ಆ್ಯಪ್ನಗರ

ಎಲ್ಲರಿಗೂ ಹಿಂದಿ ಬರಬೇಕು, ಅದಕ್ಕಿಂತಲೂ ದೊಡ್ಡ ಭಾಷೆಯಿಲ್ಲ ಎಂದ ಬಿಸಿಸಿಐ ಕಾಂಮೆಂಟೇಟರ್‌!

ಕ್ರಿಕೆಟ್‌ ಕಾಮೆಂಟರಿ ವೇಳೆ ಎಲ್ಲರಿಗೂ ಹಿಂದಿ ಬರಲೇಬೇಕು ಹಿಂದಿ ನಮ್ಮ ಮಾತೃಭಾಷೆ ಎಂದು ಹೇಳುವ ಮೂಲಕ ಬಿಸಿಸಿಐನ ವೀಕ್ಷಕ ವಿವರಣೆಗಾರ ಅಗತ್ಯವಾಗಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

Vijaya Karnataka Web 13 Feb 2020, 7:33 pm
ಬೆಂಗಳೂರು: ಕರ್ನಾಟಕ ಮತ್ತು ಬರೋಡಾ ನಡುವಣ ರಣಜಿ ಪಂದ್ಯದಲ್ಲಿ ಕ್ರಿಕೆಟ್‌ ವೀಕ್ಷಕ ವಿವರಣೆ ಒದಗಿಸುತ್ತಿದ್ದ ಬಿಸಿಸಿಐನ ಕಾಮೆಂಟೇಟರ್‌ ಅನಗತ್ಯ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
Vijaya Karnataka Web karnataka vs baroda ranji 2020


ಕಾಮೆಂಟರಿ ವೇಳೆಪ್ರತಿಯೊಬ್ಬರಿಗೂ ಹಿಂದಿ ಬರಬೇಕು ಅದು ನಮ್ಮ ಮಾತೃಭಾಷೆ" ಎಂದು ಕಾಮೆಂಟೇಟರ್‌ ಸುಶೀಲ್‌ ದೋಶಿ ಹೇಳಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗುರಿಯಾಗಿದೆ.

ಇಲ್ಲಿನ ಎಂ. ಚಿನ್ನಸ್ವಾಮಿ ಕ್ರಿಡಾಂಗಣದಲ್ಲಿ ನಡೆಯುತ್ತಿರುವ ಎಲೈಟ್‌ 'ಬಿ' ಗುಂಪಿನ ಲೀಗ್‌ ಪಂದ್ಯದ ಎರಡನೇ ದಿನವಾದ ಗುರುವಾರ, ಬರೋಡ ತನ್ನ ಎರಡನೇ ಇನಿಂಗ್ಸ್‌ 7ನೇ ಓವರ್‌ನಲ್ಲಿ ಬ್ಯಾಟ್‌ ಮಾಡುತ್ತಿರುವ ಸಂದರ್ಭದಲ್ಲಿ ಕಾಮೆಂಟೇಡರ್‌ ಇಂಥದ್ದೊಂದು ಮಾತನಾಡಿದ್ದಾರೆ.

ಹರ್ಮನ್‌ಪ್ರೀತ್‌ ಕೌರ್‌ ನಾಯಕತ್ವ ಬಿಡುವುದು ಒಳಿತು: ಡಯಾನ ಎಡುಲ್ಜಿ ಅಚ್ಚರಿಯ ಹೇಳಿಕೆ!

"ಸುನಿಲ್‌ ಗವಾಸ್ಕರ್‌ ಹಿಂದಿಯಲ್ಲಿ ಕಾಮೆಂಟರಿ ನೀಡುವಾಗ ಪ್ರಮುಖ ಅಂಶಗಳನ್ನು ಅದೇ ಭಾಷೆಯಲ್ಲೇ ನೀಡುತ್ತಿರುವುದು ನನ್ನ ಗಮನ ಸೆಳೆಯಿತು. ಡಾ ಬಾಲ್‌ಗೆ ಅವರು ಬಿಂದು ಬಾಲ್‌ ಎಂದು ಕರೆದದ್ದು ಖುಷಿ ನೀಡಿತು," ಎಂದು ಒಬ್ಬ ಕಾಮೆಂಟೇಟರ್‌ ಹೇಳಿದರು.

ಇದಕ್ಕೆ ಪ್ರತಿಯಾಗಿ ಮಾತಿಗಿಳಿದ ಮತ್ತೊಬ್ಬ ಕಾಮೆಂಟೇಟರ್‌ (ಸುಶೀಲ್‌ ದೋಶಿ) "ಪ್ರತಿಯೊಬ್ಬ ಭಾರತೀಯನಿಗೂ ಹಿಂದಿ ಬರಬೇಕು. ಅದು ನಮ್ಮ ಮಾತೃಭಾಷೆ. ಅದಕ್ಕಿಂತಲೂ ದೊಡ್ಡ ಭಾಷೆಯಿಲ್ಲ. ನಾನು ಕ್ರಿಕೆಟಿಗರಾಗಿ ಹಿಂದಿ ಮಾತನಾಡಬೇಕೆ? ಎನ್ನುವರನ್ನು ನಾನು ಕೋಪದಿಂದ ನೋಡುತ್ತೇನೆ. ನೀನು ಭಾರತದಲ್ಲಿ ಇರುವಾಗ ಖಂಡಿತವಾಗಿ ಅಲ್ಲಿನ ಮಾತೃಭಾಷೆಯನ್ನೇ ಮಾತನಾಡಬೇಕು," ಎಂದು ವಿವಾದಾತ್ಮಕ ಮಾತುಗಳನ್ನಾಡಿದ್ದಾರೆ.

ಕಮ್‌ಬ್ಯಾಕ್‌ ಪಂದ್ಯದಲ್ಲಿ ವಿಶೇಷ ದಾಖಲೆ ಮುಡಿಗೇರಿಸಿಕೊಂಡ ಡೇಲ್‌ ಸ್ಟೇನ್‌!

ಸುಶೀಲ್‌ ದೋಶಿ ಅವರ ಈ ಹಿಂದಿ ಹೇರಿಕೆಯ ಮಾತುಗಳನ್ನು ಸೋಷಿಯಲ್‌ ಮೀಡಿಯಾಗಳಲ್ಲಿ ಕಟುವಾಗಿ ಟೀಕಿಸಲಾಗಿದೆ. ಅನುಭವಿ ಕ್ರಿಕೆಟ್‌ ಕಾಮೆಂಟೇಟರ್‌ ಸುಶೀಲ್‌ ದೋಶಿ ವೀಕ್ಷಕ ವಿವರಣೆಯಲ್ಲಿನ ತಮ್ಮ ಸೇವೆ ಸಲುವಾಗಿ 2016ರಲ್ಲಿ ಪದ್ಮ ಶ್ರೀ ಪ್ರಶಸ್ತಿಯನ್ನೂ ಸ್ವೀಕರಿಸಿದ್ದಾರೆ.

ಇದಕ್ಕೂ ಮುನ್ನ ಭಾರತ ಮತ್ತು ನ್ಯೂಜಿಲೆಂಡ್‌ ನಡುವಣ ಏಕದಿನ ಕ್ರಿಕೆಟ್‌ ಸರಣಿಯ 3ನೇ ಪಂದ್ಯದಲ್ಲಿ ಕರ್ನಾಟಕದ ಆಟಗಾರರಾದ ಕೆಎಲ್ ರಾಹುಲ್‌ ಮತ್ತು ಮನೀಶ್‌ ಪಾಂಡೆ ಬ್ಯಾಟಿಂಗ್‌ ವೇಳೆ ಕನ್ನಡದಲ್ಲಿ ಮಾತನಾಡುತ್ತಿದದ್ದು ಸ್ಟಂಪ್‌ ಮೈಕ್‌ನಲ್ಲಿ ಸ್ಪಷ್ವಾಗಿ ಕೇಳಿಸುತ್ತಿತ್ತು. ರನ್‌ ಗಳಿಸುವಾಗ 'ಬೇಡ ಬೇಡ' 'ಬರ್ತೀರಾ' ಹಾಗೂ 'ಬೇಡ ಬೇಡ' ಎಂದು ಕೂಗುತ್ತಿದ್ದದ್ದನ್ನು ಕೇಳಿದ ಕನ್ನಡಾಭಿಮಾನಿಗಳೆಲ್ಲರೂ ಫುಲ್‌ ಖುಷ್‌ ಆಗಿದ್ದರು.

ಬುಮ್ರಾ ಬೌಲಿಂಗ್‌ ವೈಫಲ್ಯಕ್ಕೆ ಕಾರಣ ವಿವರಿಸಿದ ಜಹೀರ್‌ ಖಾನ್‌

ಇನ್ನು ಕರ್ನಾಟಕ ಮತ್ತು ಬರೋಡ ನಡುವಣ ಪಂದ್ಯದಲ್ಲಿ ಪ್ರವಾಸಿ ತಂಡವನ್ನು ಮೊದಲ ಇನಿಂಗ್ಸ್‌ನಲ್ಲಿ 85 ರನ್‌ಗಳಿಗೆ ಆಲ್‌ಔಟ್ ಮಾಡಿದ ಕರ್ನಾಟಕ ತನ್ನ ಮೊದಲ ಇನಿಂಗ್ಸ್‌ನಲ್ಲಿ 233 ರನ್‌ ಗಳಿಸಿ ಮುನ್ನಡೆ ಪಡೆದುಕೊಂಡಿದೆ. ಇದೀಗ ಎರಡನೇ ದಿನದಾಟದ ಅಂತ್ಯಕ್ಕೆ ಬರೋಡ 67 ಓವರ್‌ಗಳಲ್ಲಿ 5 ವಿಕೆಟ್‌ಗೆ 208 ರನ್‌ಗಳನ್ನು ಗಳಿಸಿ 60 ರನ್‌ಗಳ ಮುನ್ನಡೆ ಗಳಿಸಿದೆ. ಪಂದ್ಯದಲ್ಲಿ ಇನ್ನು 2 ದಿನದದ ಆಟ ಬಾಕಿದ್ದು ಫಲಿತಾಂಶ ಹೊರಬೀಳುವ ಎಲ್ಲ ಸಾಧ್ಯತೆಗಳಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌