ಆ್ಯಪ್ನಗರ

Thank You Gauti: ಯಶಸ್ವಿ ಆರಂಭಿಕನಿಗೆ ಅಭಿಮಾನಿಗಳ ಜೈ!

ಗೌತಮ್ ಗಂಭೀರ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವುದರೊಂದಿಗೆ ಟೀಮ್ ಇಂಡಿಯಾಗೆ ಅತೀವ ಪ್ರತಿಭಾವಂತ ಆಟಗಾರನ ನಷ್ಟವಾಗಿದೆ. ಟೆಸ್ಟ್, ಏಕದಿನ ಹಾಗೂ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಗೌತಿ ಕೊಡುಗೆ ಗಮನಾರ್ಹ.

Vijaya Karnataka Web 5 Dec 2018, 3:07 pm
ಹೊಸದಿಲ್ಲಿ: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವುದರೊಂದಿಗೆ ಮಗದೊಂದು ವಿಶ್ವಕಪ್ ಆಡುವ ಗೌತಮ್ ಗಂಭೀರ್ ಕನಸಿಗೆ ಬ್ರೇಕ್ ಬಿದ್ದಿದೆ.
Vijaya Karnataka Web gautam-gambhir-04


ಕಳೆದ ಕೆಲವು ವರ್ಷಗಳಿಂದ ಟೀಮ್ ಇಂಡಿಯಾದಿಂದ ದೂರವುಳಿದಿರುವ ಗೌತಿ, ಅವರ ಕಮ್ ಬ್ಯಾಕ್ ಕನಸು ಕೊನೆಗೂ ಕೈಗೂಡಲಿಲ್ಲ. ಇದರಿಂದಾಗಿ ತಮ್ಮ ದೀರ್ಘ ಕಾಲದ ಕ್ರಿಕೆಟ್ ಕೆರಿಯರ್‌ಗೆ ನಿವೃತ್ತಿ ಘೋಷಿಸಿದ್ದಾರೆ.

2007 ಚೊಚ್ಚಲ ಟ್ವೆಂಟಿ-20 ಹಾಗೂ 2011ರ ಏಕದಿನ ವಿಶ್ವಕಪ್ ಗೆಲುವಿನಲ್ಲಿ ಗಂಭೀರ್ ಮಹತ್ವದ ಪಾತ್ರ ವಹಿಸಿದ್ದರು. ಇದರಿಂದಾಗಿ ಅಪಾರ ಅಭಿಮಾನಿಗಳ ಬಳಗವನ್ನು ಕಟ್ಟಿಕೊಂಡಿದ್ದರು.

ಪ್ರಸ್ತುತ ನಿವೃತ್ತಿ ಸಲ್ಲಿಸಿರುವ ಗೌತಿಗೆ ಕ್ರಿಕೆಟ್ ಸ್ಟಾರ್ ಹಾಗೂ ಅಭಿಮಾನಿಗಳು ಥಾಂಕ್ ಯೂ ಗೌತಿ ಎಂಬ ಹ್ಯಾಶ್‌ಟ್ಯಾಗ್‌ ಅಡಿಯಲ್ಲಿ ತಮ್ಮ ಗೌರವವನ್ನು ಸಲ್ಲಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌