ಆ್ಯಪ್ನಗರ

ಕುಂಬ್ಳೆಗೆ ಆಸ್ಟ್ರೇಲಿಯಾ ಆಟಗಾರರು ಸ್ಲೆಡ್ಜಿಂಗ್‌ ಮಾಡುತ್ತಿರಲಿಲ್ಲವಂತೆ!

ಭಾರತ ತಂಡದ ಮಾಜಿ ನಾಯಕ ಅನಿಲ್‌ ಕುಂಬ್ಳೆ ಆಸ್ಟ್ರೇಲಿಯಾ ತಂಡದ ಸ್ಲೆಡ್ಜಿಂಗ್‌ ಬಗ್ಗೆ ಅಚ್ಚರಿಯ ಸತ್ಯಾಂಶವೊಂದನ್ನು ಬಿಚ್ಚಿಟ್ಟಿದ್ದಾರೆ. ಆಸ್ಟ್ರೇಲಿಯಾ ತಂಡದ ಸ್ಟಾರ್‌ ಸ್ಪಿನ್ನರ್‌ ಶೇನ್‌ ವಾರ್ನ್‌ಗೆ ಸ್ನೇಹಿತರಾಗಿದ್ದಲ್ಲಿ ಆಸೀಸ್‌ ಆಟಗಾರರು ಸ್ಲೆಡ್ಜ್‌ ಮಾಡುವುದಿಲ್ಲ.

Vijaya Karnataka Web 27 Nov 2019, 4:22 pm
ಬೆಂಗಳೂರು: ಟೆಸ್ಟ್‌ ಕ್ರಿಕೆಟ್‌ನಲ್ಲಿ ಕೇವಲ ಆಷಸ್‌ ಸರಣಿಯೊಂದೇ ಅಲ್ಲ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಸರಣಿಗಳು ಕೂಡ ಅಷ್ಟೇ ಜಿದ್ದಾಜಿದ್ದಿನ ಪೈಪೋಟಿಗೆ ಸಾಕ್ಷಿಯಾಗಿದೆ. 2000ದ ದಶಕದಲ್ಲಿ ಬಲಿಷ್ಠ ತಂಡವಾಗಿ ಬೀಗುತ್ತಿದ್ದ ಕಾಂಗರೂ ಪಡೆಯ ಸೊಕ್ಕಡಗಿಸಿದ್ದು, ಸೌರವ್‌ ಗಂಗೂಲಿ ಸಾರಥ್ಯದ ಟೀಮ್‌ ಇಂಡಿಯಾ ಎಂಬುದೇ ಇದಕ್ಕೆ ಸಾಕ್ಷಿ.
Vijaya Karnataka Web anil kumble in test cricket 2019


2001ರಲ್ಲಿ ಕೋಲ್ಕತಾದ ಈಡನ್‌ ಗಾರ್ಡನ್ಸ್‌ನಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಟೆಸ್ಟ್‌ ಪಂದ್ಯದಲ್ಲಿ ಭಾರತ ಅಚ್ಚರಿಯ ಹಾಗೂ ಭರ್ಜರಿಯ ಜಯ ದಾಖಲಿಸಿತ್ತು. ಈ ರೀತಿ ಹಲವು ಬಾರಿ ಇತ್ತಂಡಗಳು ಬದ್ದ ಎದುರಾಳಿಗಳಂತೆ ಹೋರಾಟ ನಡೆಸಿವೆ. ಅಂದಹಾಗೆ ಆದಿನಗಳಲ್ಲಿ ಬ್ಯಾಟ್‌ ಮತ್ತು ಬಾಲ್‌ ಆಟದ ಜೊತೆಗೆ ಸ್ಲೆಡ್ಜಿಂಗ್‌ ಕಿತ್ತಾಟ ಕೂಡ ವಿಪರೀತ ರೀತಿಯಲ್ಲೇ ನಡೆದಿತ್ತು.

2007-08ರಲ್ಲಿ ಭಾರತದ ತಂಡದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಸ್ಲೆಡ್ಜಿಂಗ್‌ ವಾರ್‌ ಭಾರಿ ಸುದ್ದಿಯಾಗಿತ್ತು. ಆಫ್‌ ಸ್ಪಿನ್ನರ್‌ ಹರ್ಭಜನ್‌ ಸಿಂಗ್‌ ಮತ್ತು ಆಲ್‌ರೌಂಡರ್‌ ಆಂಡ್ರೂ ಸೈಮಂಡ್ಸ್‌ ನಡುವಣ ಮಂಕಿ ಗೇಟ್‌ ವಿವಾದ ಇಲ್ಲಿ ನೆನಪಿಸಿಕೊಳ್ಳಬಹುದು.

ಟೀಮ್‌ ಇಂಡಿಯಾ ವಿಕೆಟ್‌ಕೀಪರ್‌ಗೆ ಶಸ್ತ್ರಚಿಕಿತ್ಸೆ, ಡೇ-ನೈಟ್‌ ಟೆಸ್ಟ್‌ನಲ್ಲಿ ಕೈಬೆರಳಿಗೆ ಗಾಯ

ಕುಂಬ್ಳೆಗೆ ಆಸೀಸ್‌ ಆಟಗಾರರು ಸ್ಲೆಡ್ಜ್‌ ಮಾಡುತ್ತಿರಲಿಲ್ಲವಂತೆ!
ಭಾರತ ತಂಡದ ಮಾಜಿ ನಾಯಕ ಅನಿಲ್‌ ಕುಂಬ್ಳೆ ಆಸ್ಟ್ರೇಲಿಯಾ ತಂಡದ ಸ್ಲೆಡ್ಜಿಂಗ್‌ ಬಗ್ಗೆ ಅಚ್ಚರಿಯ ಸತ್ಯಾಂಶವೊಂದನ್ನು ಬಿಚ್ಚಿಟ್ಟಿದ್ದಾರೆ. ಆಸ್ಟ್ರೇಲಿಯಾ ತಂಡದ ಸ್ಟಾರ್‌ ಸ್ಪಿನ್ನರ್‌ ಶೇನ್‌ ವಾರ್ನ್‌ಗೆ ಸ್ನೇಹಿತರಾಗಿದ್ದಲ್ಲಿ ಆಸೀಸ್‌ ಆಟಗಾರರು ಸ್ಲೆಡ್ಜ್‌ ಮಾಡುವುದಿಲ್ಲ. ಕುಂಬ್ಳೆ ಮತ್ತು ವಾರ್ನ್‌ ಉತ್ತಮ ಸ್ನೇಹಿತರಾಗಿದ್ದ ಕಾರಣ ಕುಂಬ್ಳೆಗೆ ಸ್ಲೆಡ್ಜಿಂಗ್‌ನ ಬಿಸಿ ತಟ್ಟಲೇ ಇಲ್ಲವಂತೆ.

"ಆಸ್ಟ್ರೇಲಿಯಾ ಆಟಗಾರರು ನನಗೆ ಸ್ಲೆಡ್ಜ್‌ ಮಾಡಿದ್ದೇ ನೆನಪಿಲ್ಲ. ನನಗೆ ತಿಳಿದಿರುವುದು ಏನೆಂದರೆ ಶೇನ್‌ ವಾರ್ನ್‌ ನಿಮ್ಮ ಸ್ನೇಹಿತರಾಗಿದ್ದರೆ ಯಾರೂ ನಿಮ್ಮನ್ನು ಸ್ಲೆಡ್ಜ್‌ ಮಾಡುವುದಿಲ್ಲ. ನಾನು ಕೂಡ ವಾರ್ನ್‌ನ ಸ್ನೇಹಿತ. ಹೀಗಾಗಿ ನನ್ನೆದುರು ಸ್ಲೆಡ್ಜಿಂಗ್‌ ಮಾಡಲಾಗುತ್ತಿರಲಿಲ್ಲ," ಎಂದು ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡದ ನೂತನ ಕೋಚ್‌ ಕುಂಬ್ಳೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

33ನೇ ಹರೆಯಕ್ಕೆ ಕಾಲಿರಿಸಿದ ಸುರೇಶ್ ರೈನಾ; ಮಗದೊಮ್ಮೆ ಕಮ್‌ಬ್ಯಾಕ್ ಸಾಧ್ಯವೇ?

ಆಸ್ಟ್ರೇಲಿಯಾ ಫೇವರಿಟ್‌ ತಂಡ
ಇದೇ ವೇಳೆ ಉಳಿದೆಲ್ಲಾ ತಂಡಗಳಿಗಿಂತಲೂ ಆಸ್ಟ್ರೇಲಿಯಾ ಎದುರು ಬೌಲ್‌ ಮಾಡುವುದೆಂದರೆ ತಮಗೆ ಅಚ್ಚು ಮೆಚ್ಚು ಎಂದು ಜಂಬೊ ಖ್ಯಾತಿಯ ಮಾಜಿ ಲೆಗ್‌ ಸ್ಪಿನ್ನರ್‌ ಕುಂಬ್ಳೆ ಹೇಳಿಕೊಂಡಿದ್ದಾರೆ. ಆಸೀಸ್‌ ಎದುರು ಬೌಲಿಂಗ್‌ ಮಾಡುವುದು ಬಹುದೊಡ್ಡ ಸವಾಲು ಎಂದಿದ್ದಾರೆ.

ಐಪಿಎಲ್‌ ಇತಿಹಾಸದಲ್ಲಿ ದಾಖಲೆ ಬೆಲೆಗೆ ಹರಾಜಾದ ಟಾಪ್‌ 5 ಆಟಗಾರರು!

"ಒಬ್ಬ ಬೌಲರ್‌ ಆಗಿ ಎಲ್ಲ ವಿರುದ್ಧವೂ ಬೌಲಿಂಗ್‌ ನಡೆಸಬೇಕು. ಆದರೆ, ಆ ಕಾಲಕ್ಕೆ ಆಸ್ಟ್ರೇಲಿಯಾ ಅತ್ಯಂತ ಬಲಿಷ್ಠ ತಂಡವಾಗಿತ್ತು. ಹೀಗಾಗಿ ಅತ್ಯುತ್ತಮ ತಂಡದ ಎದುರು ನಮ್ಮ ನೈಜ ಸಾಮರ್ಥ್ಯ ಪ್ರದರ್ಶಿಸಲು ಉತ್ತಮ ಅವಕಾಶವಿರುತ್ತಿತ್ತು. ಇದನ್ನು ಸವಾಲನ್ನಾಗಿ ಸ್ವೀಕರಿಸಿ ಆಡುತ್ತಿದ್ದೆ. ಹೀಗಾಗಿ ಆಸ್ಟ್ರೇಲಿಯಾ ಎದುರು ಹಲವು ಪ್ರಬಲ ಸ್ಪರ್ಧೆಯನ್ನು ಎದುರಿಸಿದ್ದೇನೆ," ಎಂದು ಕುಂಬ್ಳೆ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌