ಆ್ಯಪ್ನಗರ

ಧೋನಿ ಸಾನಿಧ್ಯದಲ್ಲಿ ವಿರಾಟ್‌ ಕಂಫರ್ಟ್ ಆಗಿರುತ್ತಾರೆ: ಕುಂಬ್ಳೆ

ವಿಕೆಟ್ ಹಿಂದುಗಡೆ ನಿಂತು ಅಮೂಲ್ಯ ಮಾರ್ಗದರ್ಶನಗಳನ್ನು ನೀಡುವ ಮಹೇಂದ್ರ ಸಿಂಗ್ ಧೋನಿ ಸಾನಿಧ್ಯದಲ್ಲಿ ವಿರಾಟ್ ಕೊಹ್ಲಿ ಹೆಚ್ಚು ಆರಾಮವಾಗಿರುತ್ತಾರೆ ಎಂದು ಮಾಜಿ ನಾಯಕ ಅನಿಲ್ ಕುಂಬ್ಳೆ ಅಭಿಪ್ರಾಯಪಟ್ಟಿದ್ದಾರೆ.

Vijaya Karnataka Web 19 Mar 2019, 10:56 am
ಬೆಂಗಳೂರು: ಮಾಜಿ ನಾಯಕ ಹಾಗೂ ಹಿರಿಯ ಅನುಭವಿ ಬ್ಯಾಟ್ಸ್‌ಮನ್ ಮಹೇಂದ್ರ ಸಿಂಗ್ ಧೋನಿ ಸಾನಿಧ್ಯದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೆಚ್ಚು ಆರಾಮದಾಯಕವಾಗಿರುತ್ತಾರೆ ಎಂದು ಮಾಜಿ ಲೆಗ್ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ಅಭಿಪ್ರಾಯಪಟ್ಟಿದ್ದಾರೆ.
Vijaya Karnataka Web dhoni-kohli-02


ವಿಕೆಟ್ ಹಿಂದುಗಡೆ ಮಹೇಂದ್ರ ಸಿಂಗ್ ಧೋನಿ ಪಂದ್ಯ ನಿಯಂತ್ರಿಸುವುದರ ಬಗ್ಗೆಯೂ ಕುಂಬ್ಳೆ ಉಲ್ಲೇಖಿಸಿದರು.

ವಿಕೆಟ್ ಹಿಂದೆ ನಿಂತು ಧೋನಿ ನೀಡುವ ಮಾರ್ಗದರ್ಶನಗಳು ಖಂಡಿತವಾಗಿಯೂ ಕೊಹ್ಲಿಗೆ ನೆರವಾಗುತ್ತದೆ ಎಂದರು.

ಕೊಹ್ಲಿ ನಾಯಕತ್ವದಲ್ಲೂ ಧೋನಿ ಅನಧಿಕೃತ ನಾಯಕನಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಬೌಲರ್‌ಗಳಿಗೆ ನೀಡುವ ಸಲಹೆಗಳಿಂದ ಟೀಮ್ ಇಂಡಿಯಾಕ್ಕೆ ಪ್ರಯೋಜನವುಂಟಾಗಿದೆ. ಧೋನಿ ಪಾಲಿಗೆ ಕಪ್ತಾನಗಿರಿಯು ಸಹಜವಾಗಿಯೇ ಬರುತ್ತಿದೆ ಎಂದು ಹೇಳಿದರು.

ಧೋನಿ ದೀರ್ಘ ಕಾಲದ ವರೆಗೆ ನಾಯಕತ್ವ ವಹಿಸಿದ್ದಾರೆ. ಹಾಗಾಗಿ ಇತರರಿಗಿಂತ ಹೆಚ್ಚಾಗಿ ಪಂದ್ಯವನ್ನು ಗ್ರಹಿಸಬಲ್ಲರು. ಹಾಗಾಗಿ ಟೀಮ್ ಇಂಡಿಯಾದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದಾರೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌