ಆ್ಯಪ್ನಗರ

ಮದುವೆ ಮುಗಿದ ಬಳಿಕ ಪಾಕ್-ಆಸೀಸ್ ಪಂದ್ಯ ವೀಕ್ಷಿಸಿದ ನವಜೋಡಿಯ ಫೋಟೊ ವೈರಲ್!

ಅಮೆರಿಕದಲ್ಲಿ ನವಜೋಡಿ ಪಾಕ್-ಆಸೀಸ್ ಎರಡನೇ ಟಿ20 ಕ್ರಿಕೆಟ್‌ ಪಂದ್ಯ ವೀಕ್ಷಣೆಯ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಫೋಟೊವನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಕೂಡ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.

Vijaya Karnataka Web 6 Nov 2019, 7:30 pm
ದುಬೈ: ಕ್ರಿಕೆಟ್ ಕೇವಲ ಕೆಲ ರಾಷ್ಟ್ರಗಳಿಗೆ ಮಾತ್ರ ಸೀಮಿತವಲ್ಲ. ಕ್ರಿಕೆಟ್‌ ಆಟವನ್ನೇ ಧರ್ಮವೆಂದು ಪರಿಗಣಿಸಲಾಗುವುದು ಎಂಬುದಕ್ಕೆ ಅಮೆರಿಕದಲ್ಲಿ ಹೊಸದಾಗಿ ವಿವಾಹವಾಗಿರುವ ಜೋಡಿಯು ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ತಂಡಗಳ ನಡುವಣ ಎರಡನೇ ಅಂತಾರಾಷ್ಟ್ರೀಯ ಟಿ-20 ಪಂದ್ಯವನ್ನು ಟಿವಿಯಲ್ಲಿ ವೀಕ್ಷಿಸುತ್ತಿರುವ ಫೋಟೊವೊಂದು ಸಾಕ್ಷೀಕರಿಸಿದೆ.
Vijaya Karnataka Web Couple watch Australia Pakistan T20I


ಅಮೆರಿಕದಲ್ಲಿ ನವಜೋಡಿ ಪಾಕ್-ಆಸೀಸ್ ಎರಡನೇ ಟಿ20 ಕ್ರಿಕೆಟ್‌ ಪಂದ್ಯ ವೀಕ್ಷಣೆಯ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಫೋಟೊವನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಕೂಡ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಇಲ್ಲಿನ ಸಂದೇಶವನ್ನು ಅಮೆರಿಕದ ಅಭಿಮಾನಿಗಳಿಂದ ಪಡೆದಿದ್ದೇವೆ ಎಂದು ಶೀರ್ಷಿಕೆ ಅಡಿಯಲ್ಲಿ ಫೋಟೊ ಶೇರ್ ಮಾಡಿದೆ.

ಟಿ20 ಕ್ರಿಕೆಟ್‌: ಸುರೇಶ್‌ ರೈನಾ ದಾಖಲೆ ಮುರಿಯಲು ಸಜ್ಜಾದ 'ಹಿಟ್‌ಮ್ಯಾನ್‌' ರೋಹಿತ್‌ ಶರ್ಮಾ!

ಫೋಟೊ ಜತೆ ವರನ ಸಂದೇಶ ಇಂತಿದೆ. " ಡೈ ಹಾರ್ಡ್ ಕ್ರಿಕೆಟ್ ಅಭಿಮಾನಿಯಾಗಿ ಕಳೆದ ವಾರಾಂತ್ಯದಲ್ಲಿನ ನಮ್ಮ ಮದುವೆ ಪೋಟೊವನ್ನು ಶೇರ್ ಮಾಡಲು ಇಚ್ಚಿಸುತ್ತೇನೆ. ಸಂಪ್ರದಾಯದ ಪ್ರಕಾರ ಮದುವೆಯಾದ ಬಳಿಕ ನವದಂಪತಿಗಳು ಎರಡು ಕುಟುಂಬಗಳ ನಡುವೆ ಸಂಬಂಧ ಬೆಸೆಯುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಆದರೆ, ನಾವು ಮದುವೆಯಾಗಿ ಮನೆಗೆ ಹಿಂತಿರುಗಿದಾಗ(ಮಿಷಿಗನ್ ಯುಎಸ್‌ಎ) ಮಧ್ಯರಾತ್ರಿಯಾಗಿತ್ತು. ಈ ವೇಳೆ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ನಡುವೆ ಎರಡನೇ ಟಿ-20 ಪಂದ್ಯ ನಡೆಯುತ್ತಿತ್ತು. ಕಳೆದ ಒಂದು ವರ್ಷದಿಂದ ಇಲ್ಲಿ ನೆಲೆಸಿರುವ ನಾನು ಪಾಕಿಸ್ತಾನ ತಂಡದ ಪಂದ್ಯಗಳನ್ನು ತಡರಾತ್ರಿಯಲ್ಲಿ ನಿದ್ದೆಯಿಲ್ಲದೆ ವೀಕ್ಷಿಸುತ್ತಾ ಬಂದಿದ್ದೇನೆ. ಮದುವೆಯ ಮೊದಲ ರಾತ್ರಿಯಾದರೂ ಪಂದ್ಯದ ವೀಕ್ಷಣೆಯಂದ ದೂರ ಉಳಿಯಲಿ ಮನಸ್ಸು ಒಪ್ಪಿಲಿಲ್ಲ," ಪಾಕಿಸ್ತಾನ ಕ್ರಿಕೆಟ್‌ ತಂಡದ ಅಭಿಮಾನಿ ಹಸನ್‌ ತಸ್ಲೀಮ್‌ ಬರೆದುಕೊಂಡಿದ್ದಾರೆ.

ಭಾರತ ವಿರುದ್ಧದ ಸರಣಿಯಲ್ಲಿ ವಿಶೇಷ ದಾಖಲೆ ಬರೆಯಲು ಸಜ್ಜಾದ ಬಾಂಗ್ಲಾ ನಾಯಕ ಮಹ್ಮೂದುಲ್ಲ!

ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಪಾಕಿಸ್ತಾನ ತಂಡ ಮೂರು ಪಂದ್ಯಗಳ ಟಿ-20 ಸರಣಿಯ ಎರಡನೇ ಹಣಾಹಣಿಯಲ್ಲಿ ಸೋಲನುಭವಿಸಿತು. ಈ ಪಂದ್ಯದಲ್ಲಿ ಸ್ಟೀವ್‌ ಸ್ಮಿತ್ 51 ಎಸೆತಗಳಲ್ಲಿ ಅಜೇಯ 80 ರನ್ ಸಿಡಿಸಿ ಆಸೀಸ್ ಗೆಲುವಿಗೆ ಕಾರಣರಾಗಿದ್ದರು. ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯ ಶುಕ್ರವಾರ (ನ.8ರಂದು) ನಡೆಯಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌