ಆ್ಯಪ್ನಗರ

ಗಾಲೆ ಟೆಸ್ಟ್: ಶ್ರೀಲಂಕಾ ವಿರುದ್ಧ ಭರ್ಜರಿ ಜಯ ಸಾಧಿಸಿದ ಟೀಂ ಇಂಡಿಯಾ

ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯಾವಳಿಯಲ್ಲಿ ಟೀಂ ಇಂಡಿಯಾ 304 ರನ್‌ಗಳ ಅಂತರದಲ್ಲಿ ರೋಚಕ ಗೆಲುವು ಸಾಧಿಸಿದೆ.

Agencies 29 Jul 2017, 5:22 pm
ಗಾಲೆ: ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯಾವಳಿಯಲ್ಲಿ ಟೀಂ ಇಂಡಿಯಾ 304 ರನ್‌ಗಳ ಅಂತರದಲ್ಲಿ ರೋಚಕ ಗೆಲುವು ಸಾಧಿಸಿದೆ.
Vijaya Karnataka Web s sl day 4
ಗಾಲೆ ಟೆಸ್ಟ್: ಶ್ರೀಲಂಕಾ ವಿರುದ್ಧ ಭರ್ಜರಿ ಜಯ ಸಾಧಿಸಿದ ಟೀಂ ಇಂಡಿಯಾ


ಟೀಂ ಇಂಡಿಯಾ ನಾಯಕ ವಿರಾಟ್ ಕೋಹ್ಲಿ ಅವರು 17ನೇ ಟೆಸ್ಟ್ ಶತಕ ಬಾರಿಸುತ್ತಿದ್ದಂತೆ, ಭಾರತ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 240ಕ್ಕೆ ಡಿಕ್ಲೇರ್ ಮಾಡಿಕೊಂಡು, ಶ್ರೀಲಂಕಾ ತಂಡಕ್ಕೆ 550 ರನ್‌ಗಳ ಬೃಹತ ಗುರಿ ನೀಡಿತ್ತು.

550 ರನ್‌ಗಳ ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡಕ್ಕೆ ಶಮಿ ಆರಂಭಿಕ ಆಘಾತ ನೀಡಿದರು. 10 ಎಸೆತಗಳಲ್ಲಿ 10 ರನ್‌ಗಳಿಸಿದ್ದ ಉಪುಲ್ ತರಂಗ ಶಮಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್‌ಗೆ ಮರಳಿದರು. ಬಳಿಕ ಬಂದ ದನುಶ್ಕ ಗುಣತಿಲಕ ಅವರು 8 ಎಸೆತಗಳಲ್ಲಿ 2 ರನ್‌ ಗಳಿಸಿ, ಉಮೇಶ್ ಎಸೆತದಲ್ಲಿ ಪೂಜಾರ್ ಅವರಿಗೆ ಕ್ಯಾಚಿತ್ತು ತಂಡವನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದರು.

ಬಳಿಕ ಕುಸಲ್ ಮೆಂಡಿಸ್ 71 ಬೌಲ್‌ಗಳಲ್ಲಿ 36 ರನ್‌ ಬಾರಿಸಿ, ಜಡೇಜಾ ಎಸೆತದಲ್ಲಿ ಶಮಿಗೆ ಕ್ಯಾಚ್ ನೀಡಿದರು. ಅಂತೆಯೇ ಏಂಜೆಲೋ ಮ್ಯಾಥ್ಯೂಸ್ 10 ಎಸೆತಗಳಲ್ಲಿ 2 ರನ್‌ ಗಳಿಸಿ, ಜಡೇಜಾ ಬೌಲ್‌ನಲ್ಲಿ ಹಾರ್ದಿಕ್ ಪಾಂಡ್ಯೆಗೆ ಕ್ಯಾಚಿತ್ತು ಮರಳಿದರು.

ನಿರೋಷನ್ ಡಿಕ್ವೆಲ್ಲಾ 94 ಎಸೆತಗಳಲ್ಲಿ 67 ರನ್‌ ಗಳಿಸಿ, ಅಶ್ವಿನ್ ಎಸೆತದಲ್ಲಿ ಶಹಾಗೆ ವಿಕೆಟ್ ಒಪ್ಪಿಸಿದರು. ಪೆರೆರಾ 50 ಬೌಲ್‌ಗಳಲ್ಲಿ 21 ರನ್‌ ಗಳಿಸಿ ಅಜೇಯರಾಗಿ ಉಳಿದರು.

ಭಾರತದ ಪರ ಅಶ್ವಿನ್ ಹಾಗೂ ಜಡೇಜಾ ತಲಾ ಮೂರು ವಿಕೆಟ್ ಕಿತ್ತರೆ, ಮೊಹಮ್ಮದ್ ಶಮಿ ಹಾಗೂ ಉಮೇಶ್ ಯಾದವ್ ತಲಾ ಒಂದು ವಿಕೆಟ್ ಪಡೆದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌