ಆ್ಯಪ್ನಗರ

ಧೋನಿ ಫಿನಿಶಸ್ ಇನ್ ಸ್ಟೈಲ್; ಮ್ಯಾಚ್ ವಿನ್ನಿಂಗ್ ಫಿಫ್ಟಿ

ಹಿರಿಯ ಅನುಭವಿ ಬ್ಯಾಟ್ಸ್‌ಮನ್ ಮಹೇಂದ್ರ ಸಿಂಗ್ ಧೋನಿ ಏಕದಿನದಲ್ಲಿ 71ನೇ ಅರ್ಧಶತಕ ಸಾಧನೆ ಮಾಡಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾ ವಿರುದ್ಧ ಮೊದಲ ಏಕದಿನ ಪಂದ್ಯದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.

Vijaya Karnataka Web 2 Mar 2019, 9:44 pm
ಬೆಂಗಳೂರು: ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಆರು ವಿಕೆಟುಗಳ ಅಂತರದ ಗೆಲುವು ದಾಖಲಿಸಿದೆ.
Vijaya Karnataka Web ms-dhoni-07


ಅತೀವ ಒತ್ತಡದ ಪಂದ್ಯದಲ್ಲೂ ತಾಳ್ಮೆಯುತ ಇನ್ನಿಂಗ್ಸ್ ಕಟ್ಟಿದ ಮಾಜಿ ನಾಯಕ ಹಾಗೂ ಹಿರಿಯ ಅನುಭವಿ ಬ್ಯಾಟ್ಸ್‌ಮನ್ ಮಹೇಂದ್ರ ಸಿಂಗ್ ಧೋನಿ ಮಗದೊಮ್ಮೆ ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಿದ್ದಾರೆ.

ರನ್ ಚೇಸಿಂಗ್‌ನಲ್ಲಿ ಎಂದೂ ಟೀಮ್ ಇಂಡಿಯಾದ ಆಪತ್ಬಾಂಧವನಾಗಿರುವ ಧೋನಿ, ಈ ಮೂಲಕ ಮುಂಬರುವ ಏಕದಿನ ಸರಣಿಯಲ್ಲೂ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ ಎಂಬುದನ್ನು ಸಾರಿದ್ದಾರೆ.

ವಿನ್ನಿಂಗ್ ಶಾಟ್ ಬಾರಿಸಿದ ಧೋನಿ ಏಕದಿನದಲ್ಲಿ 71ನೇ ಅರ್ಧಶತಕ ಸಾಧನೆ ಮಾಡಿದರು. ಅಲ್ಲದೆ ಕೇದರ್ ಜಾಧವ್ ಜತೆ ಮುರಿಯದ ಐದನೇ ವಿಕೆಟ್‌ಗೆ 141 ರನ್‌ಗಳ ಜತೆಯಾಟದಲ್ಲಿ ಭಾಗಿಯಾದರು.

72 ಎಸೆತಗಳನ್ನು ಎದುರಿಸಿದ ಧೋನಿ ಆರು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ ಅಜೇಯ 59 ರನ್ ಗಳಿಸಿದರು. ಅತ್ತ 87 ಎಸೆತಗಳನ್ನು ಎದುರಿಸಿದ ಕೇದರ್ ಜಾಧವ್ ಒಂಬತ್ತು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 81 ರನ್ ಗಳಿಸಿ ಔಟಾಗದೆ ಉಳಿದರು.

ಸ್ನಾಯು ಸೆಳೆತಕ್ಕೊಳಗಾದರೂ 37ರ ಹರೆಯದ ಧೋನಿ ತಮ್ಮ ಬ್ಯಾಟ್ ಮೂಲಕವೇ ಟೀಕಾಕಾರರಿಗೆ ಉತ್ತರ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌