ಆ್ಯಪ್ನಗರ

ಟೈಮಿಂಗ್ ಮೇಲೆ ನಂಬಿಕೆಯಿಟ್ಟಿದ್ದೇನೆ: ರೋಹಿತ್

ಒಮ್ಮೆ ರೋಹಿತ್ ಶರ್ಮಾ ಕ್ರೀಸಿನಲ್ಲಿ ಸೆಟ್ ಆದರೆ ಅವರ ಬ್ಯಾಟಿಂಗ್ ವೈಭವ ನೋಡುವುದೇ ಸೊಗಸು. ಆರಂಭದಲ್ಲಿ ಎಚ್ಚರಿಕೆಯ ಆಟವಾಡುವ ರೋಹಿತ್ ಬಳಿಕ ಲೀಲಾಜಾಲವಾಗಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸುತ್ತಾರೆ.

TIMESOFINDIA.COM 23 Dec 2017, 3:51 pm
ಇಂದೋರ್: ಒಮ್ಮೆ ರೋಹಿತ್ ಶರ್ಮಾ ಕ್ರೀಸಿನಲ್ಲಿ ಸೆಟ್ ಆದರೆ ಅವರ ಬ್ಯಾಟಿಂಗ್ ವೈಭವ ನೋಡುವುದೇ ಸೊಗಸು. ಆರಂಭದಲ್ಲಿ ಎಚ್ಚರಿಕೆಯ ಆಟವಾಡುವ ರೋಹಿತ್ ಬಳಿಕ ಲೀಲಾಜಾಲವಾಗಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸುತ್ತಾರೆ.
Vijaya Karnataka Web dont have much power rely on timing the ball says rohit
ಟೈಮಿಂಗ್ ಮೇಲೆ ನಂಬಿಕೆಯಿಟ್ಟಿದ್ದೇನೆ: ರೋಹಿತ್


ಓರ್ವ ಆಲಸಿಯಂತೆ ಕಂಡರೂ ಅನಾಯಾಸವಾಗಿ ಚೆಂಡನ್ನು ಬೌಂಡರಿಗಟ್ಟುವ ರೋಹಿತ್ ಪ್ರತಿಭೆ ಅಭಿಮಾನಿಗಳನ್ನು ಮನಸೊರೆಗೊಂಡಿದೆ.

ಶ್ರೀಲಂಕಾ ವಿರುದ್ಧ ಕೇವಲ 35 ಎಸೆತಗಳಲ್ಲಿ ಶತಕ ಬಾರಿಸುವ ಮೂಲಕ ಹಿಟ್‌ಮ್ಯಾನ್, ಟ್ವೆಂಟಿ-20ನಲ್ಲಿ ವಿಶ್ವದಾಖಲೆಯನ್ನು ಸರಿಗಟ್ಟಿದ್ದರು.

ಇದು ಟ್ವೆಂಟಿ-20 ಕ್ರಿಕೆಟ್‌ನಲ್ಲಿ ರೋಹಿತ್ ಬ್ಯಾಟ್‌ನಿಂದ ದಾಖಲಾದ ಎರಡನೇ ಶತಕವೂ ಹೌದು. ಈ ಮೂಲಕ ಲಂಕಾ ವಿರುದ್ಧ 88 ರನ್ ಅಂತರದ ಭರ್ಜರಿ ಗೆಲುವು ದಾಖಲಿಸುವ ಮೂಲಕ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿತ್ತು.

ಖಂಡಿತವಾಗಿಯೂ ನನಗೆ ಹೆಚ್ಚು ತೋಲ್ಬಳವಿಲ್ಲ. ಹಾಗಾಗಿ ಟೈಮಿಂಗ್ ಮೇಲೆ ಹೆಚ್ಚು ನಂಬಿಕೊಂಡಿದ್ದೇನೆ. ನನಗೆ ಗೊತ್ತು ಇದು ನನ್ನ ಶಕ್ತಿ ಹಾಗೂ ವೀಕ್‌ನೆಸ್ ಆಗಿದೆ ಎಂದು ರೋಹಿತ್ ಪ್ರತಿಕ್ರಿಯಿಸಿದರು.

ತಾಂತ್ರಿಕವಾಗಿ ಯಾವುದೇ ಹೊಂದಾಣಿಕೆ ನಡೆಸುತ್ತಿದ್ದಾರೆಯೇ ಎಂಬುದಕ್ಕೆ, ಆರು ಓವರ್‌ಗಳ ಬಳಿಕ ಫಿಲ್ಡಿಂಗ್ ಹರಡುತ್ತದೆ. ಆದರೆ ಬೌಂಡರಿ ಬಾರಿಸಲು ನನ್ನ ದಾರಿಯನ್ನು ಹುಡುಕಿರುತ್ತೇನೆ. ಮೈದಾನದಲ್ಲೇ ಚೆಂಡನ್ನು ಬಾರಿಸುವುದು ಹೆಚ್ಚು ಮಹತ್ವದೆನಿಸುತ್ತದೆ ಎಂದು ವಿವರಿಸಿದರು.

ಮೈದಾನದ ಸುತ್ತಲೂ ರನ್ ಗಳಿಸುವುದು ನನ್ನ ಇರಾದೆಯಾಗಿದೆ. ಎಲ್ಲ ಪ್ರಕಾರದ ಆಟದಲ್ಲೂ ನಾನದನ್ನು ಪ್ರಯತ್ನಿಸುತ್ತೇನೆ ಎಂದು ರೋಹಿತ್ ಸೇರಿಸಿದರು.

ಅದೇ ಹೊತ್ತಿಗೆ ತಾವು ಮೈಲುಗಲ್ಲಿಗಾಗಿ ಆಡುತ್ತಿಲ್ಲ ಎಂಬುದನ್ನು ರೋಹಿತ್ ಸ್ಪಪ್ಟಪಡಿಸಿದರು. ತಂಡಕ್ಕಾಗಿ ಆದಷ್ಟು ವೇಗದಲ್ಲಿ ಆಡುವುದು ನನ್ನ ಇರಾದೆಯಾಗಿತ್ತು. ಸೆಂಚುರಿ ಗಳಿಸುವ ಯೋಜನೆಯೊಂದಿಗೆ ನಾನು ಕ್ರೀಸಿಗಿಳಿಯುವುದಿಲ್ಲ. ಆದರೆ ತಂಡಕ್ಕಾಗಿ 100, 200 ಯಾಕೆ 300 ಗಳಿಸುವ ಗುರಿ ನನ್ನದಾಗಿರುತ್ತದೆ ಎಂದರು.

ಮೊದಲ ಬಾರಿ ನಾಯಕನಾಗಿದ್ದರಿಂದ ಸಹಜವಾಗಿಯೇ ಒತ್ತಡವಿತ್ತು. ಮುಂದಿನ ಪಂದ್ಯ ಮುಂಬಯಿನಲ್ಲಿ ನಡೆಯಲಿದೆ. ಹಾಗಾಗಿ ಹಾಗಾಗಿ ಪ್ರತಿಯೊಂದು ಕ್ಷಣವೂ ನನಗೆ ಮುಖ್ಯ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌