ಆ್ಯಪ್ನಗರ

ಪಿಂಚಣಿ ಹೆಚ್ಚಳಕ್ಕೆ ಮಾಜಿ ಕ್ರಿಕೆಟಿಗರ ಆಗ್ರಹ

2015ರಲ್ಲಿ ಮೊತ್ತವನ್ನು ಪರಿಷ್ಕರಿಸಲಾಗಿತ್ತು. ಆಟಗಾರರು ಇದೀಗ ಪಿಂಚಣಿ ಪರಿಷ್ಕರಣೆಯನ್ನು ಎದುರು ನೋಡುತ್ತಿದ್ದಾರೆ ಎಂದು ಖನ್ನಾ ಸಿಒಎಗೆ ಬರೆದ ಇ-ಮೇಲ್‌ನಲ್ಲಿ ವಿವರಿಸಿದ್ದಾರೆ.

PTI 1 Jun 2019, 9:54 am
ಹೊಸದಿಲ್ಲಿ: ಸಂಜಯ್‌ ಜಗದಾಳೆ, ಆಶು ದಾನಿ, ವಿನಯ್‌ ಲಿಂಬಾ ಮುಂತಾದ ಮಾಜಿ ಮೊದಲ ದರ್ಜೆ ಕ್ರಿಕೆಟಿಗರು ತಮ್ಮ ಮಾಸಿಕ ಪಿಂಚಣಿಯನ್ನು ಶೇಕಡ 50ರಷ್ಟು ಹೆಚ್ಚಿಸುವಂತೆ ಬಿಸಿಸಿಐನ ಹಂಗಾಮಿ ಅಧ್ಯಕ್ಷ ಸಿ.ಕೆ.ಖನ್ನಾಗೆ ಮನವಿ ಸಲ್ಲಿಸಿದ್ದಾರೆ. ಇದರ ಬೆನ್ನಿಗೇ, ಆಟಗಾರರ ಮನವಿಯ ಬಗ್ಗೆ ಗಮನ ಹರಿಸುವಂತೆ ಖನ್ನಾ ಆಡಳಿತಾತ್ಮಕ ಸಮಿತಿ(ಸಿಎಒ)ಗೆ ಕೋರಿಕೊಂಡಿದ್ದಾರೆ.
Vijaya Karnataka Web BCCI


''2003-04ರೊಳಗೆ ಕನಿಷ್ಠಪಕ್ಷ 25 ಮೊದಲ ದರ್ಜೆ ಪಂದ್ಯಗಳನ್ನಾಡಿರುವ ನಿವೃತ್ತ ಅಂತಾರಾಷ್ಟ್ರೀಯ ಕ್ರಿಕೆಟಿಗರು ಹಾಗೂ ದೇಶಿ ಕ್ರಿಕೆಟಿಗರ ಪಿಂಚಣಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಸಮಾಲೋಚನೆಗಳು ನಡೆದಿವೆ. 2015ರಲ್ಲಿ ಮೊತ್ತವನ್ನು ಪರಿಷ್ಕರಿಸಲಾಗಿತ್ತು. ಆಟಗಾರರು ಇದೀಗ ಪಿಂಚಣಿ ಪರಿಷ್ಕರಣೆಯನ್ನು ಎದುರು ನೋಡುತ್ತಿದ್ದಾರೆ,'' ಎಂದು ಖನ್ನಾ ಸಿಒಎಗೆ ಬರೆದ ಇ-ಮೇಲ್‌ನಲ್ಲಿ ವಿವರಿಸಿದ್ದಾರೆ.

75ಕ್ಕೂ ಹೆಚ್ಚು ಮೊದಲ ದರ್ಜೆ ಪಂದ್ಯಗಳನ್ನಾಡಿರುವ ಭಾರತೀಯ ಆಟಗಾರರು ಈಗಾಗಲೇ ಬಿಸಿಸಿಐನ 'ಒನ್‌ ಟೈಮ್‌ ಬೆನಿಫಿಟ್‌ ಸ್ಕೀಮ್‌'ನ ಲಾಭ ಪಡೆದಿದ್ದಾರೆ. ಅದಾದ ಬಳಿಕ 75ಕ್ಕಿಂತ ಕಡಿಮೆ ಪಂದ್ಯಗಳನ್ನಾಡಿರುವವರನ್ನೂ ಆ ಯೋಜನೆಗೆ ಸೇರಿಸಿಕೊಳ್ಳುವಂತೆ ನಿರಂತರ ಮನವಿಗಳು ಬರುತ್ತಲೇ ಇವೆ.

ಜಗದಾಳೆ ಮಧ್ಯಪ್ರದೇಶದ ಪರ 53 ಹಾಗೂ ದಾನಿ ಡೆಲ್ಲಿ ಪರ 49 ಮೊದಲ ದರ್ಜೆ ಪಂದ್ಯಗಳನ್ನು ಆಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌