇ ಬಂದಿದೆ. ಇದೀಗ ಕ್ರೀಡಾ ಸಚಿವಾಲಯ ಖುದ್ದಾಗಿ ಸೂಚನೆ ನೀಡಿದೆ.

ಬಿಸಿಸಿಐ ಟೂರ್ನಮೆಂಟ್‌ಗಳಲ್ಲಿ ಭಾಗವಹಿಸುವ ಭಾರತೀಯ ಕ್ರಿಕೆಟಿಗರ ರಕ್ತ ಮತ್ತು ಮೂತ್ರ ಪರೀಕ್ಷೆ ನಡೆಸುವ ಸಂಪೂರ್ಣ ಅಧಿರಾರವನ್ನು ನಾಡಾಗೆ ವಹಿಸಿಕೊಡಲಾಗಿದೆ. ನಾಡಾ ಭಾರತದಲ್ಲಿ ನಡೆಯಲಿರುವ ದೇಶೀಯ ಟೂರ್ನಮೆಂಟ್‌ಗಳಿಂದ ಮದ್ದು ಪರೀಕ್ಷೆಯನ್ನು ಆರಂಭಿಸಲಿದೆ.

ಇದಕ್ಕೂ ಮೊದಲು ನಾಡಾ ಪರೀಕ್ಷೆಗೆ ಸಮ್ಮತಿ ಸೂಚಿಸುವಂತೆ ಬಿಸಿಸಿಐ ಮನವೊಲಿಸಲು ಐಸಿಸಿಗೆ ವಾಡಾ ವಿನಂತಿಸಿಕೊಂಡಿತ್ತು. ಇಲ್ಲವಾದ್ದಲ್ಲಿ ನಾಡಾ ಪರವಾನಗಿಯನ್ನು ರದ್ದುಗೊಳಿಸುವ ಭೀತಿಯೊಡ್ಡಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌