ಆ್ಯಪ್ನಗರ

ಪಂಚೆ-ಕುರ್ತಾ ಧರಿಸಿ ಕ್ರಿಕೆಟ್, ಸಂಸ್ಕೃತ ಕಾಮೆಂಟರಿ!

ಆಟಗಾರರು ಪಂಚೆ, ಕುರ್ತಾ ಸಾಂಪ್ರದಾಯಿಕ ಉಡುಗೆ ಧರಿಸಿದ್ದರೆ, ಕ್ರಿಕೆಟ್ ಕಾಮೆಂಟರಿಯನ್ನು ಸಂಸ್ಕೃತದಲ್ಲಿ ಹೇಳಲಾಗುತ್ತಿತ್ತು.

Vijaya Karnataka Web 12 Feb 2019, 9:40 pm
ಹೊಸದಿಲ್ಲಿ: ವಾರಾಣಸಿಯ ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾಟ ಎಲ್ಲರ ಗಮನ ಸೆಳೆಯಿತು.
Vijaya Karnataka Web cricket


ಆಟಗಾರರು ಪಂಚೆ, ಕುರ್ತಾ ಸಾಂಪ್ರದಾಯಿಕ ಉಡುಗೆ ಧರಿಸಿದ್ದರೆ, ಕ್ರಿಕೆಟ್ ಕಾಮೆಂಟರಿಯನ್ನು ಸಂಸ್ಕೃತದಲ್ಲಿ ಹೇಳಲಾಗುತ್ತಿತ್ತು.

ವಿಶ್ವವಿದ್ಯಾಲಯದ 70ನೇ ವರ್ಷಾಚರಣೆಯ ಅಂಗವಾಗಿ ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಗಿತ್ತು. ಕ್ಯಾಂಪಸ್‌ನಲ್ಲಿ ನಡೆದ ಮ್ಯಾಚ್, ಜನರ ಮನಸ್ಸನ್ನು ಗೆದ್ದಿತು ಮಾತ್ರವಲ್ಲದೆ, ಸಂಸ್ಕೃತ ಕಾಮೆಂಟರಿಗೆ ಎಲ್ಲರ ಮೆಚ್ಚುಗೆ ದೊರೆಯಿತು.

ಒಟ್ಟು ಐದು ತಂಡಗಳು ಭಾಗವಹಿಸಿದ್ದು, ಆಟಗಾರರು ಮಾತ್ರವಲ್ಲದೆ, ಕ್ರಿಕೆಟ್ ಪಂದ್ಯಾಟದಲ್ಲಿ ಅಂಪೈರ್ ಕಾಮೆಂಟರಿ ನೀಡಿದವರು ಕೂಡ ಸಾಂಪ್ರದಾಯಿಕ ಭಾರತೀಯ ಧಿರಿಸು ತೊಟ್ಟಿದ್ದು ವಿಶೇಷ.

ಧೋತಿ, ಕುರ್ತಾ ಧರಿಸಿದ್ದರೂ, ಆಟಗಾರರು ಯಾವುದೇ ಸಮಸ್ಯೆಯಿಲ್ಲದೆ ಸುಸೂತ್ರವಾಗಿ ಕ್ರಿಕೆಟ್ ಆಟದಲ್ಲಿ ಪಾಲ್ಗೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌