ಆ್ಯಪ್ನಗರ

ವಿ.ಬಿ.ಚಂದ್ರಶೇಖರ್‌ ವಿಧಿವಶ

ಭಾರತ ಕ್ರಿಕೆಟ್‌ ತಂಡದ ಮಾಜಿ ಆರಂಭಿಕ ಆಟಗಾರ, ರಾಷ್ಟ್ರೀಯ ಆಯ್ಕೆಗಾರ ವಿ.ಬಿ.ಚಂದ್ರಶೇಖರ್‌ ಗುರುವಾರ ಚೆನ್ನೈನಲ್ಲಿ ತೀವ್ರ ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ.

PTI 16 Aug 2019, 5:00 am
ಹೊಸದಿಲ್ಲಿ : ಭಾರತ ಕ್ರಿಕೆಟ್‌ ತಂಡದ ಮಾಜಿ ಆರಂಭಿಕ ಆಟಗಾರ, ರಾಷ್ಟ್ರೀಯ ಆಯ್ಕೆಗಾರ ವಿ.ಬಿ.ಚಂದ್ರಶೇಖರ್‌ ಗುರುವಾರ ಚೆನ್ನೈನಲ್ಲಿ ತೀವ್ರ ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ.
Vijaya Karnataka Web former batsman vb chandrasekhar dies of heart attack
ವಿ.ಬಿ.ಚಂದ್ರಶೇಖರ್‌ ವಿಧಿವಶ

ಕ್ರಿಕೆಟಿನಲ್ಲಿ ಸಕ್ರಿಯರಾಗಿದ್ದ ವೇಳೆ ಸ್ಫೋಟಕ ಆರಂಭಿಕ ಆಟಗಾರನಾಗಿ ಗುರುತಿಸಿಕೊಂಡಿದ್ದ ತಮಿಳುನಾಡು ಮೂಲದ ಎಡಗೈ ಆಟಗಾರ 58ನೇ ಹುಟ್ಟುಹಬ್ಬಕ್ಕೆ ಆರು ದಿನಗಳು ಬಾಕಿ ಇರುವಾಗ ಕೊನೆಯುಸಿರೆಳೆದಿದ್ದಾರೆ.
ವೃತ್ತಿಯಲ್ಲಿ ಎಂಜಿನಿಯರ್‌ ಆಗಿದ್ದ ಚಂದ್ರಶೇಖರ್‌ 25ನೇ ವರ್ಷದಲ್ಲಿ ಕ್ರಿಕೆಟಿಗೆ ಪದಾರ್ಪಣೆಗೈದಿದ್ದರು. 1988-1990ರ ಅವಧಿಯಲ್ಲಿ ಭಾರತದ ಪರ 7 ಏಕದಿನ ಪಂದ್ಯಗಳಲ್ಲಿ 88 ರನ್‌ ಬಾರಿಸಿದ್ದರು. ಆದರೆ, ದೇಶಿ ಕ್ರಿಕೆಟಿನಲ್ಲಿ ಕೆಲವು ಋುತುಗಳಲ್ಲಿ ಅವರದ್ದೇ ಪಾರುಪತ್ಯವಾಗಿತ್ತು. ತಮಿಳುನಾಡು ತಂಡದಲ್ಲಿ ಡಬ್ಲ್ಯು.ವಿ.ರಾಮನ್‌, ದಿವಾಕರ್‌ ವಾಸು, ಎಲ್‌.ಶಿವರಾಮಕೃಷ್ಣನ್‌ ಮತ್ತು ಭರತ್‌ ಅರುಣ್‌ ಅವರ ಸಮಕಾಲೀನರಾಗಿದ್ದ ಚಂದ್ರಶೇಖರ್‌ 81 ಪಂದ್ಯಗಳಲ್ಲಿ 4999 ರನ್‌ (237* ರನ್‌ ಗರಿಷ್ಠ) ಚಚ್ಚಿದ್ದರು. ಇರಾನಿ ಕಪ್‌ನಲ್ಲಿ ಶೇಷ ಭಾರತ ತಂಡದ ವಿರುದ್ಧ ತಮಿಳುನಾಡು ಪರ ಅವರು ಕೇವಲ 56 ಎಸೆತಗಳಲ್ಲಿ ಶತಕ ಸಿಡಿಸಿದ್ದು ತೀರಾ ಇತ್ತೀಚಿನ ತನಕ (ವೇಗದ ಶತಕ) ದಾಖಲೆಯಾಗಿ ಉಳಿದಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌