ಆ್ಯಪ್ನಗರ

ಧೋನಿ ಮಗದೊಂದು ಮಾಸ್ಟರ್ ಕ್ಲಾಸ್ ಸ್ಟಂಪಿಂಗ್

ನ್ಯೂಜಿಲೆಂಡ್ ವಿರುದ್ಧ ಮಗದೊಂದು ಮಾಸ್ಟರ್ ಕ್ಲಾಸ್ ಸ್ಟಂಪಿಂಗ್ ಮೂಲಕ ಮಹೇಂದ್ರ ಸಿಂಗ್ ಧೋನಿ ಗಮನ ಸೆಳೆದಿದ್ದಾರೆ. ಈ ಮೂಲಕ ತಾವು ಏಕೆ ಶ್ರೇಷ್ಠ ಎಂಬುದನ್ನು ಮಗದೊಮ್ಮೆ ನಿರೂಪಿಸಿದ್ದಾರೆ.

Vijaya Karnataka Web 10 Feb 2019, 2:09 pm

ಹೈಲೈಟ್ಸ್‌:

  • ಕಿವೀಸ್ ಮಿಂಚಿನ ವೇಗದ ಸ್ಟಂಪಿಂಗ್.
  • ನ್ಯೂಜಿಲೆಂಡ್ ವಿರುದ್ಧ ಗಮನಾರ್ಹ ಸಾಧನೆ.
  • 37ರ ಹರೆಯದಲ್ಲೂ ಧೋನಿ ಅದ್ಭುತ ವಿಕೆಟ್ ಕೀಪಿಂಗ್.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web ms-dhoni
ಹ್ಯಾಮಿಲ್ಟನ್: ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ತೃತೀಯ ಟ್ವೆಂಟಿ-20 ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಮಗದೊಂದು ಮಿಂಚಿನ ವೇಗದ ಸ್ಟಂಪಿಂಗ್ ಮೂಲಕ ಗಮನ ಸೆಳೆದಿದ್ದಾರೆ.
37ರ ಹರೆಯದಲ್ಲೂ ಯುವ ಆಟಗಾರರನ್ನು ನಾಚಿಸುವ ರೀತಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಮಹಿ, ಲೀಲಾಜಾಲವಾಗಿ ಸ್ಟಂಪ್‌ಗಳನ್ನು ಉಡಾಯಿಸುತ್ತಾರೆ.

ಮಿಂಚಿನ ವೇಗದ ಸ್ಟಂಪಿಂಗ್ ಹವ್ಯಾಸ ಮಾಡಿರುವ ಮಹಿ, ನ್ಯೂಜಿಲೆಂಡ್ ವಿರುದ್ಧವೂ ಪ್ರಭಾವಿ ಪ್ರದರ್ಶನವನ್ನು ಮುಂದುವರಿಸಿದ್ದಾರೆ.

ಕಿವೀಸ್ ಓಪನರ್‌ಗಳಾದ ಟಿಮ್ ಸೀಫರ್ಟ್ ಹಾಗೂ ಕಾಲಿನ್ ಮನ್ರೊ ಬಿರುಸಿನ ವೇಗದಿಂದ ರನ್ ಪೇರಿಸುತ್ತಿದ್ದರು. ಈ ಸಂದರ್ಭದಲ್ಲಿ ಕುಲ್‌ದೀಪ್ ಯಾದವ್ ದಾಳಿಯಲ್ಲಿ ಅಪಾಯಕಾರಿ ಸೀಫರ್ಟ್‌ರನ್ನು ಸ್ಟಂಪಿಂಗ್ ಮೂಲಕ ಔಟ್ ಮಾಡಿದರು.

ಸ್ವತ: ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿರುವ ಸೀಫರ್ಟ್, ಧೋನಿ ಮುಂದೆ ಆಟ ಸಾಗಲಿಲ್ಲ. ಪರಿಣಾಮ ಪೆವಿಲಿಯನ್‌ನತ್ತ ಹೆಜ್ಜೆ ಹಾಕಬೇಕಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌