ಆ್ಯಪ್ನಗರ

ಏಕದಿನದಲ್ಲಿ ಅತಿ ಹೆಚ್ಚು ಸಿಕ್ಸರ್; ಧೋನಿಯೇ ಅಗ್ರ

ಏಕದಿನದಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಭಾರತೀಯ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ಮಹೇಂದ್ರ ಸಿಂಗ್ ಧೋನಿ ತಮ್ಮ ಬಳಿಯೇ ಕಾಪಾಡಿಕೊಂಡಿದ್ದಾರೆ. ಧೋನಿ ಇದೀಗ ಒಟ್ಟು 216 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ.

Vijaya Karnataka Web 2 Mar 2019, 8:55 pm
ಹೈದಾರಾಬಾದ್: ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಭಾರತೀಯ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ಮಹೇಂದ್ರ ಸಿಂಗ್ ಧೋನಿ ತಮ್ಮ ಬಳಿಯೇ ಕಾಪಾಡಿಕೊಂಡಿದ್ದಾರೆ.
Vijaya Karnataka Web ms-dhoni-04


ಆಸ್ಟ್ರೇಲಿಯಾ ವಿರುದ್ಧ ಹೈದಾರಾಬಾದ್‌ನಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಧೋನಿ ಸಿಕ್ಸರ್ ಬಾರಿಸಿದ್ದರು. ಈ ಮೂಲಕ ಏಕದಿನದಲ್ಲಿ ಸಿಕ್ಸರ್‌ಗಳ ಸಂಖ್ಯೆಯನ್ನು 216ಕ್ಕೆ ಏರಿಸಿದ್ದಾರೆ.

ಇದರೊಂದಿಗೆ ಎರಡನೇ ಸ್ಥಾನದಲ್ಲಿರುವ ರೋಹಿತ್ ಶರ್ಮಾ ಅವರೊಂದಿಗೆ ಒಂದು ಸಿಕ್ಸರ್‌ನ ಮುನ್ನಡೆಯನ್ನು ಕಾಪಾಡಿಕೊಂಡಿದ್ದಾರೆ.

ಕಳೆದ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯಲ್ಲಿ ಧೋನಿ ಸಿಕ್ಸರ್ ದಾಖಲೆಯನ್ನು ರೋಹಿತ್ ಸರಿಗಟ್ಟಿದ್ದರು.

ಏಕದಿನದಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಭಾರತೀಯ ಬ್ಯಾಟ್ಸ್‌ಮನ್‌ಗಳು:
ಮಹೇಂದ್ರ ಸಿಂಗ್ ಧೋನಿ: 216
ರೋಹಿತ್ ಶರ್ಮಾ: 215
ಸಚಿನ್ ತೆಂಡೂಲ್ಕರ್: 195
ಸೌರವ್ ಗಂಗೂಲಿ: 189
ಯುವರಾಜ್ ಸಿಂಗ್: 153
ವೀರೇಂದ್ರ ಸೆಹ್ವಾಗ್: 131

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌