ಆ್ಯಪ್ನಗರ

ಕರ್ರನ್, ಮೊಯಿನ್ ಕಮ್‌ಬ್ಯಾಕ್; 4ನೇ ಟೆಸ್ಟ್‌ಗೆ ಇಂಗ್ಲೆಂಡ್ ಆಡುವ ಬಳಗ ಪ್ರಕಟ

ಭಾರತ ವಿರುದ್ಧ ಮೂರನೇ ಟೆಸ್ಟ್ ಪಂದ್ಯದಲ್ಲಿ ಎದುರಾದ 203 ರನ್ ಅಂತರದ ಆಘಾತಕಾರಿ ಸೋಲಿನ ಬಳಿಕ ಎಚ್ಚೆತ್ತುಕೊಂಡಿರುವ ಆತಿಥೇಯ ಇಂಗ್ಲೆಂಡ್ ತಂಡವು ನಾಲ್ಕನೇ ಪಂದ್ಯಕ್ಕಾಗಿ ಸ್ಯಾಮ್ ಕರ್ರನ್ ಹಾಗೂ ಮೊಯಿನ್ ಅಲಿ ಅವರನ್ನು ವಾಪಾಸ್ ಕರೆಯಿಸಿಕೊಂಡಿದೆ.

Vijaya Karnataka Web 29 Aug 2018, 8:48 pm
ಸೌಂಥಪ್ಟನ್: ಭಾರತ ವಿರುದ್ಧ ಮೂರನೇ ಟೆಸ್ಟ್ ಪಂದ್ಯದಲ್ಲಿ ಎದುರಾದ 203 ರನ್ ಅಂತರದ ಆಘಾತಕಾರಿ ಸೋಲಿನ ಬಳಿಕ ಎಚ್ಚೆತ್ತುಕೊಂಡಿರುವ ಆತಿಥೇಯ ಇಂಗ್ಲೆಂಡ್ ತಂಡವು ನಾಲ್ಕನೇ ಪಂದ್ಯಕ್ಕಾಗಿ ಸ್ಯಾಮ್ ಕರ್ರನ್ ಹಾಗೂ ಮೊಯಿನ್ ಅಲಿ ಅವರನ್ನು ವಾಪಾಸ್ ಕರೆಯಿಸಿಕೊಂಡಿದೆ.
Vijaya Karnataka Web sam-curran


ಹಾಗಿದ್ದರೂ ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ಗೆಲುವು ದಾಖಲಿಸಿರುವ ಆಂಗ್ಲರ ಪಡೆ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1 ಅಂತರದ ಮುನ್ನಡೆ ಕಾಯ್ದುಕೊಂಡಿದೆ.

ಇಂಗ್ಲೆಂಡ್ ಮೊದಲ ಪಂದ್ಯದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ಸ್ಯಾಮ್ ಕರ್ರನ್ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನವಾಗಿದ್ದರು. ಆದರೂ ಮೂರನೇ ಪಂದ್ಯದಿಂದ ಕೈಬಿಡಲಾಗಿತ್ತು.

ಇನ್ನು ಮೊದಲ ಮೂರು ಪಂದ್ಯಗಳಲ್ಲಿ ಆಡುವ ಅವಕಾಶದಿಂದ ವಂಚಿತರಾಗಿರುವ ಮೊಯಿನ್ ಅಲಿ ಸಹ ಆಡುವ ಬಳಗದಲ್ಲಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರಿಗೆ ಎರಡನೇ ಪಂದ್ಯದ ಶತಕವೀರ ಕ್ರಿಸ್ ವೋಕ್ಸ್ ಹಾಗೂ ಒಲಿವರ್ ಪಾಪ್ ತಮ್ಮ ತಮ್ಮ ಸ್ಥಾನಗಳನ್ನು ಬಿಟ್ಟುಕೊಟ್ಟಿದ್ದಾರೆ.

ಹಾಗೆಯೇ ಕಳಪೆ ಪ್ರದರ್ಶನದ ಹೊರತಾಗಿಯೂ ಓಪನರ್‌ಗಳಾದ ಆಲಿಸ್ಟಾರ್ ಕುಕ್ ಹಾಗೂ ಕೇಟನ್ ಜೆನಿಂಗ್ಸ್ ನಾಯಕನ ನಂಬಿಕೆ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಅಂತೆಯೇ ಗಾಯಾಳು ಜಾನಿ ಬೈರ್‌ಸ್ಟೋವ್ ಫಿಟ್ ಎನಿಸಿಕೊಂಡರೂ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ಜೋಸ್ ಬಟ್ಲರ್ ವಹಿಸಲಿದ್ದಾರೆ.

ಇಂಗ್ಲೆಂಡ್ ಆಡುವ ಬಳಗ ಇಂತಿದೆ: ಆಲಿಸ್ಟಾರ್ ಕುಕ್, ಕೇಟನ್ ಜೆನಿಂಗ್ಸ್, ಜೋ ರೂಟ್ (ನಾಯಕ), ಜಾನಿ ಬೈರ್‌ಸ್ಟೋವ್, ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಮೊಯಿನ್ ಆಲಿ, ಕರ್ರನ್, ಆದಿಲ್ ರಶೀದ್, ಕ್ರಿಸ್ ಬ್ರಾಡ್ ಮತ್ತು ಜೇಮ್ಸ್ ಆಂಡ್ರೆಸನ್.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌