ಆ್ಯಪ್ನಗರ

Asia Cup Final: ಈ ಕಾರಣಕ್ಕಾಗಿ ಏಷ್ಯಾ ಕಪ್ ಭಾರತವೇ ಗೆಲ್ಲಲಿದೆ!

ಧೋನಿ ಅದೃಷ್ಟದಿಂದ ಏಷ್ಯಾ ಕಪ್ ಭಾರತದ ಮಡಿಲಿಗೆ?

Times Now 28 Sep 2018, 4:59 pm
ದುಬೈ: ಯುಎಇನಲ್ಲಿ ನಡೆಯುತ್ತಿರುವ ಏಷ್ಯಾ ಕಪ್ 2018 ಕ್ರಿಕೆಟ್ ಟೂರ್ನೆಮೆಂಟ್‌ನಲ್ಲಿ ನಡೆಯುತ್ತಿರುವ ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗುತ್ತಿದೆ.
Vijaya Karnataka Web dhoni-keeping


ಆದರೆ ಅಭಿಮಾನಿಗಳ ಪ್ರಕಾರ ಈ ಒಂದು ಕಾರಣಕ್ಕಾಗಿ ಭಾರತವೇ ಏಷ್ಯಾ ಕಪ್ ಎತ್ತಿ ಹಿಡಿಯಲಿದೆಯಂತೆ! ಅದೇನು ಗೊತ್ತೇ?

ಐಸಿಸಿ ಪ್ರಮುಖ ಟೂರ್ನಿಗಳಲ್ಲಿ ಧೋನಿ ನಾಯಕನಾಗಿ ಆಡಿದಾಗ ಪಂದ್ಯ ಟೈ ಆದರೆ ಆ ನಿರ್ದಿಷ್ಟ ಟೂರ್ನಿಯನ್ನು ಭಾರತ ಗೆದ್ದಿದೆ. ಇದೀಗ ಇತಿಹಾಸ ಪುನರಾವರ್ತನೆಯಾಗಲಿದೆ ಎಂದು ಧೋನಿ ಫ್ಯಾನ್ಸ್ ನಂಬಿಕೊಂಡಿದ್ದಾರೆ.

ಇದಕ್ಕೂ ಮುನ್ನ 2007ರಲ್ಲಿ ನಡೆದ ಚೊಚ್ಚಲ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಲೀಗ್ ಹಂತದಲ್ಲಿ ಭಾರತ ಟೈ ಫಲಿತಾಂಶ ಕಂಡಿತ್ತು. ಬಳಿಕ ಫೈನಲ್‌ನಲ್ಲಿ ಮತ್ತದೇ ಪಾಕ್ ಮಣಿಸಿದ ಭಾರತ ತಂಡವು ಕಿರೀಟ ಎತ್ತಿ ಹಿಡಿದಿತ್ತು.

2011ರ ವಿಶ್ವಕಪ್‌ನಲ್ಲೂ ಪರಿಸ್ಥಿತಿ ಭಿನ್ನವಾಗಿರಲಿಲ್ಲ. ಇಂಗ್ಲೆಂಡ್ ವಿರುದ್ಧ ಮ್ಯಾಚ್ ಟೈ ಮಾಡಿಕೊಂಡಿರುವ ಭಾರತ ತಂಡವು ಬಳಿಕ ಫೈನಲ್‌ನಲ್ಲಿ ಶ್ರೀಲಂಕಾ ಮಣಿಸಿ 28 ವರ್ಷಗಳ ಬಳಿಕ ಏಕದಿನ ವಿಶ್ವಕಪ್ ಗೆದ್ದುಕೊಂಡಿತ್ತು.

ಹಾಗಾಗಿ ಪ್ರಸ್ತುತ ಸಾಗುತ್ತಿರುವ ಏಷ್ಯಾ ಕಪ್‌ನಲ್ಲೂ ಅದೃಷ್ಟ ಭಾರತಕ್ಕೆ ಒಲಿಯಲಿದೆ ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಆದರೆ ಇವೆಲ್ಲ ನನಸಾಗಲು ಫೈನಲ್‌ನಲ್ಲಿ ಧೋನಿ ನಾಯಕತ್ವ ವಹಿಸಬೇಕೋ ಬೇಡವೋ ಎಂಬುದು ಯಶ ಪ್ರಶ್ನೆ. ಧೋನಿ ತಂಡದಲ್ಲಿರುವುದು ನಿಜ. ಆದರೆ ಫೈನಲ್‌ನಲ್ಲಿ ರೋಹಿತ್ ಶರ್ಮಾ ನಾಯಕ ಎಂಬುದನ್ನು ಮರೆಯಬಾರುದು.

2017ರಲ್ಲಿ ನಾಯಕತ್ವ ಬಿಟ್ಟುಕೊಟ್ಟಿರುವ ಧೋನಿ, ಏಷ್ಯಾ ಕಪ್‌ನಲ್ಲಿ ರೋಹಿತ್ ಶರ್ಮಾ ಅಲಭ್ಯತೆಯಲ್ಲಿ ಅಫಘಾನಿಸ್ತಾನ ವಿರುದ್ಧ ದಾಖಲೆಯ 200ನೇ ಬಾರಿಗೆ ನಾಯಕತ್ವ ವಹಿಸಿದ್ದರು. ಆದರೆ ಆ ಪಂದ್ಯವು ರೋಚಕ ಟೈನಲ್ಲಿ ಅಂತ್ಯಗೊಂಡಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌