ಆ್ಯಪ್ನಗರ

ಐಪಿಎಲ್‌ನಲ್ಲಿಂದು ಡಬಲ್‌ ಧಮಾಕಾ

ಸೋಲಿನೊಂದಿಗೆ ಐಪಿಎಲ್‌-9ರಲ್ಲಿ ಅಭಿಯಾನ ಆರಂಭಿಸಿರುವ ಸನ್‌ರೈಸರ್ಸ್‌ ಹೈದರಾಬಾದ್‌, ಇಲ್ಲಿ ಶನಿವಾರ ನಡೆಯಲಿರುವ ದಿನದ ಮೊದಲ ಪಂದ್ಯದಲ್ಲಿ ಕೋಲ್ಕೊತಾ ನೈಟ್‌ ರೈಡರ್ಸ್‌ ತಂಡವನ್ನು ಎದುರಿಸಲಿದೆ.

ಏಜೆನ್ಸೀಸ್ 16 Apr 2016, 4:00 am

ಸನ್‌ರೈಸರ್ಸ್‌ - ನೈಟ್‌ ರೈಡರ್ಸ್‌ | ಮುಂಬೈ ಇಂಡಿಯನ್ಸ್‌ - ಗುಜರಾತ್‌ ಲಯನ್ಸ್‌

ಹೈದರಾಬಾದ್‌: ಸೋಲಿನೊಂದಿಗೆ ಐಪಿಎಲ್‌-9ರಲ್ಲಿ ಅಭಿಯಾನ ಆರಂಭಿಸಿರುವ ಸನ್‌ರೈಸರ್ಸ್‌ ಹೈದರಾಬಾದ್‌, ಇಲ್ಲಿ ಶನಿವಾರ ನಡೆಯಲಿರುವ ದಿನದ ಮೊದಲ ಪಂದ್ಯದಲ್ಲಿ ಕೋಲ್ಕೊತಾ ನೈಟ್‌ ರೈಡರ್ಸ್‌ ತಂಡವನ್ನು ಎದುರಿಸಲಿದೆ.

ತವರು ನೆಲ ರಾಜೀವ್‌ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಗೆಲ್ಲುವ ಮೂಲಕ ಸನ್‌ರೈಸರ್ಸ್‌ ಜಯದ ಹಾದಿಗೆ ಮರಳುವ ವಿಶ್ವಾಸದಲ್ಲಿದೆ. ಮೊದಲ ಪಂದ್ಯದಲ್ಲಿ ಡೇವಿಡ್‌ ವಾರ್ನರ್‌ ನಾಯಕತ್ವದ ಹೈದರಾಬಾದ್‌ ತಂಡ ರಾಯಲ್‌ ಚಾಲೆಂಜರ್ಸ್‌ ವಿರುದ್ಧ ಮುಗ್ಗರಿಸಿತ್ತು.

ಮತ್ತೊಂದೆಡೆ ಡೆಲ್ಲಿ ಡೇರ್‌ ಡೆವಿಲ್ಸ್‌ ವಿರುದ್ಧ ಗೆದ್ದು ಶುಭಾರಂಭ ಮಾಡಿದ್ದ ನೈಟ್‌ ರೈಡರ್ಸ್‌, ತನ್ನ 2ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ ಮುಗ್ಗರಿಸಿದೆ. ಹೀಗಾಗಿ ಗೌತಮ್‌ ಗಂಭೀರ್‌ ಬಳಗ ಗೆಲುವಿನ ಲಯಕ್ಕೆ ಮರಳಲು ಹಾತೊರೆಯುತ್ತಿದೆ.

ಗೆಲುವಿನ ತವಕದಲ್ಲಿ ಸನ್‌ರೈಸರ್ಸ್‌

Vijaya Karnataka Web double dhamaka in ipl today
ಐಪಿಎಲ್‌ನಲ್ಲಿಂದು ಡಬಲ್‌ ಧಮಾಕಾ


ವಾಂಖೇಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ದಿನದ ಎರಡನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಮತ್ತು ಗುಜರಾತ್‌ ಲಯನ್ಸ್‌ ಮುಖಾಮುಖಿಯಾಗಲಿವೆ.

ಮುಂಬೈ ಆಡಿರುವ 2 ಪಂದ್ಯಗಳಲ್ಲಿ ಒಂದನ್ನು ಗೆದ್ದಿದ್ದರೆ, ಸುರೇಶ್‌ ರೈನಾ ಮುಂದಾಳತ್ವದ ಗುಜರಾತ್‌ ಲಯನ್ಸ್‌ ಎರಡಲ್ಲಿ ಎರಡನ್ನೂ ಗೆದ್ದು ಅಜೇಯ ಸಾಧನೆ ಮಾಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌