ಆ್ಯಪ್ನಗರ

ಹುಟ್ಟೂರಿನ ಮೈದಾನದಲ್ಲಿ 'ಧೋನಿ ಧೋನಿ' ಜೈಕಾರ

ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೂರನೇ ಏಕದಿನ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಬ್ಯಾಟಿಂಗ್ ಮಾಡಲು ಕ್ರೀಸಿಗಿಳಿದಾಗ ಅಭಿಮಾನಿಗಳು ಧೋನಿ ಧೋನಿ ಎಂಬ ಜೈಕಾರವನ್ನು ಕೂಗಿದ್ದಾರೆ.

Vijaya Karnataka Web 8 Mar 2019, 7:39 pm
ರಾಂಚಿ: ಹುಟ್ಟೂರಿನ ಮೈದಾನದಲ್ಲಿ ಕೊನೆಯ ಬಾರಿಗೆ ಕ್ರೀಸಿಗಿಳಿದಿರುವ ಹಿರಿಯ ಅನುಭವಿ ಬ್ಯಾಟ್ಸ್‌ಮನ್ ಮಹೇಂದ್ರ ಸಿಂಗ್ ಧೋನಿ ಅವರಿಗೆ ಅದ್ಭುತ ವೆಲ್ಕಂ ನೀಡಲಾಗಿದೆ.
Vijaya Karnataka Web ms-dhoni-07


ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೂರನೇ ಏಕಿದನ ಪಂದ್ಯವು ಜಾರ್ಖಂಡ್‌ ರಾಜ್ಯ ಕ್ರಿಕೆಟ್ ಸಂಸ್ಥೆಯ ರಾಂಚಿ ಮೈದಾನದಲ್ಲಿ ನಡೆಯುತ್ತಿದೆ. ಮುಂಬರುವ ಏಕದಿನ ವಿಶ್ವಕಪ್ ಬಳಿಕ ಧೋನಿ ನಿವೃತ್ತಿ ಘೋಷಿಸುವ ಸಾಧ್ಯತೆಯಿದೆ. ಹಾಗಾಗಿ ತವರು ಅಂಗಣದಲ್ಲಿ ಕೊನೆಯ ಪಂದ್ಯ ಎಂದೇ ಅಂದಾಜಿಸಲಾಗಿದೆ.

ಮೊದಲು ಬ್ಯಾಟಿಂಗ್ ನಡೆಸಿದ ಆಸೀಸ್ ಐದು ವಿಕೆಟ್ ನಷ್ಟಕ್ಕೆ 313 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. ಬಳಿಕ ಟೀಮ್ ಇಂಡಿಯಾ ಆರಂಭಿಕ ಆಘಾತಕ್ಕೊಳಗಾಗಿತ್ತು. ಈ ಸಂದರ್ಭದಲ್ಲಿ ಕ್ರೀಸಿಗಿಳಿದ ವೇಳೆ ಅಭಿಮಾನಿಗಳು ಧೋನಿ ಧೋನಿ ಜೈಕಾರ ಕೂಗಿದರು.

ಭಾರತೀಯ ಸೇನೆಗೆ ಗೌರವಾರ್ಥವಾಗಿ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ವಿಶೇಷವಾಗಿ ತಯಾರಿಸಲಾದ ಆರ್ಮಿ ಧರಿಸಿ ಕಣಕ್ಕಿಳಿದಿದೆ. ಅಲ್ಲದೆ ಪಂದ್ಯ ಶುಲ್ಕವನ್ನು ಪುಲ್ವಾಮಾ ಹುತಾತ್ಮ ಯೋಧರ ಕುಟಂಬಗಳ ಪೋಷಣೆಗಾಗಿ ಮೀಸಲಿರಿಸಲಾಗಿದೆ.

ಧೋನಿ ಸಿಕ್ಸರ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌