ಆ್ಯಪ್ನಗರ

ಮೇಲ್ದರ್ಜೆಯಲ್ಲಿ ಆಡಲು ಫಿಟ್ನೆಸ್ ಮೇಲೆ ಗಮನ: ಧೋನಿ

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಗೆಲುವಿನತ್ತ ಮುನ್ನಡೆಸಿರುವ ಮಹೇಂದ್ರ ಸಿಂಗ್ ಧೋನಿ ಕೆಲವೊಂದು ಗಮನಾರ್ಹ ಅಂಶಗಳನ್ನು ಬಹಿರಂಗಬಹಿಸಿದ್ದಾರೆ.

TOI.in 12 Jun 2018, 4:11 pm
ಮುಂಬಯಿ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಗೆಲುವಿನತ್ತ ಮುನ್ನಡೆಸಿರುವ ಮಹೇಂದ್ರ ಸಿಂಗ್ ಧೋನಿ ಕೆಲವೊಂದು ಗಮನಾರ್ಹ ಅಂಶಗಳನ್ನು ಬಹಿರಂಗಬಹಿಸಿದ್ದಾರೆ.
Vijaya Karnataka Web ms-dhoni-21


30ರ ಹರೆಯ ದಾಟಿರುವ ನಾನು ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಪಡೆದು ಆಡುವ ಸಲುವಾಗಿ ಫಿಟ್ನೆಸ್ ಮೇಲೆ ಹೆಚ್ಚಿನ ಗಮನ ಕೇಂದ್ರಿಕರಿಸಿರುವುದಾಗಿ ತಿಳಿಸಿದ್ದಾರೆ.

ಟೆಸ್ಟ್ ಕ್ರಿಕೆಟ್ ತೊರೆದ ಬಳಿಕ ದೈಹಿಕ ಸಾಮರ್ಥ್ಯ ಕಾಪಾಡುಕೊಳ್ಳುವುದರತ್ತ ಹೆಚ್ಚಿನ ಗಮನ ಹರಿಸಿದ್ದೇನೆ. ಐಪಿಎಲ್‌ನಲ್ಲಿ ಮೇಲ್ದರ್ಜೆಯಲ್ಲಿ ಆಡುವುದು ನನ್ನ ಇರಾದೆಯಾಗಿತ್ತು ಎಂದು ವಿವರಿಸಿದ್ದಾರೆ.

ಪಂದ್ಯ ಗೆಲ್ಲಿಸಲು ಹೆಚ್ಚಿನ ಜವಾಬ್ದಾರಿ ವಹಿಸಿಕೊಳ್ಳಲು ಬಯಸಿದ್ದೆ. ಆದರೆ ಕೆಳ ಕ್ರಮಾಂಕದಲ್ಲಿ ಆಡಿದರೆ ಹೆಚ್ಚಿನ ಅವಕಾಶ ಸಿಗುತ್ತಿರಲಿಲ್ಲ ಎಂದು ವಿವರಿಸಿದರು.

ಅದೇ ಹೊತ್ತಿಗೆ ಮಧ್ಯಮ ಕ್ರಮಾಂಕದಲ್ಲಿ ಕ್ರೀಸಿಗಿಳಿಯುವ ಮೂಲಕ ಹೆಚ್ಚಿನ ಆಕ್ರಮಣಕಾರಿಯಾಗಿ ಆಟವಾಡಲು ಸಾಧ್ಯವಾಯಿತು ಎಂದು ಸೇರಿಸಿದರು.

ಪರಿಸ್ಥಿತಿಗೆ ಹೊಂದಿಕೊಂಡು ಬ್ಯಾಟಿಂಗ್ ಮಾಡುವುದು ನನ್ನ ಇರಾದೆಯಾಗಿತ್ತು. ಇದಕ್ಕೆ ತಕ್ಕಂತೆ ಆಕ್ರಮಣಕಾರಿ ಶೈಲಿ ಮೈಗೂಡಿಸಿದ್ದೆ. ಒಂದು ವೇಳೆ ನಾನು ಔಟ್ ಆದರೂ ತಂಡದ ಇತರೆ ಆಟಗಾರರಿಗೂ ಒತ್ತಡವನ್ನು ನಿಭಾಯಿಸಲು ಅವಕಾಶ ದೊರಕುತ್ತಿತ್ತು. ಅದೃಷ್ಟವಶಾತ್ ವಾಟ್ಸನ್, ರಾಯುಡು, ರೈನಾ ಹಾಗೂ ಬ್ರಾವೋ ಸ್ಥಿರ ಪ್ರದರ್ಶನ ಕಾಪಾಡಿದಿದ್ದರಿಂದ ತಂಡವು ಹೆಚ್ಚು ಆಳವಾಗಿ ಬ್ಯಾಟಿಂಗ್ ಮಾಡುವ ಸನ್ನಿವೇಶ ಬಂದಿಲ್ಲ ಎಂದು ನುಡಿದರು.

ಐಪಿಎಲ್ ಆರಂಭದಿಂದಲೇ ಹೆಚ್ಚು ಆಳವಾದ ಬ್ಯಾಟಿಂಗ್ ಕ್ರಮಾಂಕ ಸಿದ್ಧಗೊಳಿಸುವುದು ನನ್ನ ಗುರಿಯಾಗಿತ್ತು. ಇದರಿಂದ ನನಗೆ ಹಾಯಾಗಿ ಬ್ಯಾಟಿಂಗ್ ಮಾಡಲು ಮುಕ್ತ ಅವಕಾಶ ಸಿಗುತ್ತಿತ್ತು ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌