ಆ್ಯಪ್ನಗರ

ಭಾರತವಲ್ಲ, ಗವಾಸ್ಕರ್ ಪ್ರಕಾರ ಇದೇ ತಂಡ ನೋಡಿ ವಿಶ್ವಕಪ್ ಫೇವರಿಟ್

ಭಾರತ ತಂಡಕ್ಕಿಂತಲೂ ಮಿಗಿಲಾಗಿ ಮುಂಬರುವ ಏಕದಿನ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ ಎಂದು ಮಾಜಿ ನಾಯಕ ಸುನಿಲ್ ಗವಾಸ್ಕರ್ ಹೇಳಿಕೆ ನೀಡಿದ್ದಾರೆ.

Times Now 16 Feb 2019, 2:28 pm
ಹೊಸದಿಲ್ಲಿ: ಮುಂಬರುವ ವಿಶ್ವಕಪ್‌ನಲ್ಲಿ ಭಾರತವಲ್ಲಂತೆ ಫೇವರಿಟ್ ತಂಡ. ಭಾರತ ಮಾಜಿ ನಾಯಕ ಸುನಿಲ್ ಗವಾಸ್ಕರ್ ಪ್ರಕಾರ ಭಾರತಗಿಂತಲೂ ಆತಿಥೇಯ ಇಂಗ್ಲೆಂಡ್ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವೆನಿಸಿದೆ ಎಂದಿದ್ದಾರೆ.
Vijaya Karnataka Web england


ಗವಾಸ್ಕರ್ ಇದಕ್ಕೆ ಕಾರಣವನ್ನು ನೀಡುತ್ತಾರೆ. 2015ರಲ್ಲಿ ವಿಶ್ವಕಪ್ ಸೋಲಿನ ಬಳಿಕ ಇಂಗ್ಲೆಂಡ್ ಪುಟಿದೆದ್ದ ರೀತಿಯಂತೂ ನಿಜಕ್ಕೂ ಅದ್ಭುತ.

ಕಳೆದ ನಾಲ್ಕು ವರ್ಷಗಳಲ್ಲಿ ಬೆಳವಣಿಗೆ ಸಾಧಿಸಿರುವ ಇಂಗ್ಲೆಂಡ್ ಪ್ರಬಲ ತಂಡವಾಗಿ ಮೂಡಿ ಬಂದಿದೆ. ಅಲ್ಲದೆ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಅಗ್ರಪಟ್ಟವನ್ನು ಕಾಯ್ದುಕೊಂಡಿದೆ.

ಕಳೆದ ವರ್ಷ ಇಂಗ್ಲೆಂಡ್ ವಿರುದ್ಧ ನಡೆದ ಏಕದಿನ ಸರಣಿಯಲ್ಲೂ ಟೀಮ್ ಇಂಡಿಯಾ ಸೋಲಿಗೆ ಶರಣಾಗಿತ್ತು. ವಿಶ್ವಕಪ್ ಬಳಿಕ ಭಾರತ 67.44ರ ಸರಾಸರಿಯಲ್ಲಿ 58 ಪಂದ್ಯಗಳನ್ನು ಗೆದ್ದಿದೆ. ಅತ್ತ ಇಂಗ್ಲೆಂಡ್ 65 ಪಂದ್ಯಗಳಲ್ಲಿ 52ರಲ್ಲಿ ಗೆಲುವು ದಾಖಲಿಸಿದೆ.

ಇಂಗ್ಲೆಂಡ್ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ. ಏಕದಿನ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ನಿಲುವು ಬದಲಾಗಿದೆ. ವಿಶ್ವದಲ್ಲೇ ಅತ್ಯಂತ ಪ್ರಬಲ ತಂಡವಾಗಿ ಹೊರಹೊಮ್ಮಿದೆ ಎಂದರು.

ಏತನ್ಮಧ್ಯೆ ಬಹುತೇಕ ಭಾರತೀಯ ಆಟಗಾರರು ಇಂಗ್ಲೆಂಡ್ ಪರಿಸ್ಥಿತಿಯಲ್ಲಿ ಆಡಿರುವ ಅನುಭವ ಹೊಂದಿರುವುದು ನೆರವಾಗಲಿದೆ ಎಂದು ಸೇರಿಸಿದರು.

ಇಂಗ್ಲೆಂಡ್ ಹಾಗೂ ಭಾರತ ಹೊರತಾಗಿ ಪಾಕಿಸ್ತಾನ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳು ಸೆಮಿಫೈನಲ್ ಪ್ರವೇಶಿಸುವ ಸಾಧ್ಯತೆಗಳಿವೆ ಎಂದು ಸಹ ಗವಾಸ್ಕರ್ ಭವಿಷ್ಯ ನುಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌