ಹೊಸದಿಲ್ಲಿ: ಶುಭಮನ್ ಗಿಲ್ ಆಗಮನದಿಂದ ಮಯಾಂಕ್ ಅಗರ್ವಾಲ್ ಭಾರತ ಟೆಸ್ಟ್ ತಂಡದಲ್ಲಿ ತಮ್ಮ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಆದರೂ, ಟೀಮ್ ಇಂಡಿಯಾ ಓಪನರ್ ಜಿಮ್ನಲ್ಲಿ ವರ್ಕ್ಔಟ್ ಮಾಡುವ ಉತ್ಸಾಹ ಮಾತ್ರ ತಗ್ಗಿಲ್ಲ. ಅದರಂತೆ ಇತ್ತೀಚಿಗೆ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ವರ್ಕೌಟ್ ಮಾಡುತ್ತಿರುವ ಫೋಟೊವೊಂದನ್ನು ಪೋಸ್ಟ್ ಮಾಡಿದ್ದರು. ಹೆಚ್ಚಿನ ತೂಕದೊಂದಿಗೆ ವರ್ಕೌಟ್ ಮಾಡುತ್ತಿದ್ದ ಮಯಾಂಕ್ ಅಗರ್ವಾಲ್ ಅವರನ್ನು ಹಲವಾರು ಅಭಿಮಾನಿಗಳು ಮುಕ್ತಕಂಠದಿಂದ ಗುಣಗಾನ ಮಾಡಿದ್ದರು. ಆದರೆ, ನ್ಯೂಜಿಲೆಂಡ್ ತಂಡದ ಆಟಗಾರ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಹ ಆಟಗಾರ ಜೇಮ್ಸ್ ನೀಶಮ್, ಅಗರ್ವಾಲ್ ಅವರ ಪೋಸ್ ನೋಡಿ ಟ್ರೋಲ್ ಮಾಡಿದ್ದಾರೆ.
"ಇದೆಲ್ಲವೂ ಪ್ರಯತ್ನದ ಬಗ್ಗೆ. ಮತ್ತು ನೀವು ಪ್ರತಿದಿನ ಆ ಪ್ರಯತ್ನವನ್ನು ತಂದಾಗ, ಅಲ್ಲಿ ರೂಪಾಂತರ ಸಂಭವಿಸುತ್ತದೆ, " ಎಂದು ಮಯಾಂಕ್ ಅಗರ್ವಾಲ್ ಪೋಸ್ಟ್ ಮಾಡಿದ್ದ ಪೋಟೊಗೆ ಈ ರೀತಿ ಶೀರ್ಷಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಜೇಮ್ಸ್ ನೀಶಮ್, "ಅಭಿನಂದನೆಗಳು! ಬಾಯ್ ಅಥವಾ ಗರ್ಲ್?" ಎಂದು ಕಾಮೆಂಟ್ ಮಾಡಿದರು.
ಇಂಗ್ಲೆಂಡ್ ವಿರುದ್ಧ 4ನೇ ಟೆಸ್ಟ್ಗೆ ಭಾರತ ಪ್ಲೇಯಿಂಗ್ XI ನಲ್ಲಿ 2 ಬದಲಾವಣೆ!
ಜೇಮ್ಸ್ ನೀಶಮ್ ಇನ್ಸ್ಟಾಗ್ರಾಮ್ ಕಾಮೆಂಟ್ಗೆ ಈಗಾಗಲೇ 5,000 ಲೈಕ್ಗಳು ಬಂದಿದೆ. ಇದಕ್ಕೆ ತಕ್ಷಣ ಪ್ರತಿಕ್ರಿಯೆ ನೀಡಿದ ಮಯಾಂಕ್ ಅಗರ್ವಾಲ್, ಇದಕ್ಕೆ ಉತ್ತರವೇನೆಂದರೆ ಭಾರತೀಯ ಕ್ರಿಕೆಟ್ ತಂಡದ ಸ್ಟ್ರೆನ್ತ್ ಹಾಗೂ ಕಂಡೀಷನಿಂಗ್ ಹೆಡ್ ಕೋಚ್ ನಿಕ್ ವೆಬ್ಬಿ ಮುಖ ಎಂದು ಹೇಳಿದರು.
ಜೇಮ್ಸ್ ನೀಶಮ್ ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಹಾಗೂ ಪ್ರತಿಕ್ರಿಯೆ ನೀಡುವುದದಲ್ಲಿ ತುಂಬಾ ಚಿರಪರಿಚಿತ. ವಿವಿಧ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿನ ಅವರ ವರ್ತನೆಯಿಂದಾಗಿ, ಅನೇಕ ಅಭಿಮಾನಿಗಳು ನೀಶಮ್ ಅವರನ್ನು ಕ್ರಿಕೆಟ್ನ ತಮಾಷೆಯ ವ್ಯಕ್ತಿ ಎಂದು ಪರಿಗಣಿಸುತ್ತಾರೆ.
ದರೋಡೆ ಮಾಡಿ ಜೈಲು ಸೇರಿದ ಆರ್ಸಿಬಿ ತಂಡದ ಮಾಜಿ ಬ್ಯಾಟ್ಸ್ಮನ್!
ಜೇಮ್ಸ್ ನೀಶಮ್ ಹಾಗೂ ಮಯಾಂಕ್ ಅಗರ್ವಾಳ್ 2020ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಆಡಿದ್ದರು. ಕಿಂಗ್ಸ್ ಇಲೆವೆನ್ ಪಂಜಾಬ್ 2021ರ ಆವೃತ್ತಿಗೆ ಪಂಜಾಬ್ ಕಿಂಗ್ಸ್ ಎಂದು ಹೆಸರು ಬದಲಿಸಿಕೊಂಡಿದೆ. ಕೆ.ಎಲ್ ರಾಹುಲ್ ಪಡೆ ಕಳೆದ ಆವೃತ್ತಿಯಲ್ಲಿ ಅಭಿಮಾನಿಗಳಿಗೆ ಭರ್ಜರಿ ರಸದೌತಣ ಉಣಬಡಿಸಿತ್ತು.
ಹದಿಮೂರನೇ ಆವೃತ್ತಿಯಲ್ಲಿ ಪಂಜಾಬ್ ಮೂಲದ ಫ್ರಾಂಚೈಸಿ ಪರ ಜೇಮ್ಸ್ ನೀಶಮ್ ಆಡಿದ ಐದು ಪಂದ್ಯಗಳಿಂದ 19 ರನ್ ಹಾಗೂ ಎರಡು ವಿಕೆಟ್ ಪಡೆದಿದ್ದರು. ಮತ್ತೊಂದೆಡೆ ಮಯಾಂಕ್ ಆಡಿದ್ದ 11 ಪಂದ್ಯಗಳಿಂದ 424 ರನ್ ದಾಖಲಿಸಿದ್ದರು. ಇದರ ಹೊರತಾಗಿಯೂ ಪಂಜಾಬ್ ಅಂತಿಮ 4ರಲ್ಲಿ ಅರ್ಹತೆ ಪಡೆಯುವಲ್ಲಿ ವಿಫಲವಾಗಿತ್ತು.
'ಸ್ಪಿನ್ ಪಿಚ್' ಎಂದು ಗೋಳಾಡುವುದನ್ನು ನಿಲ್ಲಿಸಿ ಎಂದ ವಿವಿಯನ್ ರಿಚರ್ಡ್ಸ್!