ಆ್ಯಪ್ನಗರ

ಟಿ-20ನಲ್ಲಿ 200 ಬಲಿ ಪಡೆದ ಧೋನಿ ನೂತನ ಮೈಲುಗಲ್ಲು

ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಭಾರತೀಯ ಕ್ರಿಕೆಟ್ ತಂಡದ ಮಾಜಿ ಹಾಗೂ ಹಿರಿಯ ಅನುಭವಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮಹೇಂದ್ರ ಸಿಂಗ್ ಧೋನಿ ನೂತನ ಮೈಲುಗಲ್ಲು ಸಾಧಿಸಿದ್ದಾರೆ. ಅದೇನೆಂದರೆ ಟಿ-20ನಲ್ಲಿ 200 ಬ್ಯಾಟ್ಸ್‌ಮನ್‌ಗಳ ಬಲಿ (dismissals) ಪಡೆದುಕೊಂಡಿದ್ದಾರೆ.

Vijaya Karnataka Web 21 Dec 2017, 2:55 pm
ಕಟಕ್: ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಭಾರತೀಯ ಕ್ರಿಕೆಟ್ ತಂಡದ ಮಾಜಿ ಹಾಗೂ ಹಿರಿಯ ಅನುಭವಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮಹೇಂದ್ರ ಸಿಂಗ್ ಧೋನಿ ನೂತನ ಮೈಲುಗಲ್ಲು ಸಾಧಿಸಿದ್ದಾರೆ. ಅದೇನೆಂದರೆ ಟಿ-20ನಲ್ಲಿ 200 ಬ್ಯಾಟ್ಸ್‌ಮನ್‌ಗಳ ಬಲಿ (dismissals) ಪಡೆದುಕೊಂಡಿದ್ದಾರೆ.
Vijaya Karnataka Web dhoni completes 200 dismissals in twenty20
ಟಿ-20ನಲ್ಲಿ 200 ಬಲಿ ಪಡೆದ ಧೋನಿ ನೂತನ ಮೈಲುಗಲ್ಲು


ಧೋನಿ ಅವರು 272 ಪಂದ್ಯಗಳಲ್ಲೀಗ 201 ಮಂದಿಯನ್ನು ಔಟ್ ಮಾಡುವುದರಲ್ಲಿ ಭಾಗಿಯಾಗಿದ್ದಾರೆ. ಈ ಮೂಲಕ ಪಾಕಿಸ್ತಾನದ ಕಮ್ರಾನ್ ಅಕ್ಮಲ್ ಬಳಿಕ ವಿಕೆಟ್ ಹಿಂದುಗಡೆ ನಿಂತು ಅತಿ ಹೆಚ್ಚು ಬಲಿ ತೆಗೆದುಕೊಂಡ ಗೌರವಕ್ಕೆ ಪಾತ್ರವಾಗಿದ್ದಾರೆ. ಅಕ್ಮಲ್ 211 ಪಂದ್ಯಗಳಲ್ಲಿ 207 ಬ್ಯಾಟ್ಸ್‌ಮನ್‌ಗಳ ಬಲಿ ತೆಗೆದುಕೊಂಡಿದ್ದರು.

ಹಾಗೆಯೇ ಪಂದ್ಯವೊಂದರಲ್ಲಿ 35ಕ್ಕೂ ಹೆಚ್ಚು ರನ್ ಗಳಿಸಿ ನಾಲ್ಕಕ್ಕೂ ಹೆಚ್ಚು ಬಲಿ ತೆಗೆದುಕೊಂಡಿರುವ ಮೊದಲ ಭಾರತೀಯ ವಿಕೆಟ್ ಕೀಪರ್ ಎಂದೆನಿಸಿಕೊಂಡಿದ್ದಾರೆ. ಶ್ರೀಲಂಕಾ ವಿರುದ್ಧದ ಕಟಕ್ ಪಂದ್ಯದಲ್ಲಿ ಅಜೇಯ 39 ರನ್ ಗಳಿಸಿದ್ದ ಧೋನಿ ನಾಲ್ಕು ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಈ ಮೂಲಕ ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ ಮತ್ತು ಪಾಕಿಸ್ತಾನ ಕಮ್ರಾನ್ ಅಕ್ಮಲ್ ಸಾಲಿಗೆ ಸೇರಿಕೊಂಡಿದ್ದಾರೆ. ಈ ಪೈಕಿ ಡಿ ಕಾಕ್ ಎರಡು ಬಾರಿ ಇದೇ ಸಾಧನೆ ಮಾಡಿದ್ದರು.

ಅಂತೆಯೇ ನಾಲ್ಕನೇ ಕ್ರಮಾಂಕದಲ್ಲಿ ಅದ್ಭುತ ಬ್ಯಾಟಿಂಗ್ ಬರೆದಿರುವ ಧೋನಿ, 11 ಇನ್ನಿಂಗ್ಸ್‌ಗಳಲ್ಲಿ 244 ರನ್‌ಗಳನ್ನು ಕಲೆ ಹಾಕಿದ್ದಾರೆ. ಈ ಪೈಕಿ ಏಳು ಬಾರಿ ನಾಟೌಟ್ ಎಂಬುದು ಗಮನಾರ್ಹವೆನಿಸುತ್ತದೆ. ಇದರಲ್ಲಿ ಒಂದು ಅರ್ಧಶತಕವೂ (2017ರಲ್ಲಿ ಇಂಗ್ಲೆಂಡ್ ವಿರುದ್ಧ 56 ರನ್) ಸೇರಿದೆ. ಹಾಗೆಯೇ 134.01ರ ಸ್ಟ್ರೈಕ್‌ರೇಟ್ ಕಾಪಾಡಿಕೊಂಡಿದ್ದಾರೆ.

ಇನ್ನು ಮೂರನೇ ಬಾರಿಗೆ ಧೋನಿ ಒಂದೇ ಪಂದ್ಯದಲ್ಲಿ ನಾಲ್ಕು ಮಂದಿಯನ್ನು ಬಲಿ ಪಡೆಯುವುದರಲ್ಲಿ ಯಶಸ್ವಿಯಾಗಿದ್ದಾರೆ. ಈ ಮುನ್ನ ಅಪಘಾನಿಸ್ತಾನ ಹಾಗೂ ಪಾಕಿಸ್ತಾನ ವಿರುದ್ಧವೂ ಇದೇ ಸಾಧನೆ ಮಾಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌