ಆ್ಯಪ್ನಗರ

ಚಾಂಪಿಯನ್ನರಿಗೆ ಪುಟಿದೇಳುವ ತವಕ

ಕಳೆದ ಭಾನುವಾರ ಟೀಮ್‌ ಇಂಡಿಯಾ ವಿರುದ್ಧ ಸೋತ ಬಳಿಕ ಸ್ವಲ್ಪಮಟ್ಟಿಗೆ ಆತ್ಮವಿಶ್ವಾಸ ಕಳೆದುಕೊಂಡಂತಿರುವ ಕಳೆದ ಆವೃತ್ತಿಯ ಚಾಂಪಿಯನ್‌ ಆಸ್ಪ್ರೇಲಿಯಾ ತಂಡ ಬುಧವಾರ ವಿಶ್ವಕಪ್‌ ಟೂರ್ನಿಯ ತನ್ನ 4ನೇ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಆಡಲಿದೆ. ಗೆಲುವಿನ ಹಳಿಗೆ ಮರಳುವುದು ಕಾಂಗರೂ ಪಡೆಯ ಸದ್ಯದ ಗುರಿಯಾಗಿದೆ.

Agencies 12 Jun 2019, 5:00 am
ಟಾಂಟನ್‌ : ಕಳೆದ ಭಾನುವಾರ ಟೀಮ್‌ ಇಂಡಿಯಾ ವಿರುದ್ಧ ಸೋತ ಬಳಿಕ ಸ್ವಲ್ಪಮಟ್ಟಿಗೆ ಆತ್ಮವಿಶ್ವಾಸ ಕಳೆದುಕೊಂಡಂತಿರುವ ಕಳೆದ ಆವೃತ್ತಿಯ ಚಾಂಪಿಯನ್‌ ಆಸ್ಪ್ರೇಲಿಯಾ ತಂಡ ಬುಧವಾರ ವಿಶ್ವಕಪ್‌ ಟೂರ್ನಿಯ ತನ್ನ 4ನೇ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಆಡಲಿದೆ. ಗೆಲುವಿನ ಹಳಿಗೆ ಮರಳುವುದು ಕಾಂಗರೂ ಪಡೆಯ ಸದ್ಯದ ಗುರಿಯಾಗಿದೆ.
Vijaya Karnataka Web fight back aim for australia
ಚಾಂಪಿಯನ್ನರಿಗೆ ಪುಟಿದೇಳುವ ತವಕ


ವಿಶ್ವಕಪ್‌ ಇತಿಹಾಸದಲ್ಲಿ ಪಾಕಿಸ್ತಾನ ವಿರುದ್ಧ 9 ಪಂದ್ಯಗಳಲ್ಲಿ ಆಡಿರುವ ಆಸ್ಪ್ರೇಲಿಯಾ ತಂಡ ಐದರಲ್ಲಿ ಗೆದ್ದು, ನಾಲ್ಕರಲ್ಲಿ ಸೋತಿದೆ. ಪ್ರಸಕ್ತ ಟೂರ್ನಿಯಲ್ಲಿ ಇದುವರೆಗೆ ಆಡಿದ ಮೂರು ಪಂದ್ಯಗಳಿಂದ ಒಟ್ಟು 4 ಅಂಕ ಕಲೆಹಾಕಿರುವ ಆ್ಯರೋನ್‌ ಫಿಂಚ್‌ ಬಳಗ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಅತ್ತ ಸೋಲು-ಗೆಲುವಿನ ಮಿಶ್ರ ಫಲ ಹೊಂದಿರುರುವ ಪಾಕಿಸ್ತಾನ ಕೂಡ ಗೆಲುವಿಗಾಗಿ ಹಾತೊರೆಯುತ್ತಿದೆ. ಅದರಲ್ಲೂ ಆತಿಥೇಯ ಇಂಗ್ಲೆಂಡ್‌ ವಿರುದ್ಧ ಜಯ ಗಳಿಸಿರುವುದು ಪಾಕಿಸ್ತಾನದ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿದೆ. ಆದರೆ ಅದಾದ ಬಳಿಕ ಮಳೆಯಿಂದಾಗಿ ಶ್ರೀಲಂಕಾ ಎದುರಿನ ಪಂದ್ಯ ರದ್ದಾಗಿತ್ತು. ಪಾಕ್‌ ತಂಡ ಪ್ರಸ್ತುತ 3 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ.

ಟಾಂಟನ್‌ನಲ್ಲಿ ಮಳೆ ಬೀಳುತ್ತಿದ್ದು, ಇಡೀ ವಾರ ಮುಂದುವರಿಯುವ ಸಾಧ್ಯತೆ ಇದೆ. ಹೀಗಾಗಿ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ದಿ ಕೂಪರ್‌ ಅಸೋಸಿಯೇಟ್ಸ್‌ ಕೌಂಟಿ ಗ್ರೌಂಡ್‌ ಪಿಚ್‌ ಬೌಲರ್‌ಗಳಿಗೆ ಹೆಚ್ಚು ನೆರವಾಗುವ ಸಾಧ್ಯತೆ ಇದೆ. ನ್ಯೂಜಿಲೆಂಡ್‌ ಮತ್ತು ಅಫಘಾನಿಸ್ಥಾನ ನಡುವಿನ ಪಂದ್ಯದಲ್ಲಿ ಕಿವೀಸ್‌ ಬೌಲರ್‌ ಜಿಮ್ಮಿ ನೀಶಮ್‌ ಮಿಂಚಿದ್ದರು.

ಅಫಘಾನಿಸ್ಥಾನ ಮತ್ತು ವೆಸ್ಟ್‌ ಇಂಡೀಸ್‌ ವಿರುದ್ಧ ಜಯ ಗಳಿಸಿದ್ದ ಆಸ್ಪ್ರೇಲಿಯಾ, ಭಾರತದೆದುರು ಮಂಡಿಯೂರಿತ್ತು. ಸ್ಟೀವನ್‌ ಸ್ಮಿತ್‌, ಡೇವಿಡ್‌ ವಾರ್ನರ್‌ ಮತ್ತು ಅಲೆಕ್ಸ್‌ ಕ್ಯೇರಿ ಅರ್ಧಶತಕ ಗಳಿಸಿದರೂ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ವಿಫಲಗೊಂಡಿದ್ದರು. ಏತನ್ಮಧ್ಯೆ, ತಂಡದ ಪ್ರಮುಖ ಆಲ್‌ರೌಂಡರ್‌ ಮಾರ್ಕಸ್‌ ಸ್ಟೋಯ್ನಿಸ್‌ ಆಯಾಸದಿಂದ ಬಳಲಿದ್ದು, ಪಾಕ್‌ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ ಎಂದು ತಂಡದ ಮೂಲಗಳು ತಿಳಿಸಿವೆ.

ಇಂದಿನ ಸೆಣಸಾಟ
ಆಸ್ಪ್ರೇಲಿಯಾ - ಪಾಕಿಸ್ತಾನ
ಪಂದ್ಯ ಆರಂಭ: ಮಧ್ಯಾಹ್ನ 3ಕ್ಕೆ
ಸ್ಥಳ: ದಿ ಕೂಪರ್‌ ಅಸೋಸಿಯೆಟ್ಸ್‌ ಕೌಂಟಿ ಗ್ರೌಂಡ್‌, ಟಾಂಟನ್‌
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

ಮುಖಾಮುಖಿ 103
ಆಸ್ಪ್ರೇಲಿಯಾಗೆ ಗೆಲುವು 67
ಪಾಕಿಸ್ತಾನಕ್ಕೆ ಜಯ 32
ಟೈ 01
ಫಲಿತಾಂಶ ರಹಿತ 03


ರಾರ‍ಯಂಕಿಂಗ್‌
ಆಸ್ಪ್ರೇಲಿಯಾ
05
ಪಾಕಿಸ್ತಾನ
06


ಸ್ಟಾರ್‌ ಆಟಗಾರರು
ಪಾಕಿಸ್ತಾನ
ಬಾಬರ್‌ ಅಜಂ
ಇಮಾಮ್‌ ಉಲ್‌ ಹಕ್‌
ಶದಬ್‌ ಖಾನ್‌



ಆಸ್ಪ್ರೇಲಿಯಾ
ಡೇವಿಡ್‌ ವಾರ್ನರ್‌
ಸ್ಟೀವನ್‌ ಸ್ಮಿತ್‌
ಮಿಚೆಲ್‌ ಸ್ಟಾರ್ಕ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌