ಆ್ಯಪ್ನಗರ

ಗಂಭೀರ್ ಟ್ವಿಟರ್ ಖಾತೆ ಹ್ಯಾಕ್!

ತಂತ್ರಜ್ಞಾನದಿಂದ ಎಷ್ಟು ಪ್ರಯೋಜನಗಳಿದೆಯೋ ಅಷ್ಟೇ ದುಷ್ಪರಿಣಾಮಗಳಿವೆ. ಸಾಮಾಜಿಕ ಜಾಲತಾಣ ಅದರಲ್ಲೂ ಟ್ವಿಟರ್‌ನಲ್ಲಿ ಅತಿ ಹೆಚ್ಚು ಸಕ್ರಿಯನಾಗಿರುವ ಭಾರತೀಯ ಕ್ರಿಕೆಟಿಗ ಗೌತಮ್ ಗಂಭೀರ್ ಅವರ ಟ್ವಿಟರ್ ಅಕೌಂಟ್ ಹ್ಯಾಕ್ ಮಾಡಲಾಗಿದೆ.

Times Now 23 Sep 2018, 3:10 pm
ಹೊಸದಿಲ್ಲಿ: ತಂತ್ರಜ್ಞಾನದಿಂದ ಎಷ್ಟು ಪ್ರಯೋಜನಗಳಿದೆಯೋ ಅಷ್ಟೇ ದುಷ್ಪರಿಣಾಮಗಳಿವೆ. ಸಾಮಾಜಿಕ ಜಾಲತಾಣ ಅದರಲ್ಲೂ ಟ್ವಿಟರ್‌ನಲ್ಲಿ ಅತಿ ಹೆಚ್ಚು ಸಕ್ರಿಯನಾಗಿರುವ ಭಾರತೀಯ ಕ್ರಿಕೆಟಿಗ ಗೌತಮ್ ಗಂಭೀರ್ ಅವರ ಟ್ವಿಟರ್ ಅಕೌಂಟ್ ಹ್ಯಾಕ್ ಮಾಡಲಾಗಿದೆ.
Vijaya Karnataka Web gautam-gambhir-03


ಸಮಕಾಲೀನ ವಿಷಯಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಗಂಭೀರ್ ಟ್ವಿಟರ್ ಮೂಲಕ ಹಂಚಿಕೊಳ್ಳುತ್ತಾರೆ. ಇದರಿಂದಾಗಿ ಅತಿ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ.

ಸಾಮಾಜಿಕ ಕಳಕಳಿಯ ಹಾಗೂ ಮಾನವೀಯತೆ ಹಸ್ತವನ್ನು ಗಂಭೀರ್ ಟ್ವಿಟರ್ ಮೂಲಕ ಚಾಚಿದ್ದಾರೆ. ಹಾಗಿರಬೇಕೆಂದರೆ ಸಮಾಜ ದ್ರೋಹಿಗಳು ಗಂಭೀರ್ ಟ್ವಿಟರ್ ಖಾತೆಗೆ ಕನ್ನ ಹಾಕಿದ್ದಾರೆ.

ಗಂಭೀರ್ ಟ್ವಿಟರ್ ಖಾತೆಯನ್ನು ದುರ್ಬಳಕೆ ಮಾಡಿರುವ ಹ್ಯಾಕರ್‌ಗಳು, ಮಾಜಿ ಆಟಗಾರರಾದ ಮೈಕಲ್ ಕ್ಲಾರ್ಕ್, ಆ್ಯಡಂ ಗಿಲ್‌ಕ್ರಿಸ್ಟ್, ಕುಮಾರ ಸಂಗಕ್ಕರ ಹಾಗೂ ಬಾಲಿವುಡ್ ನಟಿಗೆ ಖಾಸಗಿ ಸಂದೇಶವನ್ನು ರವಾನಿಸಿದ್ದಾರೆ.

ತಕ್ಷಣವೇ ಎಚ್ಚೆತ್ತುಕೊಂಡಿರುವ ಗಂಭೀರ್ ಎಲ್ಲ ಸಂದೇಶಗಳನ್ನು ಕಡೆಗಣಿಸುವಂತೆ ಸೂಚಿಸಿದ್ದಾರೆ. ಅಲ್ಲದೆ ಖಾಸಗಿ ವಿಷಯಗಳನ್ನು ಭದ್ರವಾಗಿಡುವಂತೆ ವಿನಂತಿ ಮಾಡಿಕೊಂಡಿದ್ದು, ಹ್ಯಾಕರ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಬೇಡಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌